Saturday, 27 January 2018

ನಾವಿಲ್ಲದೆ ಜೇನು ನೊಣ ಬದುಕಬಹುದು ಆದರೆ ಜೇನು ನೊಣವಿಲ್ಲದೆ ನಾವು?

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-11

ಯುಗಯುಗಾಂತರದಿಂದ🌍 ಮಾನವ ಪ್ರಕೃತಿಯ ☄ಮೇಲಿನ ಹಿಡಿತಕ್ಕಾಗಿ ಪ್ರಯತ್ನ ಪಡುತ್ತಲೇ ಇದ್ದಾನೆ. ಪ್ರಕೃತಿಯ ಗುಡುಗು, ಸಿಡಿಲು ⚡ ಮಳೆಯ ☔ವೈಚಿತ್ರ್ಯಕ್ಕೆ ಬೆಚ್ಚಿಬಿದ್ದ ಕಾಡುಮಾನವನಿಂದ ಹಿಡಿದು ಇಂದು ಬೇಕಾದಾಗ ಮಳೆ ಸುರಿಸುವ ಮೋಡಬಿತ್ತನೆ🌨 ತನಕ ಬೆಳೆದ ನವಯುಗದ ಮಾನವ ಸಾಮರ್ಥ್ಯವನ್ನು ಸಾಧಿಸಿದ್ದಾನೆ.

ನೂತನ ತಂತ್ರಜ್ಞಾನ 🔭, ಹೊಸ ಆವಿಷ್ಕಾರಗಳು 🖥ಮಾನವನ ಮನೋಬಲದ 🧠ಯಶೋಗಾಥೆ. ಆತನ ಸಮಬಲ 💪🏼ಯಾರಿಲ್ಲ ಎಂಬ ಮನೋಸ್ಥೈರ್ಯಗಳು ತಾನೇ ಸರ್ವ ಶ್ರೇಷ್ಠ ಎಂದು ಮಾಡಿದೆ. ಆದರೆ ನಮ್ಮ ಸಾಮರ್ಥ್ಯ ಈ ವಿಶ್ವದಲ್ಲಿ ಬೇರೆ ಜೀವಿಗಳಿಗಿಂತ ಎಷ್ಟು ಹೆಚ್ಚು?

ಇಡೀ ಜೀವಸಂಕುಲ ಬದುಕುಳಿಯುವ ಕ್ರಿಯೆಯಲ್ಲಿ ಜೇನು ನೊಣಗಳ 🐝ಪಾತ್ರ ಹಿರಿದು. ಆದರೆ ಆಗಸವನ್ನೇ ಭೇದಿಸಿದ, ಕಡಲನ್ನೇ ಸೀಳಿದ ಮಾನವನ ಎದುರು ಆ ಪುಟ್ಟ ಜೀವಿ ಯಾವ ಲೆಕ್ಕ ? ಆದರೂ ನಾವಿಲ್ಲದೆ ಆ ಜೀವಿ 🐝ಸೊಗಸಾಗಿ ಬದುಕಬಹುದು ಆದರೆ ಜೇನು ನೊಣಗಳು🐝 ಇಲ್ಲದೇ ನಾವು ಬದುಕಲು ಸಾಧ್ಯವೆ?

ಐನ್ ಸ್ಟೀನ್ ಎಂಬ ಮಹಾವಿಜ್ಞಾನಿ ಹೇಳಿರುವಂತೆ " ಒಂದು ವೇಳೆ ಈ ಜೇನುನೊಣಗಳು🐝 ಈ ಭೂಮಿಯಿಂದ ಮಾಯವಾದರೆ ಮಾನವರು🚶🏽‍♀🚶🏻‍♂ ಬರೀ ನಾಲ್ಕುವರ್ಷದಲ್ಲಿ ನಾಶ ಹೊಂದುತ್ತಾರೆ ಎಂದು.

ಪರಾಗ ಸ್ಪರ್ಶ 🐝🌸ಎಂಬ ಕ್ರಿಯೆಯನ್ನು ಮಾಡಿ ಹೂ ಕಾಯಿ ಕಟ್ಟುವಂತೆ ಮಾಡಿ ನಿರಂತರ ಹೊಸ ಬೀಜಗಳ ಸೃಷ್ಟಿಗೆ ಕಾರಣವಾಗುವ ಆ ಮೂಲಕ ಪ್ರಕೃತಿಯ ಮುಂದುವರಿಕೆಗೆ ಸಹಕರಿಸುವ ಜೇನು ನೊಣಗಳ ಬದುಕು ಸೋಜಿಗ. ಹೀಗೆ ಈ ಪ್ರಕೃತಿಯಲ್ಲಿ ಮನುಷ್ಯನನ್ನು ಬಿಟ್ಟು ಬೇರೆಲ್ಲಾ ಜೀವಿಯೂ ಮತ್ತೊಂದು ಜೀವಿಯ ಆಧಾರವಾಗಿದೆ ಆದರೆ ಮನುಷ್ಯನೊಬ್ಬನೆ ಇಲ್ಲಿ ಬೇರಾವ ಜೀವಿಗೂ ಆಧಾರವಲ್ಲ. ಹಾಗಾಗಿ ಈ ಭೂಮಿಯಿಂದ 🌏ಮಾನವ ಹೋದರೆ ಬೇರಾವ ಜೀವಿಗೂ ವ್ಯತ್ಯಾಸವಾಗಲಾರದು. ಆದರೆ ನಮ್ಮ ಆಧಾರವಾಗಿರುವ ಇರುವೆ 🐜, ಚಿಟ್ಟೆ 🦋, ಜೇನು🐝, ಮೀನು 🐠ಹಾವು 🐍 ದನ 🐄ಗಿಡ 🌱 ಮರ 🌳 ಇವೆ ಮುಂತಾದ ಹಲವು ಪ್ರಾಣಿ ಪಕ್ಷಿ, ಸಸ್ಯ ವರ್ಗಗಳು ಮಾಯವಾದರೆ ನಮಗೆ ಬದುಕುವುದೇ ಕಷ್ಟ.

ಮಾನವ ಅದೆಂತಹುದೇ ಸಾಧನೆಗಳನ್ನು ಮಾಡಿದರೂ ಅನ್ಯ ಜೀವಿಗಳ ಆಧಾರವಿಲ್ಲದೆ ಬದುಕು ಅಸಾಧ್ಯ ಎಂದ ಮೇಲೆ ನಮ್ಮ ಬೀಗುವಿಕೆ, ದರ್ಪಗಳಿಗೆ ಯಾವ ಅರ್ಥವೂ ಇಲ್ಲ. ನಾವು ಇಲ್ಲಿ ಯಾವ ಜೀವಿಯನ್ನೂ ಆಳಲು ಬಂದವರಲ್ಲ ಬದಲಾಗಿ ಅವುಗಳೊಂದಿಗೆ ಸಹಬಾಳ್ವೆ ಮಾಡುವುದಕ್ಕಾಗಿ ಬಂದಿದ್ದೇವೆ.

ಪ್ರೀತಿಯ 💞ಬಗ್ಗೆ ಪುಟಗಟ್ಟಲೆ ವ್ಯಾಖ್ಯಾನ ಕೊಡುವ, ಚಲನಚಿತ್ರಗಳನ್ನು ಮಾಡುವ ಮಾನವ ತಿಳಿಯದೇ ಉಳಿದದ್ದು ಏನಂದರೆ ಪ್ರೀತಿಯೆಂದರೆ ಪಡೆದುಕೊಳ್ಳುವುದಲ್ಲ, ಅಗಾಧವಾಗಿ ಮತ್ತೊಬ್ಬರಿಗೆ ಅಪೇಕ್ಷೆಯಿಲ್ಲದೆ ಕೊಡುವಂತದ್ದು. ಪ್ರಕೃತಿಯ ಎಲ್ಲಾ ಜೀವಿಗಳು ಸದ್ದಿಲ್ಲದೆ ನಿರಂತರವಾಗಿ ಇದನ್ನು ಮಾಡುತ್ತಿದೆ. ನಾವು??

ದೂರ ಬಾನ ಅಂಚಿನಿಂದ
ಮಳೆಯ ಮೋಡ ತೇಲಿ ಬಂದು
ಊರ ತುಂಬ ಹನಿದು ಸುರಿಯೆ
ಅದುವೆ ಪ್ರೀತಿಯು

ಸುರಿದ ಮಳೆಯ ಹನಿಯ ಹೀರಿ
ಭುವಿಯ ಒಡಲ ಬೀಜ ತಾನು
ಒಡೆದು ಮೇಲೆ ಬಂದು ನಗಲು
ಅದುವೆ ಪ್ರೀತಿಯು

ಬಳ್ಳಿಯಾಗಿ ಹಂಬಿ ಹಬ್ಬಿ
ಬೇರು ಆಳಕಿಳಿಸಿಕೊಂಡು
ಮಣ್ಣ ಸತುವ ಹೀರಿ ಬೆಳೆದು
ಅದುವೆ ಪ್ರೀತಿಯು

ಸಾವಿರಾರು ಮೈಲಿನಿಂದ
ಹರಿದು ಬರುವ ರವಿಯ ಕಿರಣ
ಎಲೆಯ ಹಸಿರು ಮಾಡಿಯಾಡಿ
ಅದುವೆ ಪ್ರೀತಿಯು

ಹೂವು ಅರಳಿ ಚಿಟ್ಟೆ ಬರಲು
ಮಧುವ ಹೀರಿ ರಮಿಸುತಿರಲು
ಪರಾಗವಾಗಿ ಕಾಯಿಬಿಡಲು
ಅದುವೆ ಪ್ರೀತಿಯು

ಕಾಯಿ ಬಲಿತು ಬೆಳೆದು ನಿಲ್ಲಲು
ಮನುಜ ಕಿತ್ತು ತಿನ್ನಲು ಅದನು
ಎಸೆದ ಬೀಜ ಮತ್ತೆ
ಭುವಿಯ ಮಣ್ಣ ಸೇರಿತು

ತಾನು ತನ್ನದು ಎನುವ ಮನುಜ
ತನ್ನದಷ್ಟೆ ನೋಡೊ ಮನುಜ
ತನ್ನ ತಾನೆ ಕೇಳ ಬೇಕು
ಪ್ರೀತಿ ಯಾವುದು?

             ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.