Tuesday, 30 January 2018

ಬಿಳಿ ಬಣ್ಣಕ್ಕೆ ಪ್ರಾಮುಖ್ಯತೆ ಕೊಡುವ ಮಾಧ್ಯಮಗಳ ನೈತಿಕತೆ ಏನು?

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-14

ನಮ್ಮ ಯೋಚನಾ ಲಹರಿಯ🧠 ಮೇಲೆ ಮಾಧ್ಯಮಗಳು 📺ಗಾಢವಾದ ಪ್ರಭಾವವನ್ನು ಬೀರುವುದನ್ನು ನಾವೆಲ್ಲರೂ ಮನಗಂಡಿದ್ದೇವೆ. ಸುಶಿಕ್ಷಿತರು 👨🏽‍🎓👩🏽‍🎓ಎಂದು ಕರೆಸಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲೂ ನಾವು ಅನೇಕ ಸಾರಿ ಮಾಧ್ಯಮ📺 ವಿಶ್ಲೇಷಣೆಯೊಂದಿಗೆ ತೇಲಿಹೋಗುತ್ತೇವೆ. ಅದು ರಾಜಕೀಯ, ಚಲನಚಿತ್ರ ಅಥವಾ ಸಾಮಾಜಿಕ ವಿಚಾರಗಳೇ ಇರಬಹುದು. ಒಟ್ಟಿನಲ್ಲಿ ಮಾಧ್ಯಮ 📺ತನ್ನ ನಿಲುವನ್ನು ಜನರ ಮೇಲೆ ಹೇರುವುದು ಸತ್ಯ.

ಹೀಗೆ ಒಂದು ಕಾಲಘಟ್ಟದ ಜನರ ಮನಸ್ಥಿತಿಗಳ ಮೇಲೆ ತನ್ನ ಅಗಾಧ ಪರಿಣಾಮವನ್ನು ಬೀರುವ ಮಾಧ್ಯಮಗಳು 📺 ಅತ್ಯಂತ ಜವಾಬ್ದಾರಿಯುತ, ನೈತಿಕ ತಳಹದಿಯಲ್ಲಿ ನಡೆಯಬೇಕಾಗುತ್ತದೆ. ಸಮಾಜದ🌎 ಅಂಕುಡೊಂಕುಗಳನ್ನು ಮಾಧ್ಯಮ 📺ಒಂದು ಧ್ವನಿಯಾಗಿ 🗣ಹೇಳಬೇಕಾಗುತ್ತದೆ. ವಾರ್ತೆಗಳು, ಧಾರಾವಾಹಿಗಳು, ಚಲನಚಿತ್ರಗಳು ಮುಂತಾದ ಎಲ್ಲ ವಿಧವಾದ ಮಾಧ್ಯಮಗಳು ಇದನ್ನು ಮಾಡಬೇಕಿದೆ. ಆದರೆ, ಹಾಗಾಗುತ್ತಿದೆಯೆ ಎನ್ನುವುದೇ ಪ್ರಶ್ನೆ. ಸಮಾಜದ ತಪ್ಪುಗಳಿಗೆ ಧ್ವನಿಯಾಗುವ 🗣ಮಾಧ್ಯಮಗಳೇ ತಪ್ಪು ಮಾಡಿದರೆ? ಟಿ.ಆರ್.ಪಿ ಹೆಸರಲ್ಲಿ ಶ್ವೇತ ವರ್ಣಕ್ಕೆ 👩🏻 ಪ್ರಶಾಸ್ತ್ಯ ಕೊಟ್ಟು ಜನರ ಮನೋವಲಯದಲ್ಲಿ ಕಪ್ಪು ವರ್ಣವನ್ನು 👩🏿 ಮೂಲೆಗುಂಪು ಮಾಡುತ್ತಿರುವುದು ಅಕ್ಷಮ್ಯ. 

ನೀವು ಯಾವುದೇ ವಾಹಿನಿಗಳನ್ನು ನೋಡಿರಿ ಅಲ್ಲಿ ನಿರೂಪಣೆ ಮಾಡುವ, ಜಾಹೀರಾತು ನೀಡುವ, ವಾರ್ತೆ ಓದುವ, ನಟನೆ ಮಾಡುವ ಬಹುತೇಕರು ಬಿಳಿ ಬಣ್ಣದವರು 👩🏼‍💼. ಅರ್ಥಾತ್, ಶ್ಯಾಮಲ ವರ್ಣದ 👩🏾‍💼ವ್ಯಕ್ತಿಗಳ ಸಂಖ್ಯೆಯು ಮುಂಪರದೆಯ (ಓನ್ ಸ್ಕ್ರೀನ್) ಮೇಲೆ ಶೇಕಡವಾರು ಅತ್ಯಂತ ಕಡಿಮೆ! ಜಾಹೀರಾತುಗಳೇ ನೋಡಿರಿ- ಎಲ್ಲಾ ಲೇಪಗಳು (ಕ್ರೀಮ್) ನಿಮ್ಮ ಕಪ್ಪು ಬಣ್ಣವನ್ನು 👨🏿 ಬಿಳಿ 👨🏻ಮಾಡುವ ಕುರಿತೇ ಪ್ರಚಾರ ಮಾಡುತ್ತವೆ. ಕಪ್ಪು ಬಣ್ಣ ಆತ್ಮವಿಶ್ವಾಸ ಕುಂದಿಸುತ್ತವೆ, ಬಿಳಿ ಬಣ್ಣ ಆತ್ಮ ವಿಶ್ವಾಸ ಹೆಚ್ಚಿಸುತ್ತವೆ ಅನ್ನುವಂತಹ ಜಾಹೀರಾತುಗಳು, ಎಲ್ಲದಕ್ಕೂ ಪಾಶ್ಚಾತ್ಯ ದೇಶದ ಬಿಳಿ ಚರ್ಮದವರೆಡೆಗೆ ಕಣ್ಣುನೆಟ್ಟು ಅವರನ್ನೇ ಅನುಕರಿಸುವ ಭಾರತೀಯರಿಂದ, ಬಹುಕೋಟಿ ಆದಾಯವನ್ನು 💰 ಸುಲಭವಾಗಿಯೇ ಮಾಡಿದವು. ನಮ್ಮ ಸಂವಿಧಾನವು 📖 ಸಮಾನತೆಯನ್ನು ಹೇಳುವಾಗ ಧರ್ಮ, ಜಾತಿಗಳ ಜೊತೆಗೆ ಬಣ್ಣವನ್ನೂ ಉಲ್ಲೇಖಿಸಿದೆ. ಆದರೆ, ಜಾಹೀರಾತುಗಳು ಬಿಳಿ ಮತ್ತು ಕಪ್ಪಿನ ನಡುವಿನ ಅಸಮಾನತೆ ತೋರುತ್ತಿರುವುದು ಸಂವಿಧಾನ ಬಾಹಿರವಲ್ಲವೆ?

ಹಿರಿತೆರೆ, ಕಿರುತೆರೆಗಳ ಮುಖ್ಯ ನಟನಟಿಯರೂ ಕೂಡ ಹೆಚ್ಚಿನ ಸಂದರ್ಭದಲ್ಲಿ ಬಿಳಿ ಬಣ್ಣದವರೇ ಆಗಿದ್ದಾರೆ!🧚🏻‍♀🧚🏻‍♂ ವಾರ್ತೆಗಳನ್ನು ಓದುವವರು, ನಿರೂಪಕರು ಇವರಲ್ಲಿಯೂ ಕೂಡ ಬಿಳಿ ಬಣ್ಣದವರೇ ಅಧಿಕ   ಮಾಧ್ಯಮದ ಈ ಪ್ರಭಾವವೂ ಇಂದು ಜನರಲ್ಲಿ ಕಪ್ಪಿನ 🌚ಬಗ್ಗೆ ತಾತ್ಸಾರ ಮೂಡಲು ಕಾರಣವಾಗಿದೆ. ಸ್ತ್ರೀಯರ ಸೌಂದರ್ಯ ಮೀಮಾಂಸೆಯಲ್ಲೂ ಬಿಳಿ👸🏻 ಬಣ್ಣಕ್ಕೆ ಪ್ರಾಶಸ್ತ್ಯ, ಕಪ್ಪು 👩🏿‍💼 ಬಿಳಿಯ 👩🏼‍💼ಹೋಲಿಕೆ, ದಕ್ಷಿಣ ಭಾರತ 👩🏽‍💼ಮತ್ತು ಉತ್ತರ ಭಾರತದ 👩🏻‍💼ಬಿಳಿಗಳ ಹೋಲಿಕೆ, ಭಾರತದ 👩🏻‍💼ಮತ್ತು ವಿದೇಶದ 👩🏼‍💼ಬಿಳಿಯ ಹೋಲಿಕೆ ಹೀಗೆ ಬಿಳಿಗಳ ವಿಭಾಗೀಕರಣ ಮುಂದುವರೆಯುತ್ತಲೇ ಹೋಗುತ್ತವೆ.

ಮಾಧ್ಯಮಗಳು ತನ್ನೊಳಗೆ ಹುದುಗಿಸಿರುವ ಬೆಳ್ಳಗಿರುವುದು ಮಾತ್ರ ಟಿ.ಆರ್.ಪಿ ತಂದುಕೊಡುತ್ತದೆ ಎನ್ನುವ ಸಿದ್ಧಾಂತವನ್ನು ತ್ಯಜಿಸಿ ಕಪ್ಪಿನ ಬಗೆಗೆ ತನ್ನ ನೈತಿಕ ನಿಲುವನ್ನು ಸ್ಪಷ್ಟಪಡಿಸಬೇಕು. ಕಪ್ಪು 🌚ಮತ್ತು ಬಿಳಿ🌝 ಬಣ್ಣದ ಸಮಾನ ಸ್ವೀಕಾರದ ಎಲ್ಲಾ ಸಾಧ್ಯತೆಗಳಿಗೆ ಮಾಧ್ಯಮ ಆಲೋಚಿಸಬೇಕು. ಬಣ್ಣಗಿಂತಲೂ ಕಲೆ, ಪ್ರತಿಭೆ, ಸಾಮರ್ಥ್ಯಗಳಿಗೆ ಬೆಲೆಕೊಡಬೇಕು. ಹೀಗಾದಾಗ ಮಾತ್ರ ದೇಶದ ಉದ್ದಗಲಕ್ಕೂ ಚಾಚಿರುವ ಬಣ್ಣ ತಾರತಮ್ಯ ತೊರೆಯಲು ಸಾಧ್ಯ.

ಈ ಅಂಕಣ ಬರೆಯುವಾಗ ಕವಿ ಸಿದ್ಧಯ್ಯ ಪುರಾಣಿಕರ “ಪೂರ್ವಾಂಗನೆ ಪಶ್ಚಿಮಾಂಗನೆಗೆ” ಎಂಬ ಕವಿತೆ ನೆನಪಾಯಿತು.

ನಾ ಕರಿಯಳೆಂದು ನೀ ಜರಿಯಬೇಡ ಬಿಳಿ ಗೆಳತಿ ಗರ್ವದಿಂದ
ಕಪ್ಪಿಗಿಂತ ಬಿಳಿ ಬಣ್ಣ ಹೆಚ್ಚು ಹೇಳು ಯಾವ ಹಿರಿಮೆಯಿಂದ
ಬಿಳಿಯ ಮೋಡ ನೀಡುವುದು ಇಳೆಗೆ ಬರಿ ಬೆಡಗು ಅಂದ ಚೆಂದ
ಇಳೆಯ ಜೀವ ಮಳೆ ಬರುವುದಕ್ಕ ಕರಿ ಮೋಡ ಮಾತ್ರದಿಂದ
ಓ ಪಶ್ಚಿಮಾಂಗನೆ ನಾ ಪೂರ್ವಾಂಗನೆ

ಕಣ್ಗೆ ನೋಟ ಕರಿಯಾಲಿಯಿಂದಲೆ, ಕುರುಡು ಬರಿಯ ಬಿಳುಪು
ಬಿಳಿಯ ಕೇಶಗಳೆ ಮುಪ್ಪು, ಯವೌನದ ವಿಜಯ ಧ್ವಜವು ಕಪ್ಪು
ಕಪ್ಪು ಭೂಮಿಯಲೆ ಬೆಳೆಯ ಬೇಕು ನೀ ತೊಟ್ಟ ನೂಲ ಬಿಳುಪು
ಬಿಳಿಯ ಮಂಜಿನಲಿ ಬೆಳೆಯಬಹುದೆ? ಬೆಳೆಯುವುದು ಎಲ್ಲ ಕಪ್ಪು

ಕರಿಯಳಾದರು ಉದಯ ನಾನು, ನೀನಿರುವೆ ಅಸ್ತಮಾನ
ನೀನೆ ತಾವರೆಯು, ನಾನೆ ನೈದಿಲೆಯು, ಒಂದೆ ಜಲ ವಿಧಾನ
ನೀ ಬಿಳಿಯ ಹಾಳೆ, ನಾ ಕಪ್ಪು ಮಸಿಯು, ಆಗೋಣ ಪ್ರೇಮ ಕವನ
ದೇಹಕ್ಕೆ ಬಣ್ಣ, ದೇಶಕ್ಕೆ ಬಣ್ಣ, ಆತ್ಮಕ್ಕೆ ಯಾವ ಬಣ್ಣ?
ಓ ಪಶ್ಚಿಮಾಂಗನೆ ನಾ ಪೂರ್ವಾಂಗನೆ

ಕಪಿಲೆ ನಾನು ನನ್ನ ಕೆಚ್ಚಲ್ಲಲ್ಲಿ ಬಿಳಿ ಹಾಲಾಗಿ ಬಾರೆ
ಮೃಗವು ನೀನು ನಿನ್ನ ನಾಭಿಯಲ್ಲಿ ಕಸ್ತೂರಿಯಪ್ಪೆ ಬಾರೆ
ನೀಲ ಮೇಘ ನಾ, ನನ್ನ ಉದರದಿ ಮಿಂಚಿ ನೀನು ತೋರೆ
ನೀಲ ಭೃಂಗ ನಾ, ಶ್ವೇತ ಪದ್ಮ ನಿನ್ನೆದೆಯ ನಗುವ ಹೀರೆ

ಈ ವರ್ಣ ಮೈತ್ರಿ ಅನಿವಾರ್ಯ ಗೆಳತಿ ಸರ್ವತ್ರ ವಿಶ್ವ ಪ್ರಕೃತಿ
ತೋರುವುದು ಇದನೆ, ಸಾರುವುದು ಇದನೆ, ಇದೆ ನೋಡು ಅದರ ನೀತಿ
ಹೊತ್ತಾರೆ ಕೆಂಪು, ಮತ್ತಷ್ಟು ಹಳದಿ, ಹೊತ್ತೇರೆ ಬಿಳುಪು ಗೆಳತಿ
ನಿನ್ನಂದ ಬಿಳುಪು, ಇದೊ ನೆರಳು ಕಪ್ಪು, ಎಲ್ಲಿಹುದು ವೈರ ಗೆಳತಿ?
ಓ ಪಶ್ಚಿಮಾಂಗನೆ ನಾ ಪೂರ್ವಾಂಗನೆ

ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.