ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ- 2
ಮೊನ್ನೆ 2018 ಆರಂಭವಾದಾಗ ಅತಿಹೆಚ್ಚು ಜನರ ಬಾಯಲ್ಲಿ ಕೇಳಿದ ಮಾತೆಂದರೆ " 2017 ಎಷ್ಟು ಬೇಗ ಕಳೆದು ಹೋಯಿತು ಗೊತ್ತೇ ಆಗಲಿಲ್ಲ" ಎನ್ನುವುದು. ಈ ಮಾತು ಧಾವಂತದ ಬದುಕಿಗೊಂದು ಕೈಗನ್ನಡಿ. ಯಾಕೆ ಹೀಗೆ ಎಂದು ವಿಮರ್ಶಿಸಿದಾಗ ಕಾಲ ಓಡುತ್ತಿದೆ ಎಂದು ಲೋಕಾರೂಢಿಯಲ್ಲಿ ಹೇಳುವುದನ್ನು ಕೇಳುತ್ತೇವೆ. ಕಾಲ ⏰ಸಾವಿರ ಕುದುರೆಗಳ ಮೇಲೋಡುತ್ತವೆ 🏇🏼🏇🏼🏇🏼 ಅನ್ನುವುದೇನೊ ನಿಜ. ಅದು ಯಾರಿಗೂ ಕಾಯದ, ಎಲ್ಲಿಯೂ ನಿಲ್ಲದ ಒಂದು ನಿರಂತರ ಪ್ರಕ್ರಿಯೆ. ಆದರೆ ವಾಸ್ತವ ಏನೆಂದರೆ ಸಾವಿರ ಕುದುರೆಗಳ🏇🏼 ಮೇಲೋಡುವ ಕಾಲದೊಂದಿಗೆ ⏰ನಾವು ಓಟಕ್ಕೆ ಬಿದ್ದಾಗಿನಿಂದ🏃🏼♂🏃🏻♀ ನಮಗೆ ವರ್ಷಗಳು ಕಳೆದು ಹೋಗುತ್ತಿರುವುದು ಗೊತ್ತಾಗುತ್ತಿಲ್ಲ!
ಹೊರ ಜಗತ್ತಿನೊಂದಿಗೆ🌏 ಜಿದ್ದಿಗೆ ಬಿದ್ದಂತೆ ಕಾಲಿಗೆ ಚಕ್ರಕಟ್ಟಿಕೊಂಡು ಓಡುವ🏃🏻♀🏃🏼♂ ನಮ್ಮ ಬದುಕಿಗೆ ಬಿಡುವುಗಳೂ ಅವಸರಗಳ ಗೂಡೇ. ಬೆಳಿಗ್ಗೆ ಎದ್ದಾಗಿನಿಂದ 🌅 ರಾತ್ರಿ ಕಣ್ಣಿಗೆ ನಿದ್ರೆ ಹತ್ತುವವರೆಗೆ 🌌ನಾವು ನಿರಂತರ ಕಾಲದೊಂದಿಗೆ⏰ ಓಟಕ್ಕಿಳಿಯಲೇ 🏃🏼♂🏃🏻♀ಬೇಕಾಗುತ್ತದೆ.
ಮಹಾನಗರಗಳಲ್ಲಂತೂ ಇದರ ವೇಗ ಹೇಳ ತೀರದು. ಸದಾ ಗಿಜುಗುಡುವ ರಸ್ತೆಗಳು 🛣, ನಿಲ್ಲದೇ ಸಾಗುವ ವಾಹನಗಳು 🚕🚙🚎🚓🚑, ಹರಿಯುತ್ತಲೇ ಸಾಗುವ ಜನನಿಬಿಡ ತಂಗುದಾಣಗಳು👭👫👬 ಎಲ್ಲದಕ್ಕೂ ಅವಸರ, ಎಲ್ಲಕ್ಕೂ ಆತುರ. ಮುಂಜಾವುಗಳಲ್ಲಿ ಅರಳಿ ಬಿರಿಯುವ ಹೂವುಗಳಲ್ಲಿ🌸, ಹಾಡು ಹಕ್ಕಿಯ ಆಲಾಪದಲ್ಲಿ🐧, ಬಿಸಿ ಚಹದ ಹದ ಬೆರೆತ ಘಮದಲ್ಲಿ☕ ತಲ್ಲೀನರಾಗುವ ಯಾವ ಅವಕಾಶಗಳನ್ನೂ ಕೊಡದಂತೆ ಅವಸರವೇ ಬದುಕಿನ ಸರದಾರವಾಗಿದೆ. ಸಿಟಿ ಬಸ್ಸು, ಸ್ಕೂಲ್ ಬಸ್ಸು 🚌 ಆಫೀಸು 🏦, ಹೆಬ್ಬೆರಳು ಉಪಯೋಗಿಸಿ ಹಾಜರಿ ಹಾಕುವ ಪಂಚ್👍🏽 ಗಳು ಸಮಯದ ಚೌಕಟ್ಟಿನೊಳಗೇ ನಮ್ಮನ್ನು ಬಂಧಿಸುತ್ತವೆಯಾದ್ದರಿಂದ ಇದು ಒಂದು ಸಹಜ ಶಾಂತಿಯ ಆರಂಭವನ್ನು ಕೊಡಲಾರವು.
ಸಂಜೆಯಲ್ಲಿ ಮತ್ತೆ ಓಡೋಡಿ🏃🏼♂🏃🏻♀ ಹತ್ತುವ ಬಸ್ಸುಗಳು🚎, ಟ್ರಾಫೀಕು ಸಿಗ್ನಲ್ ಗಳ ನಡುವೆ ನುಗ್ಗಿ ನಿಲ್ಲುವ ಕಾರುಗಳು🚘, ಸಂದುಗೊಂದುಗಳಲ್ಲಿ ತೂರಿ ಮುಂದೆ ಸಾಗಿ ಹಿಂದಿಕ್ಕುವ ಬೈಕುಗಳು🏍 ಧಾವಂತದ, ಅವಸರದ ಬದುಕಿನ ನಿಜ ಚಿತ್ರವನ್ನೇ ತೆರೆದಿಡುತ್ತವೆ.
ಕೆಲಸಗಳ ಒತ್ತಡ🙇🏼♂, ಟಾರ್ಗೆಟ್ ಗಳು 📈, ಹೆಚ್ಚುವರಿ ಕೆಲಸಗಳು🤦🏽♀, ಅಸೈನ್ಮಂಟುಗಳು 🗃,ತರಬೇತಿಗಳು🗣👥, ಅಪ್ಡೇಷನ್ಗಳು📚 ಸಾಮರ್ಥ್ಯಾಭಿವ್ರದ್ಧಿ 🧠 ನಮ್ಮನ್ನು ಮತ್ತಷ್ಟು ಹಣಿಸುತ್ತವೆ. ಹೊಸ ಹುದ್ದೆ👑, ಹೆಸರು🏅 , ಸಂಬಳಗಳ 💰ಹಿಂದೆ ಧಾವಂತದ ಬದುಕು🤦🏼♂🤦🏽♀ ಅನಿವಾರ್ಯ !!
ಬೆಳಿಗ್ಗೆ ಮನೆಯಿಂದ ಆಫೀಸಿಗೆ👨🏽💼 ಸಂಜೆ ಆಫೀಸಿನಿಂದ ಮನೆಗೆ 👩🏽💼ಓಡುವ ಬದುಕಿನ ಜಂಜಡದ ನಡುವೆ ಬಿಡುವಾದಾಗ 🆓ಆ ಸಮಯಗಳನ್ನು ತಿಂದು ಹಾಕಲು ಜಾಲತಾಣಗಳಿವೆ🖥 ಮನರಂಜನೆಯೇನೊ ಹೌದು ಆದರೆ, ಅಲ್ಲೂ ತಡವಾದ ಡೌನ್ಲೋಡ್ 👨🏾💻,ನಿಧಾನಗತಿಯ ಅಪ್ಲೋಡ್ 👩🏾💻, ಹೋಗದೇ ಉಳಿದ ಸಂದೇಶಗಳು ⚠ ಯಾಕಿಷ್ಟು ಹೊತ್ತು ತೆಗೆದುಕೊಳ್ಳುತ್ತಿವೆ ಎಂದು ಕಿರಿಕಿರಿ ಉಂಟು ಮಾಡುತ್ತವೆ. ನಮ್ಮ ಅವಸರದ ಬದುಕಿನ ನಡುವೆ ಸಾವಿರ ಕುದುರೆಗಳ ರಥವೇರಿದ ಕಾಲಕ್ಕೆ 3ಜಿ, 4ಜಿಗಳ ವೇಗವೂ 📱📲ಸಾಲುತ್ತಿಲ್ಲ!!!
ಇಷ್ಟೆಲ್ಲಾ ಧಾವಂತಗಳ ನಡುವೆ ಬ್ಯುಸಿ ಎನ್ನುವುದು ಒಂದು ಟ್ರೆಂಡಿನಂತೆಯೇ ಆಗಿರುವುದು ಹೌದು. ಇಂತಹ ಒತ್ತಡದ, ಅವಸರದ ಬದುಕು ಆರೋಗ್ಯ ಹಾಳು ಮಾಡುತ್ತದೆ ಎಂದು ನಮ್ಮೆಲ್ಲರಿಗೂ ತಿಳಿದ ವಿಚಾರವೆ ಆದರೆ, ಧಾವಂತದ ಬದುಕಿನ ನಡುವೆ ನಾವು ಕಳೆದು ಕೊಳ್ಳುವುದು ಬರೀ ಆರೋಗ್ಯವಲ್ಲ. ಅದರೊಂದಿಗೆ ಅಸ್ವಾದಿಸದೇ ಉಳಿಯುವ ಈ ಕ್ಷಣಗಳನ್ನೂ 🌈 ಕಳೆದುಕೊಳ್ಳುತ್ತೇವೆ. ಬಾಲ್ಯವನ್ನು ಇಂದಿಗೂ ನೆನೆಯ ಬಹುದು ಯಾಕೆಂದರೆ ಅಂದು ಅದನ್ನು ಆಸ್ವಾದಿಸಿದ್ದೇವೆ. ಅಲ್ಲಿ ಆತುರವಿರಲಿಲ್ಲ, ಬ್ಯುಸಿ ಎಂಬ ಕಲ್ಪನೆಯಿರಲಿಲ್ಲ. ಕಾಲ ಸಾವಿರ ಕುದುರೆಗಳ ಮೇಲೆಯೇ ಓಡುತ್ತಿತ್ತು. ನಾವು ನಮ್ಮದೇ ತಾಳಕ್ಕೆ ಹೆಜ್ಜೆ ಹಾಕಿದ್ದೆವು.
ಆದರೆ, ಇಂದು ಆಸ್ವಾದಿಸಲು ಕ್ಷಣಗಳಿದ್ದರೂ ಆತುರದ ಬದುಕು ಅನುವು ಮಾಡಿಕೊಡುತ್ತಿಲ್ಲ. ಅವುಗಳನ್ನು ನೆನಪಿನ ಪುಟಗಳಲ್ಲಿ ದಾಖಲಿಸಲು ಪುರುಸೋತು ಎಲ್ಲಿದೆ? ಹಾಗಾಗಿ ಈ ಕ್ಷಣ ಎಲ್ಲೇ ಇರಲಿ, ಹೇಗೆ ಇರಲಿ ಆಸ್ವಾದಿಸೋಣ.
ಮಣ್ಣ ಘಮ, ಹೂವಿನ ಸುವಾಸನೆ, ಹಕ್ಕಿಯ ಹಾಡು, ನಕ್ಷತ್ರದ ಬೆಳಕು, ಮಿಣುಕು ದೀಪ, ತೊನೆಯುವ ಗೊಂಚಲು ಎಲ್ಲವನ್ನೂ ಆಸ್ವಾದಿಸೋಣ. ಕಾಲ ಓಡಲಿ ಸಾವಿರ ಕುದುರೆಗಳ ಮೇಲೆ ಅದರದೇ ಪಾಡಿಗೆ, ನಾವು ಹೆಜ್ಜೆ ಹಾಕೋಣ ನಮ್ಮದೇ ಹಾಡಿಗೆ.
ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.