ನವರಾತ್ರಿಯು *ತಾಯಿ ರೂಪದಲ್ಲಿರುವ ದುರ್ಗೆಯನ್ನು ಪೂಜಿಸುವ ವಿಶೇಷ ಪರ್ವ.* ಸಕಲ ಜೀವಿಯನ್ನೂ ಮಕ್ಕಳ ರೂಪದಲ್ಲಿ ಪೊರೆಯುವ ತಾಯಿಯ ಕಲ್ಪನೆಯೇ ಅಮೋಘವಾದುದು. *ತಸ್ಮಾತ್ ನವರಾತ್ರಿ ತಾಯಿ ಮಗುವಿನ ಬಾಂಧವ್ಯವನ್ನೂ ಪ್ರತಿನಿಧಿಸುತ್ತದೆ.*
ನವರಾತ್ರಿಯಲ್ಲಿ ಐದನೇ 5ದಿನ ಪೂಜಿಸಲ್ಪಡುವವಳು *"ಸ್ಕಂದ ಮಾತ"*👩👶
*ದಾಕ್ಷಾಯಿನಿ* 🙎 ದಕ್ಷ ಯಜ್ಞದಲ್ಲಿ 🔥🔥 ದೇಹ ತ್ಯಾಗ ಮಾಡಿದ ನಂತರದಲ್ಲಿ *ತಾರಕಾಸುರ*ನೆಂಬ ರಾಕ್ಷಸ 👽 ಇನ್ನು ಶಿವನಿಗೆ 👤 ಮದುವೆ ಆಗಲಾರದು ಎಂಬ ಕಲ್ಪನೆಯಲ್ಲಿ *ಶಿವನ 👤 ಮಗನಿಂದ ತನಗೆ ಸಾವು ⚫ ಬರಲಿ* ಎಂದು ವರ ಪಡೆದನು, ಶಿವನಿಗೆ ಮದುವೆ ಆಗುವುದಿಲ್ಲ, ಹಾಗೆ ಮಗುವು ಆಗುವುದಿಲ್ಲ, ಹಾಗಾಗಿ ತನಗೆ ಸಾವಿಲ್ಲ ಎಂಬ ಕಲ್ಪನೆಯಲ್ಲಿ ಅಮರನಾಗುವ ಪ್ರಯತ್ನಪಟ್ಟನು.... 💪
ಪಾರ್ವತಿಯಾಗಿ *(ಶೈಲಪುತ್ರಿಯಾಗಿ)*🙎ಮರುಜನ್ಮ ಪಡೆದ ದಾಕ್ಷಾಯಿನಿ 👩 ಶಿವನಿಗಾಗಿ *ಬ್ರಹ್ಮಚಾರಿಣಿಯಾಗಿ*👰 ತಪವನ್ನಾಚರಿಸಿದಳು... ತಾರಾಕಾಸುರ ವಧೆಗಾಗಿ ಬ್ರಹ್ಮಚಾರಿಣಿಯ ತಪಸ್ಸಿಗೊಲಿದ ಶಿವ 👤ಆಕೆಯನ್ನು *ಚಂದ್ರಘಂಟ* ರೂಪದಲ್ಲಿ 👸ವರಿಸಿದನು 💐💍
ಇದನ್ನರಿತ ತಾರಕಾಸುರ ಮದುವೆಯಾದ ಶಿವನಿಗೆ👤 ಮಗುವಾದರೆ 👶ತನ್ನ ಮರಣ ನಿಶ್ಚಿತ ಎಂದರಿತು *ಶಿವನ ಸಂತಾನದ ನಾಶದ ಕಡೆಗೆ ಯೋಚಿಸಿದನು💭*
ಲೋಕ ಕಂಟಕ ತಾರಕಾಸುರನ ವಧೆಗೆ ಶಿವ ಸುತನ ಜನ್ಮ ಅನಿವಾರ್ಯವಾದುದರಿಂದ ಶಿವನ ವೀರ್ಯವನ್ನು 💧 ತಾರಕಾಸುರನಿಂದ ಕಾಪಾಡಲು ಅಗ್ನಿ ದೇವ 🔥ಕೊಂಡೊಯ್ಯುತಿರಲು ಅದು ಆಕಾಶಮಾರ್ಗದಲ್ಲಿ ☁☁ ಕೆಳಗುರುಳಿತು ಮತ್ತು ಅದನ್ನು ಪಕ್ಷಿಯೊಂದು 🐧ನುಂಗಿ ಅದರ ತೇಜಸ್ಸಿನ ಬಿಸಿ ⚡⚡ತಡೆಯಲಾಗದೆ *ಕ್ರಿತ್ತಿಕಾ ಲೋಕದ ನದಿಯಲ್ಲಿ 🌊🌊ಮುಳುಗಿತು*
ನದಿಯಲ್ಲಿ 🌊🌊ಸ್ನಾನ 🚿 ಮಾಡುತ್ತಿದ್ದ *ಆರು ಜನ ಕ್ರಿತ್ತಿಕೆಯರ👭👭👭 ಗರ್ಭ ಆ ಸಂದರ್ಭ ಈ ವೀರ್ಯದಿಂದ 💧 ಫಲಿಸಿತು....* ಆರು ತಾಯಂದಿರಿಗೆ ಒಬ್ಬನಾಗಿ ಹುಟ್ಟಿದವನೇ *"ಸ್ಕಂದ"* 👶... ಕ್ರಿತ್ತಿಕೆಯರು ಮಗುವನ್ನು ಹೆತ್ತು ಪಾರ್ವತಿಗೆ ವಾಪಾಸು ಮಾಡಿದರು.... *(surrogate mother)*ಬಾಡಿಗೆ ತಾಯಿಯ ಕಲ್ಪನೆಯನ್ನು ಇಲ್ಲಿ ಸ್ಮರಿಸಬಹುದು...
*ಕ್ರಿತ್ತಿಕೆಯರಿಗೆ ಜನಿಸಿದನಾದರಿಂದ ಕಾರ್ತಿಕೇಯ* ಎಂದೂ *ನವಿಲ ವಾಹನನಾದರಿಂದ ಮಯೂರವಾಹನ* ಎಂದು, *ಆರು ಮುಖ ಇರುವುದರಿಂದ ಆರ್ಮೊಗಂ, ಷಡಾನನ* ಎಂದು *ಸುಬ್ರಹ್ಮಣ್ಯನನ್ನು* ಹಲವು ನಾಮದಿಂದ ಕರೆಯುತ್ತಾರೆ....
ಮಗನನ್ನು ಮರಳಿ ಪಡೆದ ಪಾರ್ವತಿ👩 ಸ್ಕಂದನನ್ನು 👶ತನ್ನ ತೊಡೆಯಲ್ಲಿ ಕುಳ್ಳಿರಿಸಿದಳು ಈ ರೂಪವೇ *"ಸ್ಕಂದ ಮಾತಾ"*👩👶....
ಸ್ಕಂದನನ್ನು ತೊಡೆಯಲ್ಲಿ ಕುಳ್ಳಿರಿಸಿ, ಎರಡು ಕೈಗಳಲ್ಲಿ ಕಮಲವನ್ನು 🌷 ಧಾರಣೆ ಮಾಡಿ ಅಭಯಮುದ್ರಳಾದ 🙌 ಸ್ಕಂದಮಾತ ಪದ್ಮಾಸನ ರೂಪದಲ್ಲಿ ಸ್ಥಿತಳಾಗಿದ್ದಾಳೆ.... ಆಕೆಯನ್ನು *ಪದ್ಮಾಸನ ದೇವಿ* ಎಂತಲೂ ಕರೆಯುತ್ತಾರೆ.....
ಈ ರೂಪವನ್ನು ಪೂಜಿಸುವುದರಿಂದ ದ್ವಿಗುಣ ✌ಫಲ ಪಡೆಯಬಹುದು.... ಕಾರಣ *ಈಕೆಯನ್ನು ಪೂಜಿಸಿದರೆ ಸ್ಕಂದನನ್ನು ಪೂಜಿಸಿದಂತೆ ತನ್ಮೂಲಕ ಸ್ಕಂದ ಹಾಗೂ ಸ್ಕಂದ ಮಾತ ಇಬ್ಬರ ಆಶೀರ್ವಾದ 🙌 ಪಡೆಯಬಹುದು......*
*ಯೋಗದಲ್ಲಿ ವಿಶುದ್ಧ ಚಕ್ರವನ್ನು ಪ್ರತಿನಿಧಿಸುತ್ತಾಳೆ🐍*
ಸ್ರಿಷ್ಟಿ ತತ್ವವನ್ನು 🌱ಈ ರೂಪ ತಿಳಿಸುತ್ತದೆ .... ಸ್ರಿಷ್ಟಿಯಲ್ಲಿ ತಾಯಿ ಮತ್ತು ಮಗುವಿನ ಪಾತ್ರವನ್ನು ವಿಶದಪಡಿಸುತ್ತದೆ...
*ಸಿಂಹಾಸನಾ ಗತಾನಿತ್ಯಂ ಪದ್ಮಾಶ್ರಿತ ಕರದ್ವಯಂ| ಶುಭದಸ್ತು ಸದಾ ದೇವಿ ಸ್ಕಂದ ಮಾತ ಯಶಸ್ವಿನಿ||* ಎಂದು ಸ್ತುತಿಸಿ ಸಕಲ ಸಂಮಂಗಲ ಪಡೆಯಬಹುದು....
ಪರಿಕಲ್ಪನೆ: "ಯೋಗೀಶ್ ಮಲ್ಲಿಗೆಮಾಡು"
No comments:
Post a Comment
Note: only a member of this blog may post a comment.