🔥 ಗೊಣಗುತ್ತಾ ಊಟ ಮಾಡಿದ್ದ ಅಪ್ಪ
"ಸಾರಿಗೆ ಯಾಕೆ ಉಪ್ಪು ಜಾಸ್ತಿ ಇವತ್ತು"
ಗೊತ್ತಾಗಲೇ ಇಲ್ಲ ಅಪ್ಪನಿಗೆ
ಸಾರಲ್ಲಿ ಅಮ್ಮನ ಕಣ್ಣೀರ ಹನಿ ಇತ್ತು
****************************
🔥ಯಾಕೆ ಕುಕ್ಕರ್ ಪಾತ್ರೆಯೇ ಒಳಗಿನ ಒತ್ತಡಕ್ಕೆ
ಊರೆಲ್ಲಾ ಕೇಳುವಂತೆ ಕೂಗುತ್ತಿರುವೆ
ನನ್ನ ನೋಡು
ನನ್ನೊಳಗೂ ಒತ್ತಡಗಳಿವೆ
ಯಾರಿಗೂ ತಿಳಿಯದಂತೆ ಕೊರಗುತ್ತಿರುವೆ
****************************
🔥ಶುಚಿಗೊಳಿಸಿದ ಅಕ್ಕಿ ಪ್ಯಾಕೇಟನ್ನು ಮಾಲ್ ನಿಂದ ತಂದ ಮಗಳೆಂದಳು
"ನೋಡು ಅಮ್ಮ ನಿನ್ನ ಕಾಲದಂತೆ ಕಲ್ಲು ಆರಿಸುವ ಕಿರಿಕಿರಿ ಈಗಿಲ್ಲ"
ಅಮ್ಮ ಎಂದಳು
"ಕಲ್ಲು ಆರಿಸುವ ನೆಪದಲ್ಲಿ ನನ್ನೊಂದಿಗೆ ನಾ ಮಾತಾಡುವ ಅವಕಾಶ ಈಗಿಲ್ಲ"
****************************
🔥ಅಮ್ಮ ಹೇಳಿಕೊಟ್ಟ ಪಾಠ
ಹಾಲು ಮತ್ತು ಪ್ರೀತಿ ಎರಡನ್ನೂ ಉಕ್ಕುವಷ್ಟು ಹೊತ್ತು ಕಾಯಿಸಬೇಕು
****************************
🔥ಅಡುಗೆಮನೆಯ ಸಾಸಿವೆ ಡಬ್ಬದಲ್ಲಿ ಬಂಧಿಸಿದ ಅಮ್ಮನ ನೋಟಿಗೆ
ಅಪ್ಪನ ಸಾರಾಯಿ ಸಹವಾಸದಿಂದ ಸ್ವಾತಂತ್ರ್ಯ
***************************
🖋 *ಯೋಗೀಶ್ ಮಲ್ಲಿಗೆಮಾಡು*
No comments:
Post a Comment
Note: only a member of this blog may post a comment.