Monday, 24 April 2017

*ಚಳಿಗೊಂದು ವಿದಾಯ*

ಹೊರಟು ನಿಂತ ಶಿಶಿರನೇ,
ಮಾಘ ಫಾಲ್ಗುನದಲ್ಲಿ ನೀನಿತ್ತ ಚಳಿಗೆ ಮೈ ಮನಸು ತಂಪು ತಂಪು

ನೀ ಬೀಸಿದ ಶೀತ ಗಾಳಿಗೆ ಹಬೆಯಾಡುವ ಚಹ ಸಾಥ್ ಕೊಟ್ಟಿತ್ತು
ಈಗ ಗಾಳಿಯೇ ಹಬೆಯಾಡುತ್ತಿದೆ

ನೀ ತಂದ ಮುಂಜಾವಿಗೆ ಮೈ ಕೊರೆವ ಚಳಿಯಿತ್ತು
ಈಗ ಬೆವೆತು ತೊಪ್ಪೆಯಾಗುವ ಸೆಖೆ

ನಿನ್ನ ಮುತ್ತು ಹೂಜಾಜಿಯ ಮೇಲೆ ಮಂಜು ಹನಿಯಾಗಿ ಹೊಳೆಯುತ್ತಿತ್ತು
ಈಗ ಹೂಜಾಜಿಯ ಗಿಡ ನೀರಿಲ್ಲದೆ ಬಾಡುಬತ್ತಿ

ಧಗೆ ಏರುತ್ತಿದೆ ಬೆಳ್ಳಂಬೆಳಗೆ ಈಗ
ಮೈಮೇಲೆ ಇಬ್ಬನಿಯಲ್ಲ ಬೆವರ ಪಸೆ

ಸುಡುವ ಸೂರ್ಯನ ಭರದಲಿ ಚಳಿ ಸುಮ್ಮನಾಯಿತು ಅದು ಗೊತ್ತು
ಹೋಗಿ ಬಾ ಶಿಶಿರ ಮತ್ತೆ ನಮಗಾಗಿ ಚಳಿ ಹೊತ್ತು

ರಚನೆ: ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.