ಸಂಕ್ರಾಂತಿ ಅಥವಾ ಸಂಕ್ರಮಣ ಎಂದರೆ ಒಂದರಿಂದ ಮತ್ತೊಂದಕ್ಕೆ ಕ್ರಮಿಸುವುದು ಎಂದು ಅರ್ಥ. 🌕🌖🌗🌘🌑 ಸನಾತನ ಧರ್ಮವು ಅತ್ಯಂತ ಪುರಾತನ ಕಾಲಘಟ್ಟದಲ್ಲಿಯೇ ಸೌರಮಂಡಲದಲ್ಲಿ ಉಂಟಾಗುವ ಬದಲಾವಣೆಯ ಕೌತುಕಗಳನ್ನು ಪತ್ತೆ ಮಾಡಿ ಅವುಗಳಿಗನುಸಾರವಾಗಿ ಬದುಕು ನಡೆಸಲು ಆಚರಣೆಗಳನ್ನು ಮಾಡಿರುವುದು ವಿಶೇಷ.
ಸೌರಮಾನ ಕಾಲಗಣನೆಯ ಪ್ರಕಾರ ಒಂದು ವರ್ಷವನ್ನು ಹನ್ನೆರಡು ರಶಿಗಳಿಂದ ಲೆಕ್ಕ ಹಾಕಲಾಗುತ್ತದೆ. ಸೂರ್ಯನು ಈ ಒಂದೊಂದು ರಾಶಿಯಲ್ಲಿ ಸರಾಸರಿ ಒಂದು ತಿಂಗಳು ಇರುತ್ತಾನೆ ಎಂದು ಲೆಕ್ಕ ಹಾಕಲಾಗುತ್ತದೆ, ತದನಂತರ ಆತ ಮತ್ತೊಂದು ರಾಶಿಗೆ ಹೋಗುತ್ತಾನೆ ಎಂದು ಹೇಳುವುದನ್ನು ಸಂಕ್ರಮಣ ಎಂದು ಕರೆಯಲಾಗುತ್ತದೆ.
ಹಾಗಾಗಿ ಸಂಕ್ರಮಣ ಎನ್ನುವುದು ಪ್ರತಿ ತಿಂಗಳು ನಡೆಯುವ ಪ್ರಾಕ್ರತಿಕ ವ್ಯಾಪಾರ. ಆದರೆ ಮಕರ ಸಂಕ್ರಮಣ ವಿಶೇಷವಾಗಿ ಆಚರಿಸಲಾಗುತ್ತದೆ. ಕಾರಣ....??
ಮಕರ ಸಂಕ್ರಾಂತಿ ಅಥವಾ ಮಕರ ಸಂಕ್ರಮಣ ಎನ್ನುವುದು ಸೂರ್ಯನ ಪಥ ಬದಲಾವಣೆಯ ಪರ್ವವಾಗಿದೆ.
ಧನು ರಾಶಿಯಲ್ಲಿದ್ದ ಸೂರ್ಯ ಮಕರ ರಾಶಿಗೆ ಸಂಕ್ರಮಣ ಮಾಡುವ ಕಾಲವೇ ಮಕರ ಸಂಕ್ರಮಣ🌞
ಈ ಸಂದರ್ಭದಲ್ಲಿ ದಕ್ಷಿಣದಿಂದ ಉತ್ತರಾಭಿಮುಖವಾಗಿ ಸೂರ್ಯ ತನ್ನ ಪಥವನ್ನು ಬದಲಾಯಿಸುತ್ತಾನೆ 🌞
ಸೂರ್ಯನು ತನ್ನ ಕಕ್ಷೆಯಲ್ಲಿ ದಕ್ಷಿಣಾಯನ (southward journey) tropic of capricon ನಲ್ಲಿ ಮುಗಿಸಿ ಉತ್ತರಾಯಣ (northward journey) Tropic of Cancer ನಲ್ಲಿ ಮುಂದುವರಿಸುತ್ತಾನೆ 🌎🌍🌏
ಈ ಸಂಕ್ರಮಣ ಪರ್ವ ಕಾಲವು ಮಾಘ ಮಾಸದ ಆಗಮನದ ಸೂಚಕವೂ ಹೌದು ಮತ್ತು ಮುಂದೆ ಬರಲಿರುವ ಬೇಸಗೆ ಕಾಲದ ಸೂಚಕವು ಹೌದು ತಥ ಈ ಪರ್ವ ಸೂರ್ಯ ಪರ್ವ
ನಮ್ಮಲ್ಲಿ ವರ್ಷವನ್ನು ಎರಡು ಭಾಗವಾಗಿ ವಿಂಗಡಿಸಲಾಗುತ್ತದೆ ಉತ್ತರಾಯಣ ಮತ್ತು ದಕ್ಷಿಣಾಯಣ ಎಂದು. ಈ ಪರ್ವ ಉತ್ತರಾಯಣ ಪುಣ್ಯಕಾಲ ಎಂದೂ ಖ್ಯಾತವಾಗಿದೆ.
ಮಹಾಭಾರತದಲ್ಲಿ ಭೀಷ್ಮ ಶರಶಯ್ಯೆಯಲ್ಲಿ ತನ್ನ ಸಾವಿಗಾಗಿ ಇದೆ ಉತ್ತರಾಯಣಕ್ಕಾಗಿ ಎದುರು ನೋಡುತ್ತಿದ್ದ ಎಂಬ ಉಲ್ಲೇಖವಿದೆ.
ಈ ಪರ್ವಕಾಲವು ಮುಂದೆ ಹಗಲು ದೊಡ್ಡದು ಮತ್ತು ರಾತ್ರಿ ಚಿಕ್ಕದಾಗಿಸುವ ಸಂಕ್ರಮಣ ಕಾಲಘಟ್ಟವೂ ಹೌದು🌞🌛
ಇಷ್ಟೆಲ್ಲಾ ಮಹತ್ವ ಇರುವ ಈ ಸಂಕ್ರಾಂತಿಯನ್ನು ಹಬ್ಬವಾಗಿ ಆಚರಿಸುವುದು ನಮ್ಮ ಹಿರಿಯರ ಕಾಲಗಣನೆಯ ಮೇಲಿದ್ದ ಪಾಂಡಿತ್ಯವನ್ನು ಸೂಚಿಸುತ್ತದೆ.🌎🌍🌏
ದಕ್ಷಿಣ ಏಶಿಯದ ಹಲವೆಡೆ ಈ ಹಬ್ಬವನ್ನು ವಿಭಿನ್ನ ಹೆಸರುಗಳಿಂದ ಆಚರಿಸುತ್ತಾರೆ.
ಮಕರ ಸಂಕ್ರಾಂತಿ: ಚತ್ತಿಸಘಡ್, ಗೋವಾ, ಒಡೀಶ, ಹರ್ಯಾಣ, ಬಿಹಾರ್, ಝಾರ್ಖಂಡ್, ಆಂಧ್ರಪ್ರದೇಶ್, ತೆಲಂಗಾಣ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ್, ರಜಸ್ಥಾನ್, ಸಿಕ್ಕಿಂ, ಉತ್ತರಪ್ರದೇಶ್, ಉತ್ತರಾಖಂಡ್, ಪಶ್ಚಿಮ ಬಂಗಾಲ್, ಜಮ್ಮು
ಥಾಯ್ ಪೊಂಗಲ್: ತಮಿಳುನಾಡು
ಉತ್ತರಾಯಣ್: ಗುಜರಾತ್
ಮಘಿ: ಹರ್ಯಾಣ, ಹಿಮಾಚಲ ಪ್ರದೇಶ್, ಪಂಜಾಬ್
ಬೊಗಾಲ್ ಬಿಹು: ಅಸ್ಸಾಂ
ಶಿಶುರ್ ಸೈಂಕ್ರಾತ್:ಕಶ್ಮೀರ್ ಕಣಿವೆ
ಕಿಚ್ಡಿ:ಉತ್ತರ ಪ್ರದೇಶ್, ಪಶ್ಚಿಮ ಬಿಹಾರ್
ಪೌಷ್ ಸಂಗ್ರಾತಿ:ಪಶ್ಚಿಮ ಬಂಗಾಲ
ಮಕರ ಸಂಕ್ರಮಣ:ಕರ್ನಾಟಕ
ಶಕ್ರೈನ್/ ಪೌಷ್ ಸಂಗ್ರಾತಿ: ಬಂಗ್ಲಾದೇಶ್
ಮಘೆ ಸಂಕ್ರಾಂತಿ/ಮಘಿ/ಕಿಚ್ಡಿ ಸಂಕ್ರಾಂತಿ:ನೇಪಾಲ
ಕರ್ನಾಟಕದಲ್ಲಿ ಈ ಸಂಕ್ರಾಂತಿಯನ್ನು ಸುಗ್ಗಿ ಹಬ್ಬವಾಗಿ🌾🌾🌾 ಆಚರಿಸಲಾಗುತ್ತದೆ. ತಟ್ಟೆ ತುಂಬಾ ಎಳ್ಳು, ಬೆಲ್ಲ, ನೆಲಗಡಲೆ, ಕಬ್ಬು, ಒಣಕೊಬ್ಬರಿ, ಸಕ್ಕರೆ ಅಚ್ಚು ಇಟ್ಟು ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಾರೆ. "ಎಳ್ಳು ಬೀರೋದು" ಎಂದೂ ಕರೆಯುತ್ತಾರೆ. 🎋🥥🍥
"ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು" ಅನ್ನುವುದು ಸವಿ ಸಂಬಂಧಕ್ಕಾಗಿ ಸಂಕ್ರಾಂತಿ ಹಬ್ಬದ ಮಾತು 🗣👤
ಎತ್ತುಗಳಿಗೆ ಅಲಂಕಾರ ಮಾಡಿ ಪೂಜೆ ಮಾಡಿ ಕಿಚ್ಚು ಹಾಯಿಸೋದು ಕೂಡ ಪದ್ದತಿ. 🔥 🐃
ಸಂಕ್ರಾಂತಿಗೆ ನಮ್ಮ ಬದುಕು ಕೂಡ ಒಳ್ಳೆತನದ ಕಡೆಗೆ ಸಂಕ್ರಮಣಗೊಳ್ಳಲಿ.... ಎಲ್ಲರಿಗೂ ಸಂಕ್ರಾಂತಿ ಶುಭ ತರಲಿ...🙏🏻🙏🏻
ಸಂಗ್ರಹ ಸಹಿತ ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.