Monday, 24 April 2017

*ಚಳಿಗಾಲದ ಕವನಗಳು*

*ಸುರಿವ ಮಂಜಿನ ಹಾಡು
ಹೊದ್ದು ಮಲಗಿದ ಊರ ಬೀಡು
ಅವರವರಿಗೆ ಅವರದೇ ಪಾಡು
****************************

*ಹಬೆಯಾಡುವ ಚಹದೆದುರು
ಹಲ್ಲು ಕಟಕಟಿಸುವ ಚಳಿ ಸೋತಿತು
****************************

ಹೊರಗೆ ಮಂಜು ಸುರಿವ ಚಳಿ,
ಒಳಗೆ ಹಕ್ಕಿ ಗೂಡ ಬಿಸುಪು,
ಒಡೆದ ಕಿಟಕಿ ಗಾಜಿನೊಳಗೆ
ಸಣ್ಣಗೆ ಸುಳಿದ ಶೀತಗಾಳಿಗೆ
ಮೈಯೆಲ್ಲಾ ಮಾಘ ಮಾಸ!!
****************************

ಚಳಿಗೂ ಚಳಿ ಹಿಡಿಯುವ ಚಳಿಯಲ್ಲಿ
ಉರಿವ ಬೆಂಕಿಯೂ ಮಂಜುಗಡ್ಡೆ......!!
****************************

ಬದುಕೆಂದರೆ....................?

ಮಂಜುಕವಿದ ದಾರಿಯ
ಕೊನೆಯಲ್ಲಿ ಕಂಡ
ಅಸ್ಷಷ್ಟ ಚಿತ್ರ
****************************

ಚಳಿಯೇ ಸ್ಪಲ್ಪ ತಾಳು,
ನನ್ನವನ ಎದೆಯ ಧಗೆಯಲ್ಲಿ
ಚಳಿ ಕಾಯಿಸಬೇಕಿದೆ
****************************
ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.