Friday, 29 September 2017

ತನ್ನೊ ದುರ್ಗಾ ಪ್ರಚೋದಯಾತ್

ಇಲ್ಲಿಗೆ ನವದುರ್ಗೆಯರ *ಅವತಾರಗಳ ವಿಶ್ಲೇಷಣೆಗೆ* ವಿರಾಮ ಹೇಳುತ್ತಾ.....
ಹೀಗೆ ನವರಾತ್ರಿಯಲ್ಲಿ ನವದುರ್ಗೆಯರ *ಸ್ಮರಣೆ, ಪಠನೆ, ಸಂಕೀರ್ತನೆಗಳಿಂದ* ಬದುಕಿನ ಜಂಜಡಗಳನ್ನು ದಾಟಿ ಬರುವುದೇ *ವಿಜಯ.* ತಸ್ಮಾತ್ *ವಿಜಯದಶಮಿ* ಪ್ರಮುಖವಾಗುತ್ತದೆ. ನವರಾತ್ರಿ ಕಳೆದು ಹತ್ತನೇ ದಿನ  ಆಚರಿಸುವ ವಿಜಯದಶಮಿ, *ದೇಹ ಮತ್ತು ಮನಸ್ಸಿನ ಮೇಲೆ ಹಿಡಿತ ಸಾಧಿಸಿ ವಿಜಯವನ್ನು ಗಳಿಸುವ ಸಂದೇಶವನ್ನು ನೀಡುತ್ತದೆ...*

*"ದುರ್ಗಾ ದುರ್ಗತಿ ನಾಶಿನಿ"* ಅರ್ಥಾತ್ ದುರ್ಗತಿಯನ್ನು ನಾಶ ಮಾಡುವವಳು ದುರ್ಗೆ ⚔. *ದುರ್ಗಾ* ಎಂದರೆ *ಕೋಟೆ,* *ರಕ್ಷಣೆ* ಎನ್ನುವ ಅರ್ಥವೂ ಇದೆ. ಅಂದರೆ ಎಲ್ಲಾ ರೀತಿಯ ಕಷ್ಟಗಳಲ್ಲಿ ತಾಯಿ ದುರ್ಗೆಯ ಸ್ಮರಣೆ ಮಾಡಿದರೆ ಆಕೆ ಕೋಟೆಯಂತೆ ನಿಂತು ನಮ್ಮನ್ನು ರಕ್ಷಣೆ ಮಾಡುತ್ತಾಳೆ ಅನ್ನುವುದೊಂದು ನಂಬಿಕೆ....

ನವರಾತ್ರಿಯು ಒಂಭತ್ತು 9ರಾತ್ರಿಗಳನ್ನು ಪ್ರತಿನಿಧಿಸುತ್ತವೆ. *ರಾತ್ರಿ* ಅಂದರೆ *ಕತ್ತಲು,* *ಕತ್ತಲು* ಎಂದರೆ *ನಕಾರಾತ್ಮಕತೆ* (negativity).... ನಮ್ಮ ದೇಹದ ನವದ್ವಾರದ ಮೂಲಕ ಬರುವ *ಕಾಮ, ಕ್ರೋಧ,ಮೋಹ, ಲೋಭ, ಮದ, ಮತ್ಸರವನ್ನು*  ನಾಶ ಮಾಡುವ ಸಂದೇಶ ನೀಡುತ್ತದೆ.

ದೇಹದ *ಸಪ್ತ ಚಕ್ರಗಳನ್ನು*ಈ ನವದುರ್ಗೆಯರು ಪ್ರತಿನಿಧಿಸಿ ಚಕ್ರಗಳನ್ನು ಜಾಗ್ರತಗೊಳಿಸಿ, ಪರಿಶುದ್ಧತೆಯಲ್ಲಿ ಸಿದ್ಧಿಗಳಿಸುವ ಸಂದೇಶವನ್ನು ನೀಡುತ್ತಾರೆ.

ದೇವಿಯ ಬಗೆ ಬಗೆಯ ರೂಪಗಳು
*ಪ್ರಕ್ರತಿ ಆರಾಧನೆ (ಶೈಲ ಪುತ್ರಿ)*
*ಜ್ಞಾನಾರ್ಜನೆ (ಬ್ರಹ್ಮಚಾರಿಣಿ)*
*ನಕಾರಾತ್ಮಕತೆಯ ನಾಶದಿಂದ ಮನಃಕ್ಲೇಶ ನಿವಾರಣೆ (ಚಂದ್ರಘಂಟ)*
*ನಗು ನಲಿವಿನಿಂದ ಸಕಾರಾತ್ಮಕ ಪ್ರಭೆ (ಕೂಷ್ಮಾಂಡ)*
*ಮಾತ್ರ್ ವಾತ್ಸಲ್ಯ ಕರುಣೆ (ಸ್ಕಂದ ಮಾತಾ)*
*ವಿಷಯಸುಖಗಳ ಮೇಲಿನ ಹಿಡಿತ (ಕಾತ್ಯಾಯಿನಿ)*
*ದುಷ್ಟತೆಗಳ ನಾಶ ಸತ್ಯ ನ್ಯಾಯ ಧರ್ಮಗಳ ಪಾಲನೆ (ಕಾಲರಾತ್ರಿ)*
*ಶಾಂತಿಯೊಂದಿಗೆ ಬದುಕಿನ ಪರಿಶುದ್ಧತೆ (ಮಹಾಗೌರಿ)*
*ಸಾರ್ಥಕ್ಯದ ಬದುಕಿನೊಂದಿಗೆ ಸಿದ್ಧಿ (ಸಿದ್ಧಿಧಾತ್ರಿ)*
ಬದುಕಿಗೆ ಪಾಠವೇ ಆಗಿದೆ.

*ಶಮಿ ಶಮಯತೆ ಪಾಪಂ, ಶಮಿ ಶತ್ರು ವಿನಾಶಿನಿ| ಅರ್ಜುನಸ್ಯ ಧನುರ್ಧಾರಿ,  ರಾಮಸ್ಯ ಪ್ರಿಯದರ್ಶಿನಿ||

*ಶಮಿ (ಬನ್ನಿ)* ಮರ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಿದ್ದಾರೆ.. *ಬನ್ನಿಯ ಎಲೆ ಬಂಗಾರಕ್ಕೆ ಸಮ ಅಂತಾರೆ....* ಆದುದರಿಂದ ಇದರ ಎಲೆ ಕೊಟ್ಟು *" ಬನ್ನಿ ತಗೊಂಡು ಬಂಗಾರದ ಹಾಗೆ ಇರೋಣ"* ಅಂತ ಹೇಳಿ ಹಳೆ ಕೋಪ ಮನಸ್ತಾಪ ಮರೆತು ಮತ್ತೆ ಬೆರೆತು ಬಾಳುತ್ತಾರೆ.

ಈ ಒಂಭತ್ತು ದಿನಗಳ ವಿಶ್ಲೇಷಣೆಯು ನಮ್ಮೊಳಗಿನ *ಮಾನವತ್ವವನ್ನು* *ದೈವಿಕತ್ವದೆಡೆ* ಕೊಂಡೊಯ್ಯಲಿ ತನ್ಮೂಲಕ *"ಅಹಂ ಬ್ರಹ್ಮಾಸ್ಮಿ"*ಎನ್ನುವ ಕಲ್ಪನೆ ಮೂಡಲಿ ಎಂದು ಆಶಿಸುತ್ತಾ, ವಿಜಯದಶಮಿ ಶುಭಾಶಯಗಳು ಧನ್ಯವಾದಗಳು

ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು

Thursday, 28 September 2017

ಸಿದ್ಧಿಧಾತ್ರಿ

ನವರಾತ್ರಿಯು ಹಲವು ರೂಪಗಳ ಮೂಲಕ ಮಾನವರಿಗೆ ಅಗತ್ಯ ಸಂದೇಶಗಳನ್ನು ನೀಡಿ ತನ್ಮೂಲಕ ಬದುಕನ್ನು ಹೆಚ್ಚು *ಸಮರ್ಥವಾಗಿ ಬದುಕುವ ದಾರಿಯನ್ನು ತೋರುತ್ತವೆ.* ಆ ಮೂಲಕ ಬಗೆಬಗೆಯ *ಸಿದ್ಧಿಗಳನ್ನೂ ಕರುಣಿಸುವ ಮಹಾಪರ್ವ ನವರಾತ್ರಿ.*

ನವರಾತ್ರಿಯ ಒಂಭತ್ತನೆ 9ದಿನ ಪೂಜಿಸಲ್ಪಡುವವಳು *ಸಿದ್ಧಿಧಾತ್ರಿ* 🙏:

ಹೆಸರೇ ಸೂಚಿಸುವಂತೆ *ಸಿದ್ಧಿಧಾತ್ರಿ*ಬಗೆ ಬಗೆಯ ಸಿದ್ಧಿಗಳನ್ನು 🙌 ನೀಡುವವಳು.
*ಅಷ್ಟಸಿದ್ಧಿಗಳಾದ "ಅನಿಮ, ಮಹಿಮ, ಗರಿಮ, ಲಘಿಮ, ಪ್ರಾಪ್ತಿ, ಪ್ರಾಖ್ಯಮ್ಯ, ಇಷಿತ್ವ, ವಷಿತ್ವ"* ಇವುಗಳನ್ನು ನೀಡುತ್ತಾಳೆ ಎಂದೂ ಉಲ್ಲೇಖಿಸಿದೆ....

ಶಿವನು 👤ಈಕೆಯನ್ನು ಪೂಜಿಸಿ 🙏ಸಿದ್ಧಿಯನ್ನು ಪಡೆದನು ಎಂದು ಉಲ್ಲೇಖಿಸಿದೆ.... ಶಕ್ತಿಯನ್ನು ಒಲಿಸಿದ ಶಿವ *ಅರ್ಧನಾರೀಶ್ವರನಾದ*👫.... ಗಂಡು ಹೆಣ್ಣು ಒಂದೇ ಎಂದು ಸಾರಿದ್ದು *ಅರ್ಧನಾರೀಶ್ವರ ತತ್ವ...*

ಈಕೆ ಕಮಲದ 🌷ಮೇಲೆ ಕುಳಿತಿದ್ದು *ಶಂಖ, ಚಕ್ರ, ಗಧಾ, ಪದ್ಮ ಧಾರಣೆ ಮಾಡಿದ್ದಾಳೆ...*

*ಗಂಧರ್ವ, ಯಕ್ಷ, ಸಿದ್ಧ, ಅಸುರ, ದೇವತೆಗಳೆಲ್ಲರೂ* ಈಕೆಯನ್ನು ಪೂಜಿಸುತ್ತಾರೆ ಎಂದು ಉಲ್ಲೇಖಿಸಿದೆ.....

*ತಂತ್ರ ಮಾಡುವವರು, ಸಾಧಕರು, ಯೋಗಿಗಳು* ಈಕೆಯ ಪೂಜೆಯನ್ನು ಮಾಡಿ ಸಿದ್ಧಿಗಳಿಸುತ್ತಾರೆ ಎಂಬ ಪ್ರತೀತಿ ಇದೆ...

ಎಲ್ಲಾ ಚಕ್ರ ಜಾಗ್ರತವಾದ ಮೇಲೆ ಮನುಷ್ಯ *ಮಹಾಗೌರಿಯಂತೆ* ಪರಿಶುದ್ಧನಾದ ಮೇಲೆ ಎಲ್ಲಾ ರೀತಿಯ *ಸಿದ್ಧಿಯನು ಹೊಂದಬಹುದು...* ತಥಾ ಸಿದ್ಧಿದಾತ್ರಿ ಸಿದ್ಧಿಯನ್ನ ತನ್ಮೂಲಕ ಕರುಣಿಸುತ್ತಾಳೆ....

*ಸಿದ್ಧಗಂಧರ್ವ ಯಕ್ಷದೈರಸುರೈರಮರೈರಪಿ| ಸೇವ್ಯಮಾನಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನಿ||*
ಸಿದ್ಧಿದಾತ್ರಿ ಸಕಲ ಸಿದ್ಧಿಯನ್ನು  ಕರುಣಿಸಲಿ

*ಆಯುಧಪೂಜೆಯನ್ನೂ* 🔫🔪🔨💉📺📠💻🚴🏇 ಇದೆ ದಿನ ನೆರವೇರಿಸಲಾಗುತ್ತದೆ... *ಪಾಂಡವರು* ಇದೆ ದಿನ *ವನವಾಸದಿಂದ ವಾಪಾಸಾಗಿ ತಮ್ಮ ಶಸ್ತ್ರಗಳನ್ನು ತಾವು ಬಚ್ಚಿಟ್ಟ ಶಮಿ (ಬನ್ನಿ)🌿 ಮರದಿಂದ ತಗೆದು ಅದಕ್ಕೆ ಪೂಜೆಯನ್ನು ಸಲ್ಲಿಸಿದರು ಎಂಬ ಪ್ರತೀತಿ ಇದೆ....*

ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು

Wednesday, 27 September 2017

ಮಹಾಗೌರಿ

ನವರಾತ್ರಿಯು ಕಲ್ಮಶಗಳನ್ನು ಕಳೆದು *ಪರಿಶುದ್ಧತೆಯನ್ನು ಧಾರಣೆಮಾಡುವ ಸಂಕೇತವನ್ನು ನೀಡುತ್ತದೆ.* ತಸ್ಮಾತ್ ನವರಾತ್ರಿಯು *ಕೆಡುಕಿನ ಮೇಲಿನ ಒಳಿತಿನ ಗೆಲುವಾಗಿದೆ.*

ನವರಾತ್ರಿಯ ಎಂಟನೇ 8ದಿನ ಪೂಜಿಸಲ್ಪಡುವವಳು *"ಮಹಾಗೌರಿ"* 👰🏻:

*ಗೌರಿ* 👰🏻 ಎಂದರೆ *ಬಿಳಿ* ⚪ಎನ್ನುವ ಅರ್ಥ ನೀಡುತ್ತದೆ. ಮಹಾಗೌರಿಯು ಬಿಳಿಯ ಮೈಬಣ್ಣ ಹೊಂದಿದ್ದು *ಶ್ವೇತ ವಸನ* ಧಾರಿಯಾಗಿ ಆಕೆಯನ್ನು ಉಲ್ಲೇಖಿಸಿದೆ. ಅಚ್ಚ ಬಿಳುಪಿನ ಶುಭ್ರವರ್ಣವಾಗಿ ಕಂಡು ಬರುವ ಈಕೆಯ *ಶುಭ್ರತೆಯನ್ನು ಶಂಖ ಅಥವಾ ಚಂದ್ರನಿಗೆ 🌝 ಸಮೀಕರಿಸಿದೆ....*

ಶಿವನಿಗಾಗಿ 👤ತಪಸ್ಸನ್ನು ಮಾಡಿದ *ಬ್ರಹ್ಮಚಾರಿಣಿಯು*👱🏻‍♀ ಗಾಳಿ, ಮಳೆ, ಬಿಸಿಲಿಗೆ ಕಪ್ಪಗಾಗಿ  ಶಿವನೊಲಿದು ಆಕೆಯನ್ನು *ಕಾಲಿ* ಎಂದು ಛೇಡಿಸಿದ ಎಂಬ ವಿಚಾರವನ್ನು ಹಿಂದಿನ ರೂಪದಲ್ಲಿ ಕೇಳಿದ್ದೆವು....  ಮುಂದುವರೆದು *ಶಿವನು ಆಕೆಯನ್ನು ಗಂಗಾ ನದಿಯಲ್ಲಿ 🌊🌊 ಸ್ನಾನ ಮಾಡಿಸಿದಾಗ ಆಕೆಯ ಕಪ್ಪು ವರ್ಣ ⚫ತೊಳೆದು ಶುಭ್ರವಾದಳು ⚪ ಎಂಬ ಪ್ರತೀತಿ ಇದೆ....* ಅರ್ಥಾತ್ *ಮನಸ್ಸಿನ 🙇 ಆಂತರ್ಯದಲ್ಲಿರುವ ಕೊಳೆ, ಕಲ್ಮಶಗಳನು ಜ್ಞಾನ ಗಂಗೆಯಿಂದ 📚🌊🌊 ತೊಳೆದಾಗ ಬದುಕು ಶುಭ್ರವಾಗುತ್ತದೆ....* ತಥಾ ಮಹಾಗೌರಿಯ ಸ್ಮರಣೆ ಬದುಕನ್ನು ಶುಭ್ರಗೊಳಿಸಿ ಬೆಳಗುತ್ತದೆ....

ಮಹಾಗೌರಿಯು *ನಂದಿ*ಯನ್ನು 🐄ವಾಹನವಾಗಿ ಹೊಂದಿದ್ದು... *ಚತುರ್ಭುಜ* ಹೊಂದಿದ್ದಾಳೆ... *ತ್ರಿಶೂಲ ಮತ್ತು ಢಮರು ಹಾಗೂ ಅಭಯಮುದ್ರೆಯನ್ನು  ಧರಿಸಿದ್ದಾಳೆ....*

ಈಕೆಯದು *ಸಾತ್ವಿಕ ರೂಪ.* ಶಾಂತಿ, ಪಾವಿತ್ರ್ಯ, ಪರಿಶುದ್ಧತೆ,  ಸಮ್ರದ್ಧಿಯನ್ನು ಈಕೆ ಕರುಣಿಸುತ್ತಾಳೆ.... ಈಕೆಯನ್ನು *"ಶ್ವೇತಾಂಬರಧರಾ"* ಎಂದೂ ಈಕೆಯನ್ನು ಕರೆಯುತ್ತಾರೆ....

*ಯೋಗದಲ್ಲಿ ಈಕೆ ಯಾವುದೇ ಚಕ್ರವನ್ನು ಪ್ರತಿನಿಧಿಸುವುದಿಲ್ಲ🐍* ಅರ್ಥಾತ್ ಏಳು ಚಕ್ರಗಳು ಕಾಲರಾತ್ರಿ ಅವತಾರದೊಂದಿಗೆ ಸಮಾಪನವಾಗುತ್ತದೆ. ಅಂದರೆ ಯಾವಾಗ ಈ ಏಳೂ  ಚಕ್ರಗಳು ಮನುಷ್ಯನಲ್ಲಿ ಜಾಗ್ರತವಾಗುತ್ತದೊ ಆವಾಗ ಮನುಷ್ಯ ಪರಿಶುದ್ಧನಾಗುತ್ತಾನೆ. ಆಂತರಿಕವಾಗಿ ಕಲ್ಮಶಗಳು ಜ್ಞಾನಗಂಗೆಯಲಿ ತೊಳೆದು ಮಹಾಗೌರಿಯಂತ ಸಾತ್ವಿಕ ಶುಭ್ರರೂಪು ಧಾರಣೆಯಾಗುತ್ತದೆ... ತಥಾ ಮಹಾಗೌರಿಯ ಆರಾಧನೆ ಮುಖ್ಯವಾಗುತ್ತದೆ....

*ಶ್ವೇತೆ ವ್ರಷೆ ಸಮಾರೂಢ ಶ್ವೇತಾಂಬರಧರ ಶುಚಿ| ಮಹಾಗೌರಿ ಶುಭಂ ದಧ್ಯಂತ್ರ ಮಹಾದೇವ ಪ್ರಮೋದಾದ||*
ಎಂದು ಪಠಿಸಿ ಫಲವನ್ನು ಪಡೆಯಬಹುದು

ಪರಿಕಲ್ಪನೆ:  "ಯೋಗೀಶ್ ಮಲ್ಲಿಗೆಮಾಡು"

Tuesday, 26 September 2017

ಕಾಲರಾತ್ರಿ

9 ದಿನಗಳ ನವರಾತ್ರಿಯು ಮೂರು ಮೂರು ದಿನಗಳಾಗಿ *ಸರಸ್ವತಿ, ಲಕ್ಷ್ಮೀ ಮತ್ತು ಪಾರ್ವತಿಯ ರೂಪಗಳನ್ನು ಪ್ರತಿನಿಧಿಸುತ್ತದೆ.* ತಥಾ *ಸಾತ್ವಿಕ, ರಾಜಸ ಮತ್ತು ತಾಮಸ ತತ್ವಗಳನ್ನು ನವರೂಪಗಳು ಸಂಕೇತಿಸುತ್ತವೆ.* ಕಾಲರಾತ್ರಿಯು ತಾಮಸತತ್ವವನ್ನು ಸಂಕೇತಿಸುತ್ತಾ ದುಷ್ಟ ನಾಶದ ಸಂದೇಶ ನೀಡುತ್ತದೆ.

ನವರಾತ್ರಿಯ ಏಳನೇ 7ದಿನ ಪೂಜಿಸಲ್ಪಡುವವಳು *"ಕಾಲರಾತ್ರಿ"* 🕘🌌:

*"ಕಾಲಿ"* ಅಥವಾ *"ಕಾಳಿ"* *"ಕಾಲ"* 🕘 ಎಂಬ ಶಬ್ಧದಿಂದ ಉದಿಸಿದ ಶಬ್ಧವಾಗಿದೆ. ಕಾಲ ಅಂದರೆ ಇಲ್ಲಿ *ಸಮಯ 🕓* ಅಥವಾ *ಮೃತ್ಯು 💀* ಎಂದು ಪರಿಗಣಿಸಬಹುದು... *ಕಾಲರಾತ್ರಿ ಎಂದರೆ ಕಾಲ ಅರ್ಥಾತ್ ಸಮಯ 🕘ಅಥವಾ ಸಾವಿಗೆ💀 ಅಂತ್ಯವನ್ನು  🔚ಕರುಣಿಸುವವಳು ಎಂದು ಸಂಕೇತಿಸುತ್ತದೆ.* ಕಾಲಿ ಎಂಬ ಶಬ್ಧಕ್ಕೆ ಕಪ್ಪು ⬛ ಎಂಬ ಅರ್ಥವೂ ಇದೆ.... *ಕಪ್ಪು ಅತ್ಯಂತ ಗೂಢವೂ, ನಿಗೂಢವೂ ಆಗಿದೆ.* ಕಾಲರಾತ್ರಿಯು ಅಂತ್ಯಕ್ಕೆ ಅಂತ್ಯ ಕರುಣಿಸುವವಳಾಗಿ ಆಕೆ ಯಾರಿಗೂ ಅರ್ಥವಾಗದ ಗೂಢತೆಯೊಂದಿಗೆ ಕಪ್ಪು ಬಣ್ಣವನ್ನು ಸಮೀಕರಿಸಿರುವುದು ಸಮಂಜಸವೇ ಆಗಿದೆ.

ಶಬ್ಧಕಲ್ಪಧ್ರುಮದಲ್ಲಿ ಕಾಲಿಯನ್ನು *"ಕಾಲಃ ಶಿವಃ ತಸ್ಯ ಪತ್ನೇತಿ ಕಾಲಿ"* ಎಂದು ಉಲ್ಲೇಖಿಸಿದೆ. ಅರ್ಥಾತ್ ಕಾಲನಾದ ಶಿವನ ಪತ್ನಿ ಕಾಲಿ... *ಕಾಲನಿಗೂ ಕಾಲವಾದವಳು...*

ರಕ್ತಬೀಜಾಸುರ 👽, ಎಲ್ಲಿ ಆತನ ರಕ್ತ ಬೀಳುತ್ತದೊ ಅಲ್ಲಿ ಮತ್ತೊಬ್ಬ ರಕ್ತಬೀಜಾಸುರ ಹುಟ್ಟುವಂತಹ ವರವನ್ನು ಪಡೆದಿದ್ದನು....ಆತನ ವಧೆ ದುಸ್ಸಾಧ್ಯವಾದಾಗ ಮಹಾಕಾಲಿ ತನ್ನ ನಾಲಿಗೆಯಿಂದ 👅 ಆತನ ದೇಹದಿಂದ ತೊಟ್ಟಿಕ್ಕುವ 💉ರಕ್ತವನ್ನು ಹೀರುತ್ತಾ ವಧಿಸಿದಳು ಎಂಬ ಪ್ರತೀತಿ ಇದೆ.

*ಶೈಲಪುತ್ರಿಯು* 👩 *ಬ್ರಹ್ಮಚಾರಿಣಿ*ಯಾಗಿ  👱🏻‍♀ಶಿವನನ್ನು 👤 ಒಲಿಸಲು ಅನೇಕ ವರುಷ ಮಳೆ ☔ ಚಳಿ ⛄ ಗಾಳಿ 🌾🍃ಬಿಸಿಲಲ್ಲಿ  ☀ತಪಸ್ಸು ಮಾಡಿದ ಪರಿಣಾಮ ಆಕೆಯ ಮೈ ಬಣ್ಣ ಕಪ್ಪಾಯಿತು ⬛... ತದನಂತರ ಶಿವನು ಆಕೆಯ ತಪಸ್ಸಿಗೊಲಿದು ಆಕೆಯನ್ನು *ಕಾಲಿ* ಎಂದು ಛೇಡಿಸಿದ ಎನ್ನುವುದು ಇನ್ನೊಂದು ಪ್ರತೀತಿ...

ಕಾಲರಾತ್ರಿಯು ಕೆದರಿದ ಕೂದಲು,  ಹೊರಚಾಚಿದ ಕಣ್ಣಗುಡ್ಡೆ 👀, ರಕ್ತಭರಿತವಾದ  ಹೊರಚಾಚಿದ ನಾಲಿಗೆ 👅, ಬೆಂಕಿ ಉಗುಳುವ 🔥 ಮೂಗಿನ ಹೊಳ್ಳೆ, ಕಪ್ಪು ಮೈ ಬಣ್ಣ, ⬛, ರುಂಡ ಮಾಲೆ 💀💀💀💀💀,ಕೈಯಲ್ಲಿ ಖಡ್ಗ ಧಾರಣೆ ಮಾಡಿ, ಕತ್ತೆಯನ್ನು 🐴 ವಾಹನವಾಗಿಸಿದ ಭೀಕರ ರೂಪ

ನವದುರ್ಗೆಯರಲ್ಲಿ ಆಕೆಯದು ಭೀಕರ 👹ಮತ್ತು ಭೀಭತ್ಸ 👹ರೂಪ. *ಮಹಾಗೌರಿ ಎಷ್ಟು ಸುಂದರವೋ ಅಷ್ಟೇ ಭೀಕರತೆ ಕಾಲರಾತ್ರಿ.* ಅರ್ಥಾತ್ ಪ್ರಕೃತಿ 🌿🌾 ಎಷ್ಟು ಸುಂದರವೊ ಅಷ್ಟೇ ಪ್ರಳಯ ಭೀಕರ 🌊⚡ಎಂದು ಈ ರೂಪ ಸೂಚಿಸುತ್ತದೆ.... ಪ್ರಳಯಕಾಲದಲ್ಲಿ ⚡⚡ *ಪ್ರಕೃತಿಯು ಕಾಲಿಯಷ್ಟೇ ಭೀಕರವಾಗಿ ಸರ್ವವನ್ನೂ ನಾಶಮಾಡುವ ಸಂದೇಶ ನೀಡುತ್ತದೆ.....*

ಕೆಲವು ಚಿತ್ರಗಳು ಶಿವನು 👤ನೆಲದ ಮೇಲೆ ಮಲಗಿರುವಂತೆ ಹಾಗೂ ಕಾಲಿ ಶಿವನ ಎದೆಯನ್ನು ಮೆಟ್ಟಿರುವಂತೆ  ಕಾಣಬಹುದು....
ಅರ್ಥಾತ್ ಶಿವ ಪುರುಷ ತತ್ವ ಮತ್ತು ಶಕ್ತಿ ಪ್ರಕೃತಿ ತತ್ವವನ್ನು ತಿಳಿಸುತ್ತದೆ.  ಪುರುಷನಿಗೆ ಪ್ರಕೃತಿ ಅಂದರೆ ಶಕ್ತಿ ಇಲ್ಲದಿದ್ದರೆ ವ್ಯರ್ಥ... *"ಶಕ್ತಿ ಇಲ್ಲದಿದ್ದರೆ ಶಿವನೂ ಶವದಂತೆ"* ಎನ್ನುವುದನ್ನು ಈ ಚಿತ್ರ ಉಲ್ಲೇಖಿಸುತ್ತದೆ....

*ಕಾಲಿದಾಸ ಮಾತಾ ಕಾಲಿಯ ಕೃಪೆಯಿಂದ ಕವಿಯಾದ ಎಂಬ ಪ್ರತೀತಿ ಇದೆ....*

ಕಾಲರಾತ್ರಿ ನಂಬಿದವರನ್ನು ಸಲಹುತ್ತಾಳೆ 🙌 ಆಕೆ ಮಾತಾ ಸ್ವರೂಪಿಣಿ.... ಇಡೀ ಬ್ರಹ್ಮಾಂಡ 🌏🌋🌌 ಏನೂ ಇರದಾಗ ಕತ್ತಲಿನಿಂದ ಕೂಡಿತ್ತು 🌑ಮತ್ತು ಅದೇ *ಕತ್ತಲನ್ನು ಕಾಲಿಯ ಕಪ್ಪು ಬಣ್ಣದೊಂದಿಗೆ ಸಮೀಕರಿಸಿ ಆಕೆಯಿಂದಲೇ ಸಕಲ ಚರಾಚರದ ಉಗಮ ಮತ್ತು ಅಂತ್ಯ ಎಂದು ಸೂಚಿಸುತ್ತದೆ...*

*ಯೋಗದಲ್ಲಿ ಈಕೆ ಸಹಸ್ರಾರ ಚಕ್ರವನ್ನು ಪ್ರತಿನಿಧಿಸುತ್ತಾಳೆ.....🐍*

ಕಾಲಿ, ಮಹಾಕಾಲಿ, ಕಾಲಿಕೆ, ಪರಮೇಶ್ವರಿ||
ಸರ್ವಾನಂದಕರಿ ದೇವಿ ನಾರಾಯಣಿ ನಮೋಸ್ತುತೆ||

ಕಾಲರಾತ್ರಿ ನನ್ನ ಮೆಚ್ಚಿನ ರೂಪ.... ತಾಯಿ ಸಕಲರಿಗೂ ಶುಭ ಕರುಣಿಸಲಿ....🙏🙏🙏

ಪರಿಕಲ್ಪನೆ: "ಯೋಗೀಶ್ ಮಲ್ಲಿಗೆಮಾಡು"

Monday, 25 September 2017

ಕಾತ್ಯಾಯಿನಿ

ನವರಾತ್ರಿಯು *ಅಜ್ಞಾನದ ಮೇಲೆ ಜ್ಞಾನದ ವಿಜಯದ ಸಂಕೇತ* ಎನ್ನುವುದನ್ನು ನಾವು ಈ ಹಿಂದೆಯೇ ತಿಳಿದುಕೊಂಡೆವು. ಬ್ರಹ್ಮಚಾರಿಣಿ ರೂಪವು *ಲೌಕಿಕ ಕಾಮನೆಗಳ ಮೇಲೆ ಅಲೌಕಿಕ ಸತ್ಯದ ಅರಿವನ್ನು ನೀಡುತ್ತದೆ.* ಅಂತೆಯೇ ಕಾತ್ಯಾಯಿನಿ ರೂಪವು  *ಅರಿಷಡ್ವರ್ಗಗಳ ಮೇಲಿನ ವಿಜಯವನ್ನೂ ಸಂಕೇತಿಸುತ್ತದೆ.*

ನವರಾತ್ರಿಯ ಆರನೇ ದಿನ 6 ಪೂಜಿಸಲ್ಪಡುವವಳು 🙏 *"ಕಾತ್ಯಾಯಿನಿ"* 👸:

ಅಮರಕೋಶದಲ್ಲಿ ಕಾತ್ಯಾಯಿನಿ ಪಾರ್ವತಿಯ ಎರಡನೇ 2⃣ಹೆಸರಾಗಿದೆ.

*ಕಾತ್ಯಾಯನ* ಎಂಬ *ಋಷಿಯ*  ಮಗಳಾಗಿ 👧ಹುಟ್ಟಿದಳು ಹಾಗಾಗಿ ಈಕೆ *ಕಾತ್ಯಾಯಿನಿ* ಎಂದು ಉಲ್ಲೇಖಿಸಲಾಗಿದೆ. *ಮಹಾಕಾಲಿ ಪುರಾಣದಲ್ಲಿ* *ಕಾತ್ಯಾಯನ ಎಂಬ ಋಷಿಯು ಈಕೆಯನ್ನು ಮೊದಲಿಗೆ ಪೂಜಿಸಿದನಾದ್ದರಿಂದ 🙏 ಈಕೆಗೆ ಕಾತ್ಯಾಯಿನಿ ಎಂದು ಹೆಸರು ಬಂತು ಎಂದು ಉಲ್ಲೇಖಿಸಿದೆ....*

ಹಲವಾರು ಪುರಾಣಗಳು 📝📖(ದೇವಿ ಭಾಗವತ, ಮಾರ್ಕಾಂಡೇಯ, ಮಹಾಕಾಲಿ ಪುರಾಣ) ಈಕೆಯ ಬಗೆಗೆ ಪ್ರಸ್ತಾಪಿಸಲಾಗಿದೆ...

ದುಷ್ಟನಾದ *ಮಹಿಷಾಸುರನ*  🐃 ಸಂಹಾರಕ್ಕೆ ಅವತರಿಸಿದವಳು ಇವಳು ಎಂದು ತಿಳಿದುಬರುತ್ತದೆ. ಗಂಡಸರಿಂದ ಸಾವು ಬರದಂತೆ ವರ ಪಡೆದಿದ್ದ ಮಹಿಷಾಸುರ 🐃ಲೋಕ ಕಂಟಕನಾಗಿದ್ದ. ಆತ *ಮಹಿಷಮಂಡಲವನ್ನು* ಆಳುತ್ತಿದ್ದ. ಸಾವೇ ಇಲ್ಲ ಎಂಬ ಭ್ರಾಂತಿಯಲ್ಲಿ ಸುಜನರಿಗೆ ಸಂಕಷ್ಟ ಕೊಡುತ್ತಿದ್ದ ಆತ ಕಾತ್ಯಾಯಿನಿಯ👸 ರೂಪಕ್ಕೆ ಮರುಳಾದ.
ಮಹಿಷಾಸುರ 🐃 ಆಕೆಯಲ್ಲಿ ತನ್ನನ್ನು ವರಿಸುವಂತೆ 💍💘 ಕೇಳಿದನು... ಯುದ್ಧದಲ್ಲಿ 💪 ತನ್ನನ್ನು ಗೆದ್ದಲ್ಲಿ 👍ತಾನು ಮಹಿಷಾಸುರನನ್ನು  🐃ವರಿಸುವುದಾಗಿ 💍ಹೇಳಿದ ಕಾತ್ಯಾಯಿನಿ 👸ಅವನೊಂದಿಗೆ ಯುದ್ಧಕ್ಕೆ 💪ಅಣಿಯಾದಳು.... ಯುದ್ಧದಲ್ಲಿ ಮಹಿಷಾಸುರನನ್ನು 🐃 ವಧಿಸಿದಳು 🔪🔪🔪... ತನ್ಮೂಲಕ *ಮಹಿಷಾಸುರಮರ್ಧಿನಿ* 👸💪🔪🐃 ಎಂಬ ಹೆಸರನ್ನು ಹೊಂದಿದಳು. *(ಮಹಿಷನ ಊರು ಮಹಿಷೂರು, ಮೈಸೂರು ಆಗಿರುವುದನು ಸ್ಮರಿಸಬಹುದು)*

ಮಹಿಷಾಸುರ ಅರ್ಥಾತ್ *ಮಹಿಷ* ಎಂದರೆ *ಕೋಣ* 🐃 *ಅಸುರ* ಎಂದರೆ *ರಾಕ್ಷಸ* 💀. *ಕೋಣ* *ಅಜ್ಞಾನವನ್ನು* ಸಂಕೇತಿಸುತ್ತದೆ. ನಮ್ಮಲ್ಲಿ ದಡ್ಡರನ್ನು ಕೋಣ ಎಂದು ಬೈಯುವ, ಕೋಣದ ಮುಂದೆ ಕಿಂದರಿ ಬಾರಿಸಿದಂತೆ ಎನ್ನುವುದು ರೂಢಿಯಲ್ಲಿದೆ. *ಲೌಕಿಕ ಜಗತ್ತಿನಲ್ಲಿ  ಕಾಮ 😍, ಕ್ರೋಧ 😡, ಮೋಹ 😘, ಮಾಯೆ 😎ಎಂಬ ಅಜ್ಞಾನಗಳು ನಮ್ಮನ್ನು ಆಗಾಗ ವರಿಸಲು ಬರುತ್ತವೆ* ಆ ಸಂದರ್ಭದಲ್ಲಿ *ಜ್ಞಾನ ಸ್ವರೂಪಿಣಿಯಾದ ತಾಯಿ ಕಾತ್ಯಾಯಿನಿಯ ಸ್ಮರಣೆ ಅಜ್ಞಾನ ನಾಶಕ್ಕೆ ಹಾಗೂ ಜ್ಞಾನ ಜ್ಯೋತಿ 💡 ಬೆಳಗಲು ಕಾರಣಳಾಗುತ್ತಾಳೆ....*

ಭಾಗವತ ಪುರಾಣದಲ್ಲಿ ಕನ್ಯೆಯರು 👭 ಅರ್ಥಾತ್ *ಮದುವೆಯಾಗದ ಗೋಪಿಕೆಯರು ಕ್ರಿಷ್ಣನೇ ಗಂಡನಾಗಿ ಸಿಗಲಿ ಎಂಬ ಉದ್ದೇಶದಿಂದ ಮಾರ್ಗಶೀರ್ಷ ಮಾಸದಲ್ಲಿ ಯಮುನಾ ನದಿಯ 🌊🌊ತೀರದಲ್ಲಿ ಸ್ನಾನ 🚿ಮಾಡಿ ಒಂದು ತಿಂಗಳ ಕಾತ್ಯಾಯಿನಿ ವ್ರತ ಕೈಗೊಳ್ಳುತ್ತಿದ್ದರು ಎಂದು ಪ್ರಸ್ತಾಪಿಸುತ್ತದೆ....*

ದಕ್ಷಿಣ ಭಾರತದಲ್ಲಿರುವ ಕನ್ಯಾ ಕುಮಾರಿ ದೇವಾಲಯದಲ್ಲಿರುವ  *ಕನ್ಯಾಕುಮಾರಿಯು* ಕಾತ್ಯಾಯಿನಿಯ ಸ್ವರೂಪ...

*ಯೋಗದಲ್ಲಿ ಈಕೆ ಆಜ್ಙಾ ಚಕ್ರವನ್ನು ಪ್ರತಿನಿಧಿಸುತ್ತಾಳೆ 🐍....*

*ಕಾತ್ಯಾಯಿನಿ ಮಹಾಮಾಯೆ ಮಹಾಯೋಗಿನ್ಯಧೀಶ್ವರೀ| ನಂದ ಗೋಪ ಸುತಂ ದೇವಿಪತಿಂ ಮೇ ಕುರು ತೆ ನಮಃ ||*ಎಂದು ಸ್ತುತಿಸಿ ಫಲವನ್ನು ಪಡೆಯಬಹುದು...

ಪರಿಕಲ್ಪನೆ: "ಯೋಗೀಶ್ ಮಲ್ಲಿಗೆಮಾಡು"

Sunday, 24 September 2017

ಸ್ಕಂದ ಮಾತ

ನವರಾತ್ರಿಯು *ತಾಯಿ ರೂಪದಲ್ಲಿರುವ ದುರ್ಗೆಯನ್ನು ಪೂಜಿಸುವ ವಿಶೇಷ ಪರ್ವ.* ಸಕಲ ಜೀವಿಯನ್ನೂ ಮಕ್ಕಳ ರೂಪದಲ್ಲಿ ಪೊರೆಯುವ ತಾಯಿಯ ಕಲ್ಪನೆಯೇ ಅಮೋಘವಾದುದು. *ತಸ್ಮಾತ್ ನವರಾತ್ರಿ ತಾಯಿ ಮಗುವಿನ ಬಾಂಧವ್ಯವನ್ನೂ ಪ್ರತಿನಿಧಿಸುತ್ತದೆ.*

ನವರಾತ್ರಿಯಲ್ಲಿ ಐದನೇ 5ದಿನ ಪೂಜಿಸಲ್ಪಡುವವಳು *"ಸ್ಕಂದ ಮಾತ"*👩👶

*ದಾಕ್ಷಾಯಿನಿ* 🙎 ದಕ್ಷ ಯಜ್ಞದಲ್ಲಿ 🔥🔥 ದೇಹ ತ್ಯಾಗ ಮಾಡಿದ ನಂತರದಲ್ಲಿ *ತಾರಕಾಸುರ*ನೆಂಬ ರಾಕ್ಷಸ 👽 ಇನ್ನು ಶಿವನಿಗೆ 👤 ಮದುವೆ ಆಗಲಾರದು ಎಂಬ ಕಲ್ಪನೆಯಲ್ಲಿ *ಶಿವನ 👤 ಮಗನಿಂದ ತನಗೆ ಸಾವು  ⚫ ಬರಲಿ* ಎಂದು ವರ ಪಡೆದನು, ಶಿವನಿಗೆ ಮದುವೆ ಆಗುವುದಿಲ್ಲ, ಹಾಗೆ ಮಗುವು ಆಗುವುದಿಲ್ಲ, ಹಾಗಾಗಿ ತನಗೆ ಸಾವಿಲ್ಲ ಎಂಬ ಕಲ್ಪನೆಯಲ್ಲಿ ಅಮರನಾಗುವ ಪ್ರಯತ್ನಪಟ್ಟನು.... 💪

ಪಾರ್ವತಿಯಾಗಿ *(ಶೈಲಪುತ್ರಿಯಾಗಿ)*🙎ಮರುಜನ್ಮ ಪಡೆದ ದಾಕ್ಷಾಯಿನಿ 👩 ಶಿವನಿಗಾಗಿ *ಬ್ರಹ್ಮಚಾರಿಣಿಯಾಗಿ*👰 ತಪವನ್ನಾಚರಿಸಿದಳು... ತಾರಾಕಾಸುರ ವಧೆಗಾಗಿ ಬ್ರಹ್ಮಚಾರಿಣಿಯ ತಪಸ್ಸಿಗೊಲಿದ ಶಿವ 👤ಆಕೆಯನ್ನು *ಚಂದ್ರಘಂಟ* ರೂಪದಲ್ಲಿ  👸ವರಿಸಿದನು 💐💍

ಇದನ್ನರಿತ ತಾರಕಾಸುರ ಮದುವೆಯಾದ ಶಿವನಿಗೆ👤 ಮಗುವಾದರೆ  👶ತನ್ನ ಮರಣ ನಿಶ್ಚಿತ ಎಂದರಿತು *ಶಿವನ ಸಂತಾನದ ನಾಶದ ಕಡೆಗೆ ಯೋಚಿಸಿದನು💭*

ಲೋಕ ಕಂಟಕ ತಾರಕಾಸುರನ ವಧೆಗೆ ಶಿವ ಸುತನ ಜನ್ಮ ಅನಿವಾರ್ಯವಾದುದರಿಂದ ಶಿವನ ವೀರ್ಯವನ್ನು 💧 ತಾರಕಾಸುರನಿಂದ ಕಾಪಾಡಲು ಅಗ್ನಿ ದೇವ 🔥ಕೊಂಡೊಯ್ಯುತಿರಲು ಅದು ಆಕಾಶಮಾರ್ಗದಲ್ಲಿ ☁☁ ಕೆಳಗುರುಳಿತು ಮತ್ತು ಅದನ್ನು ಪಕ್ಷಿಯೊಂದು 🐧ನುಂಗಿ ಅದರ ತೇಜಸ್ಸಿನ ಬಿಸಿ ⚡⚡ತಡೆಯಲಾಗದೆ *ಕ್ರಿತ್ತಿಕಾ ಲೋಕದ ನದಿಯಲ್ಲಿ 🌊🌊ಮುಳುಗಿತು*

ನದಿಯಲ್ಲಿ 🌊🌊ಸ್ನಾನ 🚿 ಮಾಡುತ್ತಿದ್ದ *ಆರು ಜನ ಕ್ರಿತ್ತಿಕೆಯರ👭👭👭 ಗರ್ಭ ಆ ಸಂದರ್ಭ ಈ ವೀರ್ಯದಿಂದ 💧 ಫಲಿಸಿತು....* ಆರು ತಾಯಂದಿರಿಗೆ ಒಬ್ಬನಾಗಿ ಹುಟ್ಟಿದವನೇ *"ಸ್ಕಂದ"* 👶... ಕ್ರಿತ್ತಿಕೆಯರು ಮಗುವನ್ನು ಹೆತ್ತು ಪಾರ್ವತಿಗೆ ವಾಪಾಸು ಮಾಡಿದರು.... *(surrogate mother)*ಬಾಡಿಗೆ ತಾಯಿಯ ಕಲ್ಪನೆಯನ್ನು ಇಲ್ಲಿ ಸ್ಮರಿಸಬಹುದು...

*ಕ್ರಿತ್ತಿಕೆಯರಿಗೆ ಜನಿಸಿದನಾದರಿಂದ ಕಾರ್ತಿಕೇಯ* ಎಂದೂ *ನವಿಲ ವಾಹನನಾದರಿಂದ ಮಯೂರವಾಹನ* ಎಂದು, *ಆರು ಮುಖ ಇರುವುದರಿಂದ ಆರ್ಮೊಗಂ, ಷಡಾನನ* ಎಂದು *ಸುಬ್ರಹ್ಮಣ್ಯನನ್ನು* ಹಲವು ನಾಮದಿಂದ ಕರೆಯುತ್ತಾರೆ....

ಮಗನನ್ನು ಮರಳಿ ಪಡೆದ ಪಾರ್ವತಿ👩 ಸ್ಕಂದನನ್ನು 👶ತನ್ನ ತೊಡೆಯಲ್ಲಿ ಕುಳ್ಳಿರಿಸಿದಳು ಈ ರೂಪವೇ *"ಸ್ಕಂದ ಮಾತಾ"*👩👶....

ಸ್ಕಂದನನ್ನು ತೊಡೆಯಲ್ಲಿ ಕುಳ್ಳಿರಿಸಿ, ಎರಡು ಕೈಗಳಲ್ಲಿ ಕಮಲವನ್ನು 🌷 ಧಾರಣೆ ಮಾಡಿ ಅಭಯಮುದ್ರಳಾದ 🙌 ಸ್ಕಂದಮಾತ ಪದ್ಮಾಸನ ರೂಪದಲ್ಲಿ ಸ್ಥಿತಳಾಗಿದ್ದಾಳೆ.... ಆಕೆಯನ್ನು *ಪದ್ಮಾಸನ ದೇವಿ* ಎಂತಲೂ ಕರೆಯುತ್ತಾರೆ.....

ಈ ರೂಪವನ್ನು ಪೂಜಿಸುವುದರಿಂದ ದ್ವಿಗುಣ ✌ಫಲ ಪಡೆಯಬಹುದು.... ಕಾರಣ *ಈಕೆಯನ್ನು ಪೂಜಿಸಿದರೆ ಸ್ಕಂದನನ್ನು ಪೂಜಿಸಿದಂತೆ ತನ್ಮೂಲಕ ಸ್ಕಂದ ಹಾಗೂ ಸ್ಕಂದ ಮಾತ ಇಬ್ಬರ ಆಶೀರ್ವಾದ 🙌 ಪಡೆಯಬಹುದು......*

*ಯೋಗದಲ್ಲಿ ವಿಶುದ್ಧ ಚಕ್ರವನ್ನು ಪ್ರತಿನಿಧಿಸುತ್ತಾಳೆ🐍*

ಸ್ರಿಷ್ಟಿ ತತ್ವವನ್ನು 🌱ಈ ರೂಪ ತಿಳಿಸುತ್ತದೆ .... ಸ್ರಿಷ್ಟಿಯಲ್ಲಿ ತಾಯಿ ಮತ್ತು ಮಗುವಿನ ಪಾತ್ರವನ್ನು ವಿಶದಪಡಿಸುತ್ತದೆ...

*ಸಿಂಹಾಸನಾ ಗತಾನಿತ್ಯಂ ಪದ್ಮಾಶ್ರಿತ ಕರದ್ವಯಂ| ಶುಭದಸ್ತು ಸದಾ ದೇವಿ ಸ್ಕಂದ ಮಾತ ಯಶಸ್ವಿನಿ||* ಎಂದು ಸ್ತುತಿಸಿ ಸಕಲ ಸಂಮಂಗಲ ಪಡೆಯಬಹುದು....

ಪರಿಕಲ್ಪನೆ:  "ಯೋಗೀಶ್ ಮಲ್ಲಿಗೆಮಾಡು"

Saturday, 23 September 2017

ಕೂಷ್ಮಾಂಡ

ನವರಾತ್ರಿಯು *ಕತ್ತಲಿನಿಂದ ಬೆಳಕಿನೆಡೆಗಿನ ತತ್ವವನು ಸಾರುತ್ತದೆ*. ಅಜ್ಞಾನದ ತಿಮಿರದಿಂದ ಸುಜ್ಞಾನದ ಪ್ರಕಾಶದೆಡೆಗೆ. *ದುಃಖ, ಕ್ಲೇಶಗಳಿಂದ ನಗು ನಲಿವಿನ ಕಡೆಗೆ*.

ನವರಾತ್ರಿಯ ನಾಲ್ಕನೇ 4ದಿನ ಪೂಜಿಸಲ್ಪಡುವವಳು *"ಕೂಷ್ಮಾಂಡ"* 🙏:
*"ಕು"* ಅಂದರೆ *ಸಣ್ಣ* *"ಉಷ್ಮ"* ಎಂದರೆ *ಶಕ್ತಿ* *"ಅಂಡ"*ಎಂದರೆ *ಮೊಟ್ಟೆ* ಅರ್ಥಾತ್ *ಕೂಷ್ಮಾಂಡ ಎಂದರೆ ಸಣ್ಣ ನಗುವಿನ ಶಕ್ತಿಯಿಂದ ಬ್ರಹ್ಮಾಂಡವನ್ನು ಸೃಷ್ಟಿಸಿದವಳು* 🌍🌕🌋🌌...

*ದೇವಿ ಸಪ್ತಶತಿಯು* ಈ ಬ್ರಹ್ಮಾಂಡದ ಉಗಮದ ಬಗ್ಗೆ ಈ ಪ್ರಕಾರವಾಗಿ ಹೇಳುತ್ತದೆ. ಏನೂ ಇರದ *ಬರೀ ಕತ್ತಲಷ್ಟೇ 🌑 ತುಂಬಿದ್ದ ಈ ಪ್ರಕೃತಿಯಲ್ಲಿ ದುರ್ಗ ಮಾತೆ ತನ್ನ ಮಂದಹಾಸದಿಂದ ☺ ಬ್ರಹ್ಮಾಂಡದ ಉಗಮವನ್ನು ಮಾಡಿದಳು* 🌌🌋🌕🌍.... ಅಲ್ಲದೆ ತನ್ನ ನಗುವಿನಿಂದಲೇ 😊 ಬೆಳಕನ್ನು 💡 ಪಸರಿಸುವವಳು ಇವಳೇ ಎಂದು ಉಲ್ಲೇಖಿಸಲಾಗಿದೆ.... ಹೀಗೆ ಬೆಳಕನ್ನು ಸ್ತ್ರೀಯ ನಗುವಿನೊಂದಿಗೆ ಸಂಕೇತಿಸಲಾಗಿದೆ. ಅರ್ಥಾತ್ *ಯಾವ ಮನೆಯಲ್ಲಿ 🏠 ಊರಿನಲ್ಲಿ 🌆🌇 ದೇಶದಲ್ಲಿ  ಹೆಣ್ಣು ಮಕ್ಕಳು 👭👭 ನಗುವಿನಿಂದ ಕೂಡಿರುತ್ತಾರೋ 😊☺ ಅರ್ಥಾತ್ ಸಂತೋಷದಿಂದ 😀😃😄ಇರುತ್ತಾರೋ ಅಲ್ಲಿ ಬೆಳಕು ಅಂದರೆ ಸಮ್ರದ್ಧಿ 🌾🌺☔ ನೆಲೆಸುತ್ತದೆ ...* "ಯತ್ರ ನಾರ್ಯಾಸ್ತು ಪೂಜ್ಯಂತೆ, ರಮಂತೆ ತತ್ರ ದೇವತ" *(ಎಲ್ಲಿ ನಾರಿಯರನ್ನು 👩👧👸👵 ಪೂಜಿಸುವರೊ 🙏🙏 ಅಲ್ಲಿ ದೇವತೆಗಳು ನೆಲೆಸುತ್ತಾರೆ 🙌)* ಎಂಬ ಶ್ಲೋಕವನ್ನು ಸ್ಮರಿಸಬಹುದು....

ಕೂಷ್ಮಾಂಡ ದೇವಿಯು ಸೌರಮಂಡಲಕ್ಕೆ ☀⭐🌛🌕🌖🌗 ಅಧಿದೇವತೆಯಾಗಿದ್ದಾಳೆ ಎಂದೂ, ಸೂರ್ಯನಿಗೆ ☀ ಬೆಳಕು 🌅ಅದು ಈಕೆಯಿಂದಲೇ ಎಂದೂ *ಈಕೆ ಸೂರ್ಯನ 🌞ಆಂತರ್ಯದಲ್ಲಿ 🌕 ಸ್ಥಿತಳಾಗಿದ್ದಾಳೆ* ಎಂದೂ ಹೇಳಲಾಗುತ್ತದೆ... ಹೀಗಾಗಿ ಮತ್ತೆ ಮತ್ತೆ ಬೆಳಕನ್ನು ಸ್ತ್ರೀಯೊಂದಿಗೆ ಸಮೀಕರಿಸಲಾಗಿದೆ. ಅರ್ಥಾತ್ ಸ್ತ್ರೀ 👩 ಬೆಳಕನ್ನು 🌅, ಜ್ಞಾನವನ್ನು 📚 ಪಸರಿಸುವವಳು, ಸ್ತ್ರೀ ಜೀವ ಸಂಚಲನ 💞, ಸೃಷ್ಟಿಯಲ್ಲಿ  🌿🍃🍂ಸ್ತ್ರೀ  👩ಪಾತ್ರ ಮಹತ್ತರವಾದುದು ಎಂದು ಸೂಚಿಸುತ್ತದೆ...

ಆಕೆಯನ್ನು *ಅಷ್ಟಭುಜ* ಎಂದು ಕರೆಯುತ್ತಾರೆ ತನ್ಮೂಲಕ ಗದೆ, ಚಕ್ರ, ಕಮಲ, ಕಮಂಡಲ, ಬಿಲ್ಲು, ಬಾಣ, ಅಮ್ರತ ಹಾಗೂ ಜಪಮಣಿ ಧಾರಣೆ ಮಾಡಿದ್ದಾಳೆ *(ಗದೆ ಶಕ್ತಿಯನ್ನು, ಚಕ್ರ ಕಾಲವನ್ನು, ಕಮಲ ಆಧ್ಯಾತ್ಮವನ್ನು, ಕಮಂಡಲ ಪಾವಿತ್ರ್ಯವನ್ನು, ಬಿಲ್ಲು ಕರ್ಮವನ್ನು, ಬಾಣ ಗುರಿಯನ್ನು, ಅಮ್ರತ ಅಮರತ್ವವನ್ನು, ಜಪಮಣಿ ಜ್ಞಾನವನ್ನು ಪ್ರತಿನಿಧಿಸುತ್ತದೆ)* ... ಆಮೂಲಕ *ನವನಿಧಿ, ಅಷ್ಟಸಿದ್ಧಿ* ಕರುಣಿಸುತ್ತಾಳೆ ಎಂಬ ಪ್ರತೀತಿ ಇದೆ....

*ಕುಂಬಳಕಾಯಿ* 🎃ಈಕೆಗೆ ಸಮರ್ಪಿಸುತ್ತಾರೆ ಆದುದರಿಂದ ಕುಂಬಳಕಾಯಿಗೆ ಕೂಷ್ಮಾಂಡ ಎಂದು ಕರೆಯುತ್ತಾರೆ...

*ಯೋಗದಲ್ಲಿ ಈಕೆ ಅನಾಹತ ಚಕ್ರವನ್ನು ಪ್ರತಿನಿಧಿಸುತ್ತಾಳೆ🐍*

*"ಸುರಸಂಪೂರ್ಣ ಕಲಶಂ ರುಧಿರಾಪ್ಲುತಮೇವ ಚ| ಧದಾನ ಹಸ್ತಪದ್ಮಾಭ್ಯಾಂ ಕೂಷ್ಮಾಂಡ ಶುಭದಾಸ್ತು ಮೇ||*
ಎಂದು ಸ್ತುತಿಸಿ ಬಾಳ ಕತ್ತಲನ್ನು ಹೋಗಲಾಡಿಸಿ ಸುಖ ಶಾಂತಿ ಎಂಬ ಬೆಳಕನ್ನು ಹೊಂದಬಹುದು

ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು

Friday, 22 September 2017

ಚಂದ್ರಘಂಟಾ

ನವರಾತ್ರಿ  ಒಂಭತ್ತು ರಾತ್ರಿಗಳು ನಡೆದ *ದುಷ್ಟಸಂಹಾರವನ್ನು ಸಂಕೇತಿಸುತ್ತವೆ*. ಈ ದುಷ್ಟತೆಗಳು *ಮನಸ್ಸಿನ ಕ್ಲೇಶಗಳನ್ನೂ ಸಂಕೇತಿಸುತ್ತವೆ*. ಹಲವು ದೇವಿ ರೂಪಗಳು ಚಂದ್ರನನ್ನು ಧರಿಸಿರುವುದು ಕಾಣಬಹುದು. *ಚಂದ್ರ ಮನೋಕಾರಕ*. ಹಾಗಾಗಿ ಮನಃಕ್ಲೇಶ ಕಳೆಯುವಲ್ಲಿ ವಿಶೇಷ ಪಾತ್ರ ವಹಿಸುತ್ತದೆ.

ನವರಾತ್ರಿಯ ಮೂರನೇ 3 ದಿನ ಪೂಜಿಸುವ ದೇವಿ *"ಚಂದ್ರಘಂಟಾ"*: *ಪಾರ್ವತಿಯು (ಶೈಲಪುತ್ರಿ)🙎🏻 ಬ್ರಹ್ಮಚಾರಿಣಿಯಾಗಿ* 👱🏻‍ಶಿವನ ಕುರಿತು ತಪಸ್ಸಾಚರಿಸಿ ಶಿವನನ್ನು ಒಲಿಸಿಕೊಳ್ಳುತ್ತಾಳೆ 🙏. ಶಿವನು ಆಕೆಯನ್ನು ವರಿಸುವುದಾಗಿ ಮಾತುಕೊಡುತ್ತಾನೆ✋

ಪಾರ್ವತಿಯನ್ನು ವರಿಸುವ ಸಲುವಾಗಿ ತನ್ನ ಗಣಗಳ 👹👺👹 ಜೊತೆಗೆ ಶಿವನು  ಭೈರಾಗಿಯಂತೆ, ಸ್ಮಶಾನವಾಸಿಯಂತೆ ಪಾರ್ವತಿಯ ಮನೆಗೆ🏠 ಆಗಮಿಸುತ್ತಾನೆ. ಸ್ಮಶಾನವಾಸಿ ರೂಪಿನಲ್ಲಿರುವ ಶಿವನನ್ನು ಕಂಡು ಪಾರ್ವತಿಯ ತಾಯಿ ರೂಪ ಲಾವಣ್ಯದಿಂದ ಕೂಡಿದ ಮಗಳನ್ನು ಇಂತಹ ಶಿವನು ಮದುವೆಯಾಗುವುದೇ ಎಂದುಕೊಂಡು ಭೀತಗೊಂಡು  ಮೂರ್ಛಿತಳಾಗುತ್ತಾಳೆ 😳😳....

ಈ ಸಂದರ್ಭದಲ್ಲಿ ಪಾರ್ವತಿಯು ಅಲಂಕಾರಭರಿತಳಾಗಿ ಬಹುಸುಂದರವಾದ ರೂಪವನ್ನು ಧಾರಣೆಮಾಡುತ್ತಾಳೆ 👸 ಇದೆ  ಸಂದರ್ಭ ತನ್ನ ಹಣೆಯಲ್ಲಿ ಅರ್ಧಚಂದ್ರಾಕ್ರಿತಿಯನ್ನು 🌙 ಧರಿಸಿದಳು ಎಂಬ ಉಲ್ಲೇಖವಿದೆ... ಆ ಅರ್ಧಚಂದ್ರವು ಹಣೆಯಲ್ಲಿ ಘಂಟೆಯಂತೆ 🔔ಓಲಾಡುತಿತ್ತು ಆದುದರಿಂದ ಆಕೆಯನ್ನು *"ಚಂದ್ರಘಂಟಾ"* 🌙🔔ಎಂದು ಸ್ತುತಿಸಿದರು...

*ಚಂದ್ರಘಂಟಾ: ‘ಚಂದ್ರಃ ಘಂಟಾಯಾಂ ಯಸ್ಯಾ ಸಾ ಚಂದ್ರಘಂಟಾ' ಅಂದರೆ  ಚಂದ್ರನು ಯಾರ ದ್ವಾರದಲ್ಲಿ ಸ್ಥಿರವಾಗಿದ್ದಾನೆಯೋ ಅವಳೇ ಚಂದ್ರಘಂಟಾ.. 🌙🔔*

ಹಣೆಯಲ್ಲಿ ಧರಿಸಿದ ಚಂದ್ರಘಂಟೆಯ ಸದ್ದಿಗೆ 🔔ಹಲವು ದುಷ್ಟ ಶಕ್ತಿಗಳು💀💀 ನಾಶವಾದವು ಎಂಬ ಉಲ್ಲೇಖವಿದೆ... *ಘಂಟಾ ನಿನಾದಿಂದ ದುಷ್ಟಶಕ್ತಿಗಳು, ನಕಾರಾತ್ಮಕ ಶಕ್ತಿ  💀💀(negative energy) ಅನ್ನು ದೂರ ಮಾಡಬಹುದು ಎಂಬುವುದನು ಇಲ್ಲಿ ಸ್ಮರಿಸಬಹುದು.....*

ಚಂದ್ರ 🌙ಮನೋಕಾರಕ ಅರ್ಥಾತ್ ಮನಸ್ಸಿಗೆ ಸಂಬಂಧಪಟ್ಟವನು 🙇💭, ಗಂಟೆ 🔔 ದುಷ್ಟಶಕ್ತಿಗಳು, ನಕಾರಾತ್ಮಕ ಶಕ್ತಿ (negative energy) 💀💀ಅನ್ನು ದೂರ ಮಾಡುವಂತದ್ದು. ತಸ್ಮಾತ್ *ಚಂದ್ರಘಂಟಾಳನ್ನು ಸ್ತುತಿಸಿದರೆ ಮನಸ್ಸಿಗೆ ಸಂಬಂಧಿಸಿದ ಕ್ಲೇಶ, ದುಃಖ, ವಿಕಾರ ನಾಶವಾಗುತ್ತದೆ...* 🙇💭💀🌋

ಚಂದ್ರಘಂಟಾ ರೂಪವನ್ನು
ನೋಡಿದ ಶಿವ ತನ್ನ ಭೈರಾಗಿ 👹 ರೂಪವನ್ನು ತ್ಯಜಿಸಿ ಅಲಂಕ್ರತನಾದ ಸುಂದರಾಂಗನ 👤ರೂಪ ಧಾರಣೆ ಮಾಡಿದನು.... *ಹೆಣ್ಣು ಗಂಡನ್ನು ಪರಿವರ್ತಿಸಬಲ್ಲಳು ಎಂದೂ ಇದನ್ನು ಅರ್ಥೈಸಬಹುದು.... ಮನಸ್ಸು ವಿಕಾರರಹಿತವಾದಾಗ ಬೈರಾಗಿಯಂತ ಬದುಕು ಸುಂದರವಾಗುತ್ತದೆ ಎಂದೂ ಅರ್ಥೈಸಬಹುದು...*

*ಪ್ರಕ್ರಿತಿ 🍃🌿ಮತ್ತು ಪುರುಷ 👤 ತತ್ವವನ್ನು ಇದು ತಿಳಿಯಪಡಿಸುತ್ತದೆ....*

*ಯೋಗದಲ್ಲಿ ಈಕೆ ಮಣಿಪುರ ಚಕ್ರವನ್ನು ಪ್ರತಿನಿಧಿಸುತ್ತಾಳೆ 🐍....*

ಹತ್ತು ಕೈಗಳಲ್ಲಿ ಖಡ್ಗ, ತ್ರಿಶೂಲ, ಕಮಲ, ಕಮಂಡಲ ಮುಂತಾದವನ್ನು ಧರಿಸಿದ್ದು, ಈಕೆಯನ್ನು *ಚಾಮುಂಡ, ಚಂಡಿಕಾ* ಎಂಬೂದಾಗಿಯೂ ಕರೆಯುತ್ತಾರೆ

ಈಕೆಯನ್ನು *"ಪಿಂಡಜಪ್ರವರಾರೂಢಾಚಂದಕೋಪಾಸ್ತ್ರಕೈರ್ಯುತಾ |ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||"* ಎಂದು ಸ್ತುತಿಸಿ ಮನಃ ಕ್ಲೇಶ ದೂರ ಮಾಡಿ ನೆಮ್ಮದಿ ಕಾಣಬಹುದು....

ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ಸುಖ, ನೆಮ್ಮದಿ ಕರುಣಿಸಲಿ......

ಪರಿಕಲ್ಪನೆ: "ಯೋಗೀಶ್ ಮಲ್ಲಿಗೆಮಾಡು"

Thursday, 21 September 2017

ಬ್ರಹ್ಮಚಾರಿಣಿ

ನವರಾತ್ರಿ ಎನ್ನುವ ಹೆಸರು ಸೂಚಿಸುವಂತೆ ಇದು ರಾತ್ರಿಯ ಕುರಿತು ಉಲ್ಲೇಖಿಸುತ್ತದೆ. *ರಾತ್ರಿ* ಎಂದರೆ *ಕತ್ತಲು* ಮತ್ತು ಕತ್ತಲು ಇಲ್ಲಿ *ಅಜ್ಞಾನವನ್ನು* ಸಂಕೇತಿಸುತ್ತದೆ. ಅಜ್ಞಾನ ನಾಶ ತನ್ಮೂಲಕ ವಿಜಯದ ಸಂಕೇತವನ್ನು ನೀಡುತ್ತದೆ.

*ಬ್ರಹ್ಮಚಾರಿಣಿ*: ನವರಾತ್ರಿಯ ಎರಡನೇ ದಿನ ಪೂಜಿಸಲ್ಪಡುವವಳು ಬ್ರಹ್ಮಚಾರಿಣಿ 👱🏻‍... *ಬ್ರಹ್ಮ* ಎಂದರೆ *ಜ್ಞಾನ*, *ಚಾರಿಣಿ* ಎಂದರೆ *ನಡೆಯುವುದು, ಆಚರಿಸುವುದು* ಎಂದು ಅರ್ಥ. ತಥಾ *ಬ್ರಹ್ಮಚಾರಿಣಿ ಎಂದರೆ ಜ್ಞಾನ ಮಾರ್ಗದೆಡೆಗೆ ನಡೆಯುವವಳು ಎಂದು*.

ನಾರದ ಮುನಿಗಳು *ಪಾರ್ವತಿಗೆ ಅರ್ಥಾತ್ ಶೈಲಪುತ್ರಿಗೆ* ತಾನು ಹಿಂದಿನ ಜನುಮದಲ್ಲಿ ದಕ್ಷನ ಮಗಳಾದ *ದಾಕ್ಷಾಯಿನಿ (ಸತಿ)* ಆಗಿದ್ದು ತನ್ನ ಪತಿ ಆಗಿದ್ದ ಶಿವನನ್ನು ತಂದೆ ಆಗಿದ್ದ ದಕ್ಷ ಅವಮಾನಿಸಿದ ಕಾರಣ ತಾನು ದಕ್ಷಯಜ್ಞದ ಅಗ್ನಿಕುಂಡದಲ್ಲಿ 🔥ದೇಹ ತ್ಯಾಗ ಮಾಡಿದುದನು ನೆನಪಿಸುತ್ತಾನೆ.... ತನ್ನ ಪೂರ್ವ  ವ್ರತ್ತಾಂತ ತಿಳಿದ ಪಾರ್ವತಿಯು (ಶೈಲಪುತ್ರಿ) ಶಿವನನ್ನು ಪಡೆಯಲು ತಪಸ್ಸನ್ನಾಚರಿಸಲು 🙏ತೆರಳುತ್ತಾಳೆ... ಈ ರೂಪವೇ ಬ್ರಹ್ಮಚಾರಿಣಿ....

ಬ್ರಹ್ಮಚರ್ಯ ಆಚರಿಸುವ ಮೂಲಕ ಶಿವನನ್ನು ಪಡೆಯುತ್ತೇನೆ ಎಂದು ಹೊರಟವಳೇ ಬ್ರಹ್ಮಚಾರಿಣಿ.... *ಬ್ರಹ್ಮ*ಎಂದರೆ *ಜ್ಞಾನ,* *ಶಿವ* ಎಂದರೆ *ಸಂತೋಷ.* *ಬ್ರಹ್ಮಜ್ಞಾನ ಲೌಕಿಕ ಭೋಗದ ಆಸೆಯನ್ನು ನಾಶಪಡಿಸುತ್ತದೆ* ತನ್ಮೂಲಕ *ಬ್ರಹ್ಮಜ್ಞಾನ ಸಂತೋಷವನ್ನ ಅರ್ಥಾತ್ ಶಿವನನ್ನು ಪಡೆಯಲು ಸಹಕಾರಿ.....*  ಇದನ್ನು ಈ ರೂಪ ಸಂಕೇತಿಸುತ್ತದೆ.....

ಶಿವನನ್ನು ಪಡೆಯುವ ಹಂಬಲದಲ್ಲಿ ಬ್ರಹ್ಮಚಾರಿಣಿಯು ಅನೇಕ ವರುಷ ತಪಸ್ಸನ್ನು ಆಚರಿಸಿದಳು. ಆಕೆ ಆಹಾರ ತ್ಯಜಿಸಿ ಒಣ ಬಿಲ್ವದ ಎಲೆಗಳನ್ನು  🍂🍂 ಮಾತ್ರ ತಿಂದು ತಪಸ್ಸು ಮಾಡಿದಳು. ಕೊನೆಗೆ ಎಲೆಗಳನ್ನೂ 🍂🍂 ತ್ಯಜಿಸಿದಳು.... ಆದುದರಿಂದ ಆಕೆಗೆ *ಅಪರ್ಣ (ಪರ್ಣ ಎಂದರೆ ಎಲೆ 🍂)* ಎಂದೂ ಹೆಸರಿದೆ....

ಆಕೆ ತಪಸ್ಸಿನಿಂದ ಕ್ರಶಳಾದಳು ಇದನ್ನು ಕಂಡ ಆಕೆಯ ತಾಯಿ ಉಮಾ ಎಂದು ಹೇಳಿದಳು ಅರ್ಥಾತ್ *( ಉ : ಹೇ ಮಗು, ಮಾ: ಈ ರೀತಿ ಮಾಡದಿರು)* ಆದುದರಿಂದ ಆಕೆಗೆ *ಉಮಾ* ಎಂದೂ ಹೆಸರಿದೆ.....

ಈಕೆ ಒಂದು ಕೈಯಲ್ಲಿ ಜಪಮಣಿ  ಮತ್ತೊಂದರಲ್ಲಿ ಕಮಂಡಲ ಹಿಡಿದಿರುವಳು, ರುದ್ರಾಕ್ಷಿಯನ್ನು ಕೊರಳಲ್ಲಿ ಧರಿಸುತ್ತಾಳೆ...... *ಜಪಮಣಿ, ಕಮಂಡಲ, ರುದ್ರಾಕ್ಷಿಗಳು ಜ್ಞಾನದ ಸಂಕೇತವಾಗಿದೆ*.
ಈಕೆ *ಸಾತ್ವಿಕ ರೂಪದವಳಾಗಿದ್ದು ಈಕೆ ಜ್ಞಾನ ತತ್ವದವಳು*.

*ಯೋಗದಲ್ಲಿ ಇವಳು ಸ್ವಾಧಿಷ್ಟಾನ ಚಕ್ರವನ್ನು ಪ್ರತಿನಿಧಿಸುತ್ತಾಳೆ* 🐍.....

ಜೀವನದಲ್ಲಿ ಶಾಂತಿ, ನೆಮ್ಮದಿ, ಪರಮಾನಂದಕ್ಕೆ ಈಕೆಯ ಸ್ತುತಿ ಲಾಭದಾಯಕ......

*ಧದಾನ ಕರಪದ್ಮಾಭ್ಯಾಯಾಂ| ಅಕ್ಷಮಾಲ ಕಮಂಡಲು|| ದೇವಿ ಪ್ರಸೀದತು ಮಾ| ಬ್ರಹ್ಮಚಾರಿಣ್ಯಾನುತ್ತಮಾ||*

ನವರಾತ್ರಿಯ ಶುಭ
ಸಂದರ್ಭದಲ್ಲಿ ಬ್ರಹ್ಮಚಾರಿಣಿ ಶುಭವನ್ನು ಕರುಣಿಸಲಿ.....🙏🙏

ಪರಿಕಲ್ಪನೆ:  "ಯೋಗೀಶ್ ಮಲ್ಲಿಗೆಮಾಡು"