ನವರಾತ್ರಿಯು *ಅಜ್ಞಾನದ ಮೇಲೆ ಜ್ಞಾನದ ವಿಜಯದ ಸಂಕೇತ* ಎನ್ನುವುದನ್ನು ನಾವು ಈ ಹಿಂದೆಯೇ ತಿಳಿದುಕೊಂಡೆವು. ಬ್ರಹ್ಮಚಾರಿಣಿ ರೂಪವು *ಲೌಕಿಕ ಕಾಮನೆಗಳ ಮೇಲೆ ಅಲೌಕಿಕ ಸತ್ಯದ ಅರಿವನ್ನು ನೀಡುತ್ತದೆ.* ಅಂತೆಯೇ ಕಾತ್ಯಾಯಿನಿ ರೂಪವು *ಅರಿಷಡ್ವರ್ಗಗಳ ಮೇಲಿನ ವಿಜಯವನ್ನೂ ಸಂಕೇತಿಸುತ್ತದೆ.*
ನವರಾತ್ರಿಯ ಆರನೇ ದಿನ 6 ಪೂಜಿಸಲ್ಪಡುವವಳು 🙏 *"ಕಾತ್ಯಾಯಿನಿ"* 👸:
ಅಮರಕೋಶದಲ್ಲಿ ಕಾತ್ಯಾಯಿನಿ ಪಾರ್ವತಿಯ ಎರಡನೇ 2⃣ಹೆಸರಾಗಿದೆ.
*ಕಾತ್ಯಾಯನ* ಎಂಬ *ಋಷಿಯ* ಮಗಳಾಗಿ 👧ಹುಟ್ಟಿದಳು ಹಾಗಾಗಿ ಈಕೆ *ಕಾತ್ಯಾಯಿನಿ* ಎಂದು ಉಲ್ಲೇಖಿಸಲಾಗಿದೆ. *ಮಹಾಕಾಲಿ ಪುರಾಣದಲ್ಲಿ* *ಕಾತ್ಯಾಯನ ಎಂಬ ಋಷಿಯು ಈಕೆಯನ್ನು ಮೊದಲಿಗೆ ಪೂಜಿಸಿದನಾದ್ದರಿಂದ 🙏 ಈಕೆಗೆ ಕಾತ್ಯಾಯಿನಿ ಎಂದು ಹೆಸರು ಬಂತು ಎಂದು ಉಲ್ಲೇಖಿಸಿದೆ....*
ಹಲವಾರು ಪುರಾಣಗಳು 📝📖(ದೇವಿ ಭಾಗವತ, ಮಾರ್ಕಾಂಡೇಯ, ಮಹಾಕಾಲಿ ಪುರಾಣ) ಈಕೆಯ ಬಗೆಗೆ ಪ್ರಸ್ತಾಪಿಸಲಾಗಿದೆ...
ದುಷ್ಟನಾದ *ಮಹಿಷಾಸುರನ* 🐃 ಸಂಹಾರಕ್ಕೆ ಅವತರಿಸಿದವಳು ಇವಳು ಎಂದು ತಿಳಿದುಬರುತ್ತದೆ. ಗಂಡಸರಿಂದ ಸಾವು ಬರದಂತೆ ವರ ಪಡೆದಿದ್ದ ಮಹಿಷಾಸುರ 🐃ಲೋಕ ಕಂಟಕನಾಗಿದ್ದ. ಆತ *ಮಹಿಷಮಂಡಲವನ್ನು* ಆಳುತ್ತಿದ್ದ. ಸಾವೇ ಇಲ್ಲ ಎಂಬ ಭ್ರಾಂತಿಯಲ್ಲಿ ಸುಜನರಿಗೆ ಸಂಕಷ್ಟ ಕೊಡುತ್ತಿದ್ದ ಆತ ಕಾತ್ಯಾಯಿನಿಯ👸 ರೂಪಕ್ಕೆ ಮರುಳಾದ.
ಮಹಿಷಾಸುರ 🐃 ಆಕೆಯಲ್ಲಿ ತನ್ನನ್ನು ವರಿಸುವಂತೆ 💍💘 ಕೇಳಿದನು... ಯುದ್ಧದಲ್ಲಿ 💪 ತನ್ನನ್ನು ಗೆದ್ದಲ್ಲಿ 👍ತಾನು ಮಹಿಷಾಸುರನನ್ನು 🐃ವರಿಸುವುದಾಗಿ 💍ಹೇಳಿದ ಕಾತ್ಯಾಯಿನಿ 👸ಅವನೊಂದಿಗೆ ಯುದ್ಧಕ್ಕೆ 💪ಅಣಿಯಾದಳು.... ಯುದ್ಧದಲ್ಲಿ ಮಹಿಷಾಸುರನನ್ನು 🐃 ವಧಿಸಿದಳು 🔪🔪🔪... ತನ್ಮೂಲಕ *ಮಹಿಷಾಸುರಮರ್ಧಿನಿ* 👸💪🔪🐃 ಎಂಬ ಹೆಸರನ್ನು ಹೊಂದಿದಳು. *(ಮಹಿಷನ ಊರು ಮಹಿಷೂರು, ಮೈಸೂರು ಆಗಿರುವುದನು ಸ್ಮರಿಸಬಹುದು)*
ಮಹಿಷಾಸುರ ಅರ್ಥಾತ್ *ಮಹಿಷ* ಎಂದರೆ *ಕೋಣ* 🐃 *ಅಸುರ* ಎಂದರೆ *ರಾಕ್ಷಸ* 💀. *ಕೋಣ* *ಅಜ್ಞಾನವನ್ನು* ಸಂಕೇತಿಸುತ್ತದೆ. ನಮ್ಮಲ್ಲಿ ದಡ್ಡರನ್ನು ಕೋಣ ಎಂದು ಬೈಯುವ, ಕೋಣದ ಮುಂದೆ ಕಿಂದರಿ ಬಾರಿಸಿದಂತೆ ಎನ್ನುವುದು ರೂಢಿಯಲ್ಲಿದೆ. *ಲೌಕಿಕ ಜಗತ್ತಿನಲ್ಲಿ ಕಾಮ 😍, ಕ್ರೋಧ 😡, ಮೋಹ 😘, ಮಾಯೆ 😎ಎಂಬ ಅಜ್ಞಾನಗಳು ನಮ್ಮನ್ನು ಆಗಾಗ ವರಿಸಲು ಬರುತ್ತವೆ* ಆ ಸಂದರ್ಭದಲ್ಲಿ *ಜ್ಞಾನ ಸ್ವರೂಪಿಣಿಯಾದ ತಾಯಿ ಕಾತ್ಯಾಯಿನಿಯ ಸ್ಮರಣೆ ಅಜ್ಞಾನ ನಾಶಕ್ಕೆ ಹಾಗೂ ಜ್ಞಾನ ಜ್ಯೋತಿ 💡 ಬೆಳಗಲು ಕಾರಣಳಾಗುತ್ತಾಳೆ....*
ಭಾಗವತ ಪುರಾಣದಲ್ಲಿ ಕನ್ಯೆಯರು 👭 ಅರ್ಥಾತ್ *ಮದುವೆಯಾಗದ ಗೋಪಿಕೆಯರು ಕ್ರಿಷ್ಣನೇ ಗಂಡನಾಗಿ ಸಿಗಲಿ ಎಂಬ ಉದ್ದೇಶದಿಂದ ಮಾರ್ಗಶೀರ್ಷ ಮಾಸದಲ್ಲಿ ಯಮುನಾ ನದಿಯ 🌊🌊ತೀರದಲ್ಲಿ ಸ್ನಾನ 🚿ಮಾಡಿ ಒಂದು ತಿಂಗಳ ಕಾತ್ಯಾಯಿನಿ ವ್ರತ ಕೈಗೊಳ್ಳುತ್ತಿದ್ದರು ಎಂದು ಪ್ರಸ್ತಾಪಿಸುತ್ತದೆ....*
ದಕ್ಷಿಣ ಭಾರತದಲ್ಲಿರುವ ಕನ್ಯಾ ಕುಮಾರಿ ದೇವಾಲಯದಲ್ಲಿರುವ *ಕನ್ಯಾಕುಮಾರಿಯು* ಕಾತ್ಯಾಯಿನಿಯ ಸ್ವರೂಪ...
*ಯೋಗದಲ್ಲಿ ಈಕೆ ಆಜ್ಙಾ ಚಕ್ರವನ್ನು ಪ್ರತಿನಿಧಿಸುತ್ತಾಳೆ 🐍....*
*ಕಾತ್ಯಾಯಿನಿ ಮಹಾಮಾಯೆ ಮಹಾಯೋಗಿನ್ಯಧೀಶ್ವರೀ| ನಂದ ಗೋಪ ಸುತಂ ದೇವಿಪತಿಂ ಮೇ ಕುರು ತೆ ನಮಃ ||*ಎಂದು ಸ್ತುತಿಸಿ ಫಲವನ್ನು ಪಡೆಯಬಹುದು...
ಪರಿಕಲ್ಪನೆ: "ಯೋಗೀಶ್ ಮಲ್ಲಿಗೆಮಾಡು"
No comments:
Post a Comment
Note: only a member of this blog may post a comment.