Saturday, 22 April 2017

ಬೇಸಗೆಯಲೊಂದು ಪತ್ರ

ಬಿರು ಬೇಸಗೆಯಾದರೇನು....?
ಸಂಜೆಗೊಂದು ಸೊಬಗಿದೆ
ಗೂಡಂಗಡಿಯ ಹಬೆಯಾಡುವ ಚಹಕ್ಕೊಂದು ಘಮವಿದೆ....
ಹಕ್ಕಿಹಾಡಿನಷ್ಟೇ ಮಧುರವಾಗಿ ಬೀಸಿದ ಗಾಳಿಗೆ ನಿನ್ನ ನೆನಪಾಯಿತು ಮತ್ತೆ.....
ಅರಳಿ ನಿಂತ ಗುಲ್ ಮೊಹರ್ ಮರದ ತುಂಬಾ ಕೆಂಪು ಹೂಗಳು...
ನೀನಿದ್ದಿದ್ದರೆ ಆ ಮರದಡಿಯಲ್ಲಿ ಮಾತಿಲ್ಲದೆ ಕೂತೆದ್ದು ಬರಬಹುದಿತ್ತು,
ನಮ್ಮೆಲ್ಲಾ ಮಾತುಗಳನ್ನು ಆ ಹೂವುಗಳೇ ಆಡುತ್ತಿದ್ದವು.....
ಯಾವ ಗಾಳಿಗೆ ಯಾವ ಹಕ್ಕಿಯ ಹಾಡು ತೇಲಿ ಬಂತೊ,
ನಿನ್ನ ನೆನಪನುಕ್ಕಿಸುವಂತೆ...
ಬೇಸಗೆಯ ಧಗೆ ಏಳುತ್ತಿದ್ದರೂ ನಿನ್ನ ಕೈ ಬೆರಳು ತಂಪ ಹನಿಸದೆ ಇರುತ್ತಿದ್ದವೆ?
ಮಳೆಗೆ ಕಾತರಿಸುತ್ತಿದೆ ಇಳೆ,
ನಿನಗಾಗಿ ಕಾಯುತ್ತಿರುವಂತೆ ನಾನು!!
ಬೇಸಗೆಗೆ ಬರಲಿಲ್ಲ, ಮಳೆಗಾದರೂ ಬರುವೆಯೇನೋ ಕಾದಿರುವೆ....

No comments:

Post a Comment

Note: only a member of this blog may post a comment.