ಮಳೆ ಸುರಿದ ರಾತ್ರಿ
ಮಣ್ಣ ಘಮ ಹರಡಿದ ಹೊತ್ತು
ನೀನು ನೆನಪಾಗಿದ್ದೆ...
ಹೊರಗೆ ಧೋ ಸುರಿವ ಮಳೆ
ಒಳಗೆ ನಿನ್ನ ನೆನಪಿನ ಸುರಿಮಳೆ
ನೀನು ನೆನಪಾಗಿದ್ದೆ...
ಸುಳಿವ ಗಾಳಿಯ ತಂಪು ಏರುತ್ತಿತ್ತು
ಮೈಗೆ ಮೈ ಹಚ್ಚಿ ಕೂರಲು ನೀನಿರಲಿಲ್ಲ
ನೀನು ನೆನಪಾಗಿದ್ದೆ...
ಗುಡುಗು ಸದ್ದಿಗೆ ನಿನ್ನೆದೆಯಲ್ಲಿ ಹುದುಗುತ್ತಿದ್ದೆ ನಾನು
ಇಂದು ಗುಡುಗಿಗೂ ನೀನಿಲ್ಲವೆಂಬ ಬೇಸರವೇನೊ
ನೀನು ನೆನಪಾಗಿದ್ದೆ...
ಕಣ್ಣೀರ ಸುರಿಸಿ ಅತ್ತಿದ್ದೆ ಆ ರಾತ್ರಿ
ನನ್ನ ಕಣ್ಣೀರಿಗೆ ಗಾಳಿ ಮಳೆಗಳ ಹಿಮ್ಮೇಳ
ಮಳೆ ಸುರಿದ ರಾತ್ರಿ
ಮಣ್ಣ ಘಮ ಹರಡಿದ ಹೊತ್ತು
ನೀನು ನೆನಪಾಗಿದ್ದೆ...
ಯೋಗೀಶ್ ಮಲ್ಲಿಗೆಮಾಡು