Thursday, 25 January 2018

ಹಣದ ಮತ್ತು ಕ್ಷಣದ ನಡುವಿನ ಬದುಕು

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-9

ಮನುಷ್ಯನ 👱🏻‍♂👱🏻‍♀ಬದುಕಿನ ಮೂಲ ಉದ್ದೇಶವೇನು ಎಂಬ ಪ್ರಶ್ನೆಗೆ ❓ಮಾನವ ಯುಗ ಯುಗಗಳಿಂದಲೂ ಉತ್ತರ ಹುಡುಕುತ್ತಿದ್ದಾನೆ. ಈ ಉತ್ತರದ ಹುಡುಕಾಟದಲ್ಲಿ ಮನುಷ್ಯ ಅಲೆಮಾರಿತನದಿಂದ 🚶🏻‍♂ಒಂದೆಡೆ ನೆಲೆ ಕಂಡುಕೊಂಡ 🏠, ಸಂಘ ಜೀವಿಯಾದ 👨‍👩‍👧‍👦, ಬೇಟೆ ಬಿಟ್ಟು
ಕೃಷಿ ಕೈಗೆತ್ತಿಕೊಂಡ 🌱, ಕೃಷಿಯಿಂದ ತಂತ್ರಜ್ಞಾನ 🖥, ತಂತ್ರಜ್ಞಾನದಿಂದ ನಾಗರೀಕತೆ🌇 ಬೆಳೆಸಿದ. ಹಣ 💵 ಅಧಿಕಾರದ ⚖ಮದದಿಂದ ಬಲದಿಂದ💪🏼 ದುರ್ಬಲರ ಶೋಷಣೆ, ಏಕಸ್ವಾಮ್ಯಗಳನ್ನು ಹೊಂದುವ ಪ್ರಯತ್ನಗಳನ್ನು ಪಟ್ಟ ಮತ್ತು ಪಡುತ್ತಿದ್ದಾನೆ. ಆದರೆ ಬದುಕಿನ ಮೂಲ ಉದ್ದೇಶ ಸಾಧಿತವಾಗಲೇ ಇಲ್ಲ.

ಧರ್ಮಗಳ ಉಗಮವೂ 🔯🕎☪✝🕉 ದೇವರ ಕಲ್ಪನೆಯು, ಆಚರಣೆ, ಉಪಾಸನೆಗಳೂ ಇದೇ ಮೂಲ ಉದ್ದೇಶಗಳ ಹುಡುಕಾಟದಲ್ಲಿ ಮೈದೆಳೆದವು. ಆಧ್ಯಾತ್ಮ ಅಲೌಕಿಕತೆ ಎಲ್ಲವೂ ಬದುಕಿನ ಮೂಲ ಉದ್ದೇಶವನ್ನು ಕಂಡುಕೊಳ್ಳುವಲ್ಲಿ ಮಹತ್ತರ ಪಾತ್ರವನ್ನು ವಹಿಸಿವೆ.

ಇಂದು ನಾವೆಲ್ಲಾ ಈ ಜಗತ್ತನ್ನು🌎 ಸ್ಪರ್ಧಾತ್ಮಕ ಯುಗ 🏆ಎಂದು ನೋಡುತ್ತಿದ್ದೇವೆ. ವೇಗವಾದ ಬದಲಾವಣೆಗೆ ನಾವು ನಮ್ಮನ್ನು ಹೊಂದಿಸಿಕೊಂಡು ಜಗದೊಂದಿಗೆ ಹೆಜ್ಜೆ🐾 ಹಾಕಬೇಕಿದೆ. ಇಲ್ಲವಾದರೆ ನಾವೆಲ್ಲೋ ಕಳೆದು ಹೋದೆವು ಎಂಬ ಭಯ. ನಮ್ಮ ಮಕ್ಕಳನ್ನು👶🏻 ನಾಳಿನ ಜಗತ್ತಿನ ಸ್ಪರ್ಧೆಗೆ ಅಣಿ ಮಾಡುತ್ತೇವೆ🏋🏻‍♀🏊🏼‍♂ ಆದರೆ ಬದುಕಿನ ಮೂಲ ಉದ್ದೇಶ ಸಾಧಿತವಾಗುತ್ತದೆಯೆ?

ಬಲ್ಲವರು ಹೇಳುತ್ತಾರೆ ಬದುಕಿನ ಮೂಲ ಉದ್ದೇಶ "ಸಂತೋಷವಾಗಿರುವುದು"😊 ಎಂದು. ಅರ್ಥಾತ್ ಈ ಕ್ಷಣವನ್ನು ಆಸ್ವಾದಿಸುವುದು ಎಂದು. ಆದರೆ ಇಂದು ನಮ್ಮ ಸಂತೋಷಗಳ ವ್ಯಾಖ್ಯಾನಗಳೇನು? ದೊಡ್ಡ ಮೊತ್ತದ ಸಂಬಳ 💰, ದೊಡ್ಡ ಮನೆ 🏢, ಅಧಿಕಾರ 🛡, ರೂಪ👸🏼🤴🏻 ಇವುಗಳೇ ?

ಒಂದು ಬಾರಿ ಒಬ್ಬ ಶಿಕ್ಷಕಿ ಮಕ್ಕಳಿಗೆ "what u want to be in Life?" ಎಂಬ ವಿಷಯದ ಮೇಲೆ ಪ್ರಬಂಧ ಬರೆಯಲು ಹೇಳಿದಳಂತೆ. ಹಲವು ಮಕ್ಕಳು ಹಲವು ರೀತಿ ಬರೆದಿದ್ದರಂತೆ. ಕೆಲವರು ವಿಜ್ಞಾನಿ 🔭ಎಂದು, ಇನ್ನು ಕೆಲವರು, ಡಾಕ್ಟರ್💉 ಎಂದು, ಮತ್ತೆ ಕೆಲವರು ಇಂಜಿನೀಯರ್ ಎಂದು ಬರೆದಿದ್ದರು. ಒಬ್ಬ ಹುಡುಗ ಮಾತ್ರ "I want to be Happy in Life" ಎಂದು ಬರೆದಿದ್ದನು.
ಶಿಕ್ಷಕಿ ಆ ಹುಡುಗನನ್ನು ಕರೆದು "John, I think you misunderstood the assignment" ಎಂದು ಹೇಳಿದಳು. ಆ ಹುಡುಗ "Miss, I think you misunderstood Life" ಎಂದುತ್ತರಿಸಿದನು.

ದಿನ ಬೆಳಗಾದರೆ ನಾವೇ ನಮ್ಮ ಕಾಲಿಗೆ ಚಕ್ರ ಕಟ್ಟಿ ಓಡುವುದಕ್ಕೆ🏃🏻‍♀ ಶುರು ಮಾಡುತ್ತೇವೆ. ಮಕ್ಕಳನ್ನೂ ಒಂದು ಸಹಜ ಬಾಲ್ಯವನ್ನೂ ಅನುಭವಿಸಲು ಬಿಡದೆ ಶಾಲೆ, ಪರೀಕ್ಷೆ, ಸ್ಪರ್ಧೆಗಳ ಜೊತೆ ಓಡಲು ಹಚ್ಚುತ್ತೇವೆ. ನಗರಗಳ ಮುಂಜಾನೆಯ ಮತ್ತು ಮುಸ್ಸಂಜೆಗಳ ಬ್ಯುಸಿ ಟ್ರಾಫೀಕು ನಮ್ಮ ಬದುಕಿನ ಓಟದ ಸಂಕೇತ. ನಮ್ಮ ಬದುಕಿನ ಮೂಲ ಉದ್ದೇಶವೇ ದುಡಿದು ತಿಂದು ಜೀವಿಸುವುದು ಎಂದಾಗಿದೆ, ನಾವು ಅದಕ್ಕಾಗಿ ಇಡೀ ಜೀವನ ಒತ್ತಡದ ಓಟ ಓಡುತ್ತೇವೆ.

ಹಣವೊಂದೇ 💰ನೆಮ್ಮದಿ ಕೊಡುತ್ತವೆ ಎಂಬ ನಂಬಿಕೆಯ ಹಿಂದೆ ಜನ ಸಮಯವನ್ನೆಲ್ಲ 🕙ವ್ಯಯಿಸುತ್ತಾರೆ. ಹಣ ಆತ್ಮವಿಶ್ವಾಸ ಕೊಡಬಹುದು ಆದರೆ ನೆಮ್ಮದಿಯನಲ್ಲ. ನೆಮ್ಮದಿ ಈ ಕ್ಷಣವನ್ನು ಆಸ್ವಾದಿಸುವುದರಲ್ಲಿ ಸಿಗುತ್ತದೆ. ಹಾಗೆ ಆಸ್ವಾದಿಸಿದಾಗ ಮಾತ್ರ ಸಂತೋಷದ ನಿಜ ಅನುಭವವಾಗುತ್ತದೆ. ಹಾಗೆ ಅನುಭವಿಸುವ ಸಂತೋಷವೇ ಬದುಕಿನ ಮೂಲ ಉದ್ದೇಶ.

ಮಂಜು ಕವಿದ ಚಳಿಗೆ ಬಿಸಿ ಚಹದ ☕ಗುಟುಕು ಹೀರುವಲ್ಲಿ, ಕಡಲ ಅಲೆಗಳನ್ನು🌊 ಸುಮ್ಮನೆ ಕೂತು ಆಲಿಸುವುದರಲ್ಲಿ, ಒಂದೊಳ್ಳೆ ಸಂಗೀತ🎤 ಕೇಳುವುದರಲ್ಲಿ, ಮನೆಯ ಮುಂದಿನ ಮರದ ಮೇಲಿನ ಹಕ್ಕಿ🐤 ಹಾಡಿನಲ್ಲಿ, ಕಾಡು ಹರಟೆಯ ಸಂಜೆಯ ಬೆಳದಿಂಗಳ ಬೆಳಕಲ್ಲಿ, ಅಸಹಾಯಕತೆಯಲ್ಲಿರುವವರ ನೋವಿಗೆ ಸ್ಪಂದಿಸುವಲ್ಲಿ, ಸಹಾಯಹಸ್ತ 🤚🏻 ಚಾಚುವದರಲ್ಲಿ, ಬೇರೆಯವರ ನಗುವಿಗೆ ನಾವು ಕಾರಣವಾಗುವುದರಲ್ಲಿ ನೆಮ್ಮದಿ ಸಿಗುತ್ತವೆಯೇ ವಿನಃ ಹಣದಲ್ಲಿ ಅಲ್ಲ. ಹಾಗಾದರೆ ಹಣ ಬೇಡವೆ? ಖಂಡಿತವಾಗಿಯೂ ಬೇಕು. ಹಣ ಅಗಾಧ ಆತ್ಮ ವಿಶ್ವಾಸ ನೀಡುತ್ತವೆ ಆದರೆ, ಹಣದ ಹಿಂದೆಯೇ ಓಡುವ ನಾವು ಈ ಕ್ಷಣಗಳನ್ನು ಆಸ್ವಾದಿಸುವುದನ್ನು ಕಲಿಯಲೇಬೇಕು.

ಹಣ💰 ಮತ್ತು ಕ್ಷಣ ⏳ಎರಡೂ ಮುಖ್ಯವೆ. ಹಣ ಇದ್ದಲ್ಲಿ ಕ್ಷಣಗಳು ಸುಖವಾಗಿರಬಹುದು ಹಾಗೆಂದು ಹಣ ಮಾಡುವುದಕ್ಕೆಂದೇ ಕ್ಷಣಗಳನ್ನೆಲ್ಲಾ ಮೀಸಲಿಡುವುದು ಎಷ್ಟು ಸಮಂಜಸ? ದೊಡ್ಡೆ ಮನೆ ಹಣದಿಂದ ಬರುತ್ತವೆ ಆದರೆ ದೊಡ್ಡ ಮನಸ್ಸು ಈ ಕ್ಷಣದ ನಶ್ವರತೆಯ ಅರಿವಾದಾಗ ಹುಟ್ಟುತ್ತವೆ, ದುಬಾರಿ ಹಾಸಿಗೆ ಹಣದಿಂದ ಬರುತ್ತವೆ ಆದರೆ ಒಳ್ಳೆಯ ನಿದ್ರೆ ಆ ಕ್ಷಣ ಅದನ್ನು ಆಸ್ವಾದಿಸುವವರಿಗೆ ಮಾತ್ರ ದೊರಕುತ್ತವೆ. ಹಣ ಮತ್ತು ಕ್ಷಣದ ನಡುವೆ ಮೊದಲ ಅಕ್ಷರ ಮಾತ್ರ ವ್ಯತ್ಯಾಸ ಆದರೆ ಇವು ಬದುಕಿಗೆ ಬಹು ದೊಡ್ಡ ವ್ಯತ್ಯಾಸವನ್ನೇ ಮಾಡುತ್ತವೆ.

ಮಾಡಿಟ್ಟ ಹಣ 💰ನಾವು ಸತ್ತ ಮೇಲೂ ಇಲ್ಲೆ ಇರುತ್ತವೆ, ನಮ್ಮ ಈ ಕ್ಷಣ⏳ ಎನ್ನುವುದು ನಮ್ಮ ಸಾವಿನೊಂದಿಗೆ ಮುಗಿದು ಹೋಗಿಬಿಡುತ್ತವೆ.

ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.