ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-15
ಈ ಶತಮಾನದ ಆರಂಭದಲ್ಲೇ ಟೆನ್ಷನ್ 🤦🏼♂, ಬ್ಯುಸಿ 🏃🏻♀ ಒತ್ತಡ🙆🏼♂ ಎಂಬ ಪದಗಳು ಬಹುವಾಗಿ ಚಾಲ್ತಿಗೆ ಬಂದವು. ತಂತ್ರಜ್ಞಾನದ 🖥ವೇಗವಾದ ಬಳಕೆ ಮತ್ತು ಅಭಿವ್ರದ್ಧಿ ಇದಕ್ಕೆ ಕಾರಣ ಎನ್ನುವುದು ನಮ್ಮೆಲ್ಲರಿಗೂ ತಿಳಿದ ವಿಚಾರ. ಕಾಲದೊಂದಿಗೆ ⏱ಓಟಕ್ಕೆ🏃🏻♀ ಇಳಿದ ನಮಗೆ ಬದುಕು ಒಂದು ಆಸ್ವಾದಿಸುವ ಕ್ರಿಯೆಯಾಗದೆ ಮುಗಿಸಿ ಬಿಡುವ ಪ್ರಕ್ರಿಯೆ ಆಗಿರುವುದು ದುರಂತ.
ನಾವಿಂದು ಬದುಕನ್ನು ಸುಖಿಸುವ (Enjoy) ಪರಿಕಲ್ಪನೆಯಲ್ಲಿದ್ದೇವೆಯೆ ಹೊರತು ಆಸ್ವಾದಿಸುವ (Relish) ಪರಿಕಲ್ಪನೆಯಲ್ಲಿಲ್ಲ. ಹಾಗಾಗಿ ಸುಖಿಸುವುದು (Enjoy) ಎಂದರೆ ಮಾಲ್ ಗೆ🏢 ಹೋಗಿ ಖರೀದಿ 🛒ಮಾಡುವುದು, ಅತಿ ದುಬಾರಿ ಚಿನ್ನಾಭರಣ💍👚👗 ಬಟ್ಟೆಗಳ ಖರೀದಿ, ಪಬ್ 🍻, ಮೂವಿ ಮುಂತಾದೆಡೆಗೆ ಹೋಗಿ ಮಜ ಮಾಡುವುದು ಎಂದು ಭಾವಿಸಿದ್ದೇವೆ.
ಈಗ Enjoy ಮಾಡದೆ ಇನ್ನು ಯಾವಾಗ ಮುದುಕರಾದ ಮೇಲೆ ಮಾಡುವುದೇ ಎನ್ನುವ ಸಿದ್ಧಾಂತವನ್ನೂ ಪ್ರತಿಪಾದಿಸುತ್ತೇವೆ. Enjoy ಮಾಡುವುದರಿಂದ ಏನು ಸಿಗುತ್ತದೆ ಎಂದು ಕೇಳಿದರೆ ನೆಮ್ಮದಿ ಎಂದು ಉತ್ತರಿಸುತ್ತೇವೆ.
ಸುಖಿಸುವುದರಿಂದ ಅರ್ಥಾತ್ Enjoy ಮಾಡುವುದರಿಂದ ಮನಸ್ಸನ್ನು ಖುಷಿ ಪಡಿಸಬಹುದು ಆದರೆ ಅದು ನೆಮ್ಮದಿ ನೀಡುವುದಿಲ್ಲ. ದುಂದುವೆಚ್ಚ 💰,ದುಬಾರಿ ಕಾರು🚖,ದೊಡ್ಡ ಮನೆಗಳು🏤 ಎಲ್ಲವನ್ನೂ(Enjoy) ಸುಖಿಸಬಹುದು ಆದರೆ ಅವು ನೆಮ್ಮದಿ ಕೊಡಬೇಕೆಂದೇನಿಲ್ಲ. ಒಂದು ವೇಳೆ ಹಾಗಾಗಿದ್ದರೆ ದೊಡ್ಡ ಬಂಗಲೆ, ದುಬಾರಿಕಾರು, ಬ್ಯಾಂಕು ಠೇವಣಿ (ಬ್ಯಾಲೆನ್ಸ್) ಇದ್ದವರೆಲ್ಲಾ ನೆಮ್ಮದಿಯಿಂದ ಇರುತ್ತಿದ್ದರು!
ಹಾಗಾಗಿ ನೆಮ್ಮದಿಯನ್ನು ಹುಡುಕಬೇಕಾದರೆ ಸರಳ ಬದುಕಿನ ಕಡೆಗೆ ನೋಡಬೇಕು. ಇರುವುದರಲ್ಲೇ ತೃಪ್ತಿ ಪಡುವ, ಸರಳವಾಗಿ ಬದುಕುವವರು ಮಾತ್ರ ನೆಮ್ಮದಿ ಕಾಣಬಲ್ಲರು. ಬುದ್ಧ ಇದನ್ನೇ *ಆಸೆಯೇ ದುಃಖಕ್ಕೆ ಮೂಲ* ಎಂದು ಹೇಳಿದ. ಆಸೆ ಅತಿ ಲೋಭವನ್ನು ತರುತ್ತದೆ. ಅಲ್ಲಿ ಸುಖಿಸುವ (Enjoy) ಕಲ್ಪನೆ ಮೂಡುತ್ತದೆ. ಅದು ನೆಮ್ಮದಿ ಕೊಡಲಾರದು.
ಸರಳ ಬದುಕು ಮಿತ ಬಳಕೆಯ ತತ್ವದಲ್ಲಿ ಚಿಗುರೊಡೆಯುತ್ತದೆ. ಇರುವ ವಸ್ತುಗಳ ಸಂಪೂರ್ಣ ಬಳಕೆ, ಉಪಯೋಗಿತ ವಸ್ತುಗಳ ಪುನರ್ಬಳಕೆ, ಪ್ರಕೃತಿಯೊಂದಿಗಿನ ಹೊಂದಾಣಿಕೆ, ನೈಸರ್ಗಿಕವಲ್ಲದ ವಸ್ತುಗಳ ತಿರಸ್ಕಾರ ಮುಂತಾದವು ಸರಳ ಬದುಕಿನ ಸೂತ್ರಗಳು. ಹಾಗೆಂದು ತೀರಾ ಋಷಿ ಮುನಿಗಳಂತೇನು ಬದುಕಬೇಕೆಂದೇನಿಲ್ಲ. ಬದಲಾಗಿ ದೇಶೀಯವಾದ ಜೀವನ ಸರಳ ಬದುಕನ್ನು ಕಟ್ಟಿಕೊಡುತ್ತದೆ. ನಾಗರೀಕತೆಯಲ್ಲಿ ದೇಶೀಯತೆ, ಗ್ರಾಮ್ಯ ಸೊಗಡನ್ನು ಉಳಿಸಿದರೆ ಸರಳ ಬದುಕು ಮೈಗೂಡುತ್ತವೆ.
ಇದೇ ಸರಳ ಬದುಕು ಮಾನಸಿಕ ನೆಮ್ಮದಿ 🙇🏽♂🙇🏻♀ಕೊಡುವಂತದ್ದು. ತನ್ಮೂಲಕ ದೈಹಿಕ ವ್ಯಾಧಿ ದೂರಮಾಡುತ್ತವೆ. ಇಂದು ವಿದೇಶಿಗರೂ ಈ ಸರಳ ಬದುಕನ್ನು ನೆಚ್ಚಿ ಭಾರತೀಯ ಆಧ್ಯಾತ್ಮ, ಯೋಗಗಳೆಡೆಗೆ ಒಲವು ತೋರುತ್ತಿದ್ದಾರೆ. ಆದರೆ ನಾವು ಸುಖಿಸುವ(enjoy) ಭರದಲ್ಲಿ ಅದ್ಧೂರಿ ಆಡಂಬರದ ಬದುಕಿಗೆ ಸಿಲುಕಿ ಒತ್ತಡ 🙆🏼♂, ಬ್ಯುಸಿ 🏃🏻♀ಟೆನ್ಷನ್ 🤦🏼♂ಎಂದು ಗೋಳಾಡುತ್ತೇವೆ, ಕಾಲದೊಂದಿಗೆ ಓಡುತ್ತೇವೆ.
ಯೋಗೀಶ್ ಮಲ್ಲಿಗೆಮಾಡು