🔥ಅಕ್ಕಿಯಲ್ಲಿ ಕಲ್ಲು ಆರಿಸುತ್ತಾ ಕುಳಿತ ಅವಳು ನಿಟ್ಟುಸಿರಿಟ್ಟು ಹೀಗಂದಳು
"ಅಕ್ಕಿಯಲ್ಲಿ ಕಲ್ಲಿದೆ ಆರಿಸಬೇಕು, ಬದುಕಿನಲ್ಲೂ ಕೂಡ"
***************************
🔥ಮನೆ ಹಿಂದೆ ಸೊಂಪಾಗಿ ಬೆಳೆದ ಹರಿವೆಯನ್ನು ಕಂಡು ಅವಳದೊಂದೇ ಪ್ರಶ್ನೆ
"ಸಂಬಂಧಗಳೂ ಹೀಗೆ ಯಾಕೆ ಬೆಳೆಯುತ್ತಿಲ್ಲ"
****************************
🔥ನಿನ್ನೆ ನೆನೆಸಿದ ಕಾಳು ಮೊಳಕೆಯೊಡೆದಿದೆ
ವರುಷದಿಂದ ನೆನೆಸುತ್ತಿರುವ ಪ್ರೀತಿ ಮೊಳಕೆ ಕಟ್ಟುತ್ತಿಲ್ಲ
****************************
🔥ಅಮ್ಮ ಹೇಳಿಕೊಟ್ಟ ಪಾಠ
ಹಾಲಿಗೆ ಹುಳಿ ಹಿಂಡಿದರೆ ಮೊಸರಾಗುತ್ತದೆ
ಸಂಬಂಧಕ್ಕೆ ಹುಳಿ ಹಿಂಡಿದರೆ ಕೆಸರಾಗುತ್ತದೆ
****************************
🔥ಅಡುಗೆ ಮನೆಯ ಅನುಭವ
ಸಿಹಿ ಇರದ ಪಾಯಸ
ಪ್ರೀತಿ ಇರದ ಸಂಬಂಧ
ಎರಡೂ ರುಚಿಸದು
****************************
🖋ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.