ಆಶ್ವಯುಜ ಮಾಸದ ಶುಕ್ಲಪಕ್ಷವು ನವರಾತ್ರಿಯೊಂದಿಗೆ ಆರಂಭವಾಗುತ್ತದೆ *ನವರಾತ್ರಿಯು* ನಮ್ಮ ದೇಹದ ನವದ್ವಾರಗಳ ಮೂಲಕ ಬರುವ ಕಾಮ ಕ್ರೋಧ, ಲೋಭ, ಮೋಹ, ಮದ, ಮತ್ಸರ ಮುಂತಾದ *ನಕಾರಾತ್ಮಕತೆಯ ಮೇಲಿನ ಸಕಾರಾತ್ಮಕತೆಯ ವಿಜಯದ ಸಂಕೇತವಾಗಿದೆ*🏹
ಇಂತಹ ನವರಾತ್ರಿಯನ್ನು ನವದುರ್ಗೆಯ ಆರಾಧನೆಯೊಂದಿಗೆ ಆಚರಿಸಲಾಗುತ್ತದೆ. ತನ್ಮೂಲಕ *ಸ್ತ್ರೀ ಶಕ್ತಿಯನ್ನು ಆರಾಧಿಸುವ ಕೆಲವೇ ಧರ್ಮಗಳಲ್ಲಿ ಸನಾತನ ಧರ್ಮವು ಪ್ರಮುಖವಾಗಿದೆ*
ಹೆಣ್ಣನ್ನು ಶಕ್ತಿ ರೂಪದಲ್ಲಿ ಕಾಣುವ ನವರಾತ್ರಿಯ ಮೊದಲ ದಿನ ಪೂಜಿಸಲ್ಪಡುವ ದೇವಿ *ಶೈಲ ಪುತ್ರಿ*
*ಶೈಲಪುತ್ರಿ*: ನವದುರ್ಗೆಯರಲ್ಲಿ ಪ್ರಥಮವಾದವಳು
ನವರಾತ್ರಿ ಆರಂಭದ ಮೊದಲ ದಿನ ಪೂಜಿಸಲ್ಪಡುವ ದೇವಿ ಈಕೆ.... ಹೆಸರೇ ಸೂಚಿಸುವಂತೆ *ಶೈಲ* ಅಂದರೆ *ಪರ್ವತ* 🗻 *ಪುತ್ರಿ* ಎಂದರೆ ಮಗಳು 🙎ಅರ್ಥಾತ್ *ಶೈಲಪುತ್ರಿ* ಎಂದರೆ ಪರ್ವತರಾಜನ ಮಗಳು *ಪಾರ್ವತಿ*.
ಮೋಡವನ್ನು ತಡೆದು ಮಳೆ ತರುವುದು ಪರ್ವತ ☁⚡☔, ಹಸಿರು ಹರಡಿರುವುದು ಪರ್ವತದ ತಪ್ಪಲಿನಲ್ಲಿ 🌱🌱 ದನಗಳಿಗೆ 🐄🐄ಆಹಾರದ ಮೂಲ ಪರ್ವತ 🌾🌾, ಜನಜೀವನ ಸಮ್ರದ್ಧವಾಗಿ ಬಾಳುವುದು ನದಿ ಹರಿವ ಪರ್ವತದ ಕಣಿವೆಗಳಲ್ಲಿ
ಅಲ್ಲದೆ ಮಲೆಯು (ಪರ್ವತ)⛰ ಹಲವು ಪ್ರಾಣಿ ಪಕ್ಷಿ ಗಿಡ ಮರ ಸಸ್ಯ ಸಂಪತ್ತಿಗೆ ನಿವಾಸವಾಗಿದೆ. ಹೂವು 🌼ಹಣ್ಣು 🍒ನದಿ 🌊 ವನಸ್ಪತಿಗಳಿಂದ 🌿ಮನುಷ್ಯನಿಗೆ ಅಗತ್ಯ ಕೊಂಡಿಯಾಗಿದೆ. ತನ್ಮೂಲಕ ಮನುಷ್ಯನಿಗೆ ಅಂತಹ ಪ್ರಕೃತಿ ಪರ್ವತದ ತನುಜೆಯಾಗಿ ಒಟ್ಟಾರೆಯಾಗಿ ಪ್ರಕೃತಿ ತತ್ವವನ್ನು ಪ್ರತಿನಿಧಿಸುವ ಪಾರ್ವತಿಯಾಗಿ ಕಂಡದ್ದರಲ್ಲಿ ಆಶ್ಚರ್ಯವೇನಿಲ್ಲ.
ಅಲ್ಲದೆ *ಪರ್ವತ ದೃಢತೆಯನ್ನು ಸಂಕೇತಿಸುತ್ತದೆ*. ತನ್ಮೂಲಕ ಶೈಲಪುತ್ರಿ ರೂಪವು ನಮ್ಮ ಬದುಕಿನಲ್ಲಿ ಬರುವ ಕಷ್ಟಗಳನ್ನು ದೃಢವಾಗಿ ಎದುರಿಸಿ *ನಕಾರಾತ್ಮಕ ಮನಸ್ಥಿತಿಯನ್ನು ನಿಯಂತ್ರಿಸಿ ಸಕಾರಾತ್ಮಕತೆ ಬೆಳೆಸಿಕೊಳ್ಳುವ ಬಗ್ಗೆ ಸೂಚಿಸುತ್ತದೆ*. ಶೈಲಪುತ್ರಿ ರೂಪ ಇವೆ ಸಂಕೇತವನ್ನು ನೀಡುತ್ತದೆ...
ಇಂತಹ ಶೈಲಪುತ್ರಿಯನ್ನು *ಹೇಮಾವತಿ* ಎಂದೂ ಕರೆಯಲಾಗುತ್ತದೆ... ಈಕೆ ಒಂದು ಕೈಯಲ್ಲಿ *ತ್ರಿಶೂಲ* ಮತ್ತೊಂದು ಕೈಯಲ್ಲಿ *ಕಮಲವನ್ನು* 🌷ಹಿಡಿದು ಹಣೆಯಲ್ಲಿ *ಅರ್ಧ ಚಂದ್ರನನ್ನು* 🌙 ಧರಿಸಿರುತ್ತಾಳೆ....
ಪರ್ವತನ ಮಗಳಾದ್ದರಿಂದ ಈಕೆ ಸಂಪೂರ್ಣವಾಗಿ *ಪ್ರಕೃತಿ ತತ್ವದವಳು*🍃🍂.... ಈಕೆಯ ವಾಹನ ನಂದಿ ಆದುದರಿಂದ ಈಕೆಯನ್ನು *ವ್ರಷಾರೂಢ* ಎಂದೂ ಕರೆಯಲಾಗುತ್ತದೆ... ಈಕೆ ಚಂದ್ರನನ್ನು 🌝🌝 ಪ್ರತಿನಿಧಿಸುತ್ತಾಳೆ. ಚಂದ್ರ 🌝 ಮನೋಕಾರಕ 🙇 ಆದುದರಿಂದ *ಈಕೆಯ ಸ್ಮರಣೆ ಮನಃಕ್ಲೇಶವನ್ನು 😣😞 ನಿವಾರಿಸುತ್ತದೆ* ಎಂದು ಅರ್ಥೈಸಲಾಗುತ್ತದೆ.
*ಯೋಗದಲ್ಲಿ ಈಕೆ ಮೂಲಾಧಾರ ಚಕ್ರವನ್ನು ಪ್ರತಿನಿಧಿಸುತ್ತಾಳೆ 🐍....*
ಈಕೆಯನ್ನು
"ವಂದೆ ವಾಂಚಿತ ಲಾಭಾಯ ಚಂದ್ರಾರ್ಧ ಕ್ರಿತ ಶೇಖರಂ
ವ್ರಿಶಾರೂಢಂ ಶೂಲಧರಾಂ ಶೈಲಪುತ್ರಿ ಯಶಸ್ವಿನೀಂ" ಎಂದು ಸ್ತುತಿಸಿ ಫಲವನ್ನು ಪಡೆಯಬಹುದು...
ನವರಾತ್ರಿಯ ಪ್ರಥಮ ದಿನ ತಾಯಿ ಶೈಲಪುತ್ರಿ ತಮ್ಮೆಲರಿಗೂ ಸಂಮಂಗಲ ಕರುಣಿಸಲಿ... 🙏🙏
ಪರಿಕಲ್ಪನೆ: "ಯೋಗೀಶ್ ಮಲ್ಲಿಗೆಮಾಡು"
No comments:
Post a Comment
Note: only a member of this blog may post a comment.