ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ- 27
ಹಿಂದೂ ದೇವತೆಗಳಲ್ಲಿ ಅತ್ಯಂತ ಗೂಢನೂ ನಿಗೂಢನೂ ಆದ ಶಿವ ಅರಿತರೂ ಅರಿಯಲಾಗದ ಅಗಾಧ ರೂಪ. ಆತನನ್ನು ಹಿಡಿದಿಡುವ ಸಣ್ಣ ಪ್ರಯತ್ನ ಈ ಶಿವರಾತ್ರಿಗಾಗಿ
ಶಿವ ಎಂದರೆ ಮಂಗಲ, ಶುಭ 🕉 ಎಂಬ ಅರ್ಥವಿದೆ. ತಥ ಶಿವನ ಆರಾಧನೆ ಮಂಗಲವನ್ನೂ ಶುಭವನ್ನೂ ಉಂಟುಮಾಡುತ್ತದೆ.
ಶಿವ ಪಂಚಭೂತಗಳಾದ ಅಗ್ನಿ 🔥 ವಾಯು 🌬 ಅಪ್ (ನೀರು) 🌊, ಆಕಾಶ ☄ಮತ್ತು ಭೂಮಿಯಿಂದ🌍 ಸಂಪೂರ್ಣನು. ಹಾಗಾಗಿ ಶಿವನ ಹಣೆಯ ಕಣ್ಣಿನ 👁ಬೆಂಕಿ ಅಗ್ನಿಯನ್ನೂ 🔥, ಶಿವನ ಕುತ್ತಿಗೆಯಲ್ಲಿರುವ ಹಾವು🐍 ಗಾಳಿಯನ್ನೂ 🌬(ಗಾಳಿ- ಹಾವು ಗಾಳಿ ಸೇವಿಸಿ ಬದುಕಬಲ್ಲದು), ಶಿವನ ತಲೆಯ ಮೇಲಿನ ಗಂಗೆ 👧 ನೀರನ್ನೂ 🌊(ಅಪ್- ನೀರು), ಶಿವನ ನೀಲಿ ಗಂಟಲು ಆಕಾಶವನ್ನೂ ☄ (ಆಕಾಶ- ಆಕಾಶದ ನೀಲಿ ಬಣ್ಣ) ಹಾಗೂ ಶಿವನ ತೊಡೆಯ ಮೇಲಿನ ಗೌರಿ👱♀ ಭೂಮಿಯನ್ನೂ🌍 (ಭೂಮಿ- ಆಕೆ ಪರ್ವತ ರಾಜನ ಮಗಳು) ಆತನಿಗೆ ಆರೋಪಿಸಿ ಪಂಚಭೂತಗಳಿಂದ ಆತ ಸಂಪೂರ್ಣ ಎಂಬ ತತ್ವವನ್ನು ತಿಳಿಸುತ್ತದೆ.
ಚಂದ್ರ 🌝ಮನೋಕಾರಕ, ಮನಸ್ಸಿನ 🧠ವಿಕಾರತೆಯಲ್ಲಿ ಚಂದ್ರನ 🌜ಪ್ರಭಾವ ಹೆಚ್ಚು ಶಿವನು ಮನಕ್ಲೇಶ🙇🏽♂ ನಿವಾರಿಸುವನು ತನ್ಮೂಲಕ ಮಂಗಲವನ್ನು ಕರುಣಿಸುತ್ತಾನೆ. ಹಾಗಾಗಿ ಆತನ ಶಿರದಲ್ಲಿ ಅರ್ಧ ಚಂದ್ರನನ್ನು 🌛ಧಾರಣೆ ಮಾಡಿದ್ದಾನೆ.
ಆತ ಜಗತ್ತಿಗೆ ಒಡೆಯನಾದ ಪಶುಪತಿ 🐮🙌🏼ಆದರೆ ಆತ ಸ್ಮಶಾನವಾಸಿ ☠👻.
ಆತನ ಮಡದಿ ಸ್ವಯಂ ಅನ್ನಪೂರ್ಣೆ 🍛ಆದರೆ ಆತ ಕಪಾಲಿ ( ಕಪಾಲ ಅರ್ಥಾತ್ ತಲೆಬುರುಡೆ) 💀ಹಿಡಿದು ಭಿಕ್ಷೆ ಎತ್ತುತ್ತಾನೆ.
ಆತ ರುದ್ರಭೀಕರ👺 ಆದರೆ ಜನ ಆತನನ್ನು ಶಿವ 🙌🏼(ಶಿವ ಅರ್ಥಾತ್ ಒಳಿತು, ಸಂತೋಷ) ಎನ್ನುತ್ತಾರೆ.
ಹಣೆಯ ಕಣ್ಣು 👁ಬೆಂಕಿ🔥 ಉಗುಳಿದರೆ ತಲೆಯಮೇಲೆ ಶಾಂತ ಗಂಗೆ 💦
ಹೀಗೆ, ಒಂದಕ್ಕೊಂದು ತಾಳೆಯಾಗದ ಅಥವಾ ತಾಳೆಯಾಗಿಯೂ ನಮಗೆ ಅರ್ಥವಾಗದ ❓ಅಮೋಘ ರೂಪು ಆತನದು. ಸನಾತನ ಧರ್ಮದ ಬೇರಾವ ದೇವರಲ್ಲೂ ಇಂತಹ ವೈರುಧ್ಯ ಕಾಣಲಾಗದು.
ನೀರು 💦ಮತ್ತು ಭೂಮಿ🏜 ಬದುಕಿಗೆ ಅನಿವಾರ್ಯ. ಅವೆರಡನ್ನೂ ಶಿವನ ಪತ್ನಿಯರಾಗಿ ಸಮೀಕರಿಸಿದೆ. ತಲೆಯ ಮೇಲೆ ಗಂಗೆಯನ್ನು ಹೊತ್ತು ಆತ ಗಂಗಾಧರ. ಶಿವನ ಎದೆಯಲಿ ಗೌರಿಯನ್ನು ಧಾರಣೆಮಾಡಿ ಆತ ಗೌರಿ ಶಂಕರ. ಈ ಗೌರಿಶಂಕರನ ಮಗನಾಗಿ ಹುಟ್ಟುವ ಗಣಪತಿ ಕ್ರಿಷಿಯ ಮೂರ್ತರೂಪವಾಗಿ ಮೈದೆಳೆಯುತ್ತಾನೆ. ನೀರು💦 ಮತ್ತು ಭೂಮಿಯಿಂದ 🏜ಸಮ್ರದ್ಧ ಕ್ರಿಷಿಯಾದಾಗ🌱🌴🌳 ಶುಭ ಲಾಭಗಳು ಉಂಟಾಗುತ್ತವೆ. ತಸ್ಮಾತ್ ಶಿವನ ಈ ಎಲ್ಲಾ ತತ್ವಗಳ ಕೇಂದ್ರನಾಗಿದ್ದಾನೆ.
ಶಿವನ ಸಂಸಾರವೂ ವೈರುಧ್ಯಗಳ ಸಂಗಮಸ್ಥಾನ. ಶಿವನ ವಾಹನ ನಂದಿಗೆ🐂 ಪಾರ್ವತಿಯ ವಾಹನ ಸಿಂಹ🦁 ವೈರುಧ್ಯ, ಗಣಪತಿಯ ವಾಹನ ಇಲಿಯ 🐁ಮೇಲೆ ಶಿವನ ಕುತ್ತಿಗೆಯ ಹಾವಿನ 🐍ವೈರುಧ್ಯ, ಹಾವಿನ🐍 ಮೇಲೆ ಶಿವನ ಮತ್ತೋರ್ವ ಮಗ ಸ್ಕಂದನ ( ಸುಬ್ರಹ್ಮಣ್ಯ) ನವಿಲಿನ🦃 ವೈರುಧ್ಯ ಹೀಗೆ ಎಲ್ಲಾ ವೈರುಧ್ಯಗಳ ನಡುವೆ ಶಿವ ಶಾಂತನಾಗಿ ಕುಳಿತ ಭಂಗಿ ಬದುಕಿನ ಜಂಜಡಕ್ಕೊಂದು ಪಾಠವೇ ಸರಿ
ಒಲಿದವರಿಗೆ ಏನನ್ನೂ ಕೊಡುವ ದೇವ. ರಾವಣಗೆ 🤴🏻ತನ್ನ ಆತ್ಮವನೇ 👤ನೀಡಿದ ಭಕ್ತರ ಭಕ್ತ. ಭಕ್ತಿ ಮಾರ್ಗದಲ್ಲಿ ಸಾಗುವವರಿಗೆ ಸುಲಭದಲ್ಲಿ ಅರ್ಥವಾಗುವನು ಎಂಬ ಸಂದೇಶ ನೀಡುತ್ತದೆ.
ಕಾಮನನ್ನೆ 🌈ತನ್ನ ಮೂರನೇ ಕಣ್ಣಿಂದ 👁ಧಹಿಸಿದ🔥 ಮದನಾರಿ. ಮೂರನೇ ಕಣ್ಣು ಲೌಕಿಕ ಆಸಕ್ತಿಯಿಂದ ಅಲೌಕಿಕದೆಡೆಗೆ ತೆರೆದುಕೊಳ್ಳುವ ಸಂದೇಶ ನೀಡುತ್ತದೆ.
ದಕ್ಷನ ಮಗಳಾದ ದಾಕ್ಷಾಯಿನಿ (ಸತಿ) 👰🏻ಯಜ್ಞದಲ್ಲಿ 🔥 ದಹಿಸಿಕೊಂಡಾಗ ಸತಿಯ ಪತಿ ಶಿವ ರುದ್ರಭೀಕರ. ಪತಿ ಪತ್ನಿಯ ಪ್ರೇಮಾನುರಾಗದ ಸಂಕೇತ ಸತಿ ಮತ್ತು ಈಶ.
ಅಪಸ್ಮಾರ ( ಅಜ್ಞಾನದ ಸಂಕೇತದ ರಾಕ್ಷಸ) ಅಸುರನನ್ನು ತನ್ನ ತಾಂಡವ ನ್ರತ್ಯದ ಮೂಲಕ ಕಾಲಿನಡಿ ಮೆಟ್ಟಿ ನಿಂತ ಶಿವ ಜಗತ್ತಿಗೆ ನೀಡಿದ ಸಂದೇಶ ಅಜ್ಞಾನ 🌑ಕೇವಲ ಜ್ಞಾನದಿಂದ🌕 ಮಾತ್ರ ನಾಶಮಾಡಲು ಶಕ್ತ.
ಶಿವನ ಅರ್ಧ ದೇಹವನ್ನು ತನ್ನ ಮಡದಿಗೆ ನೀಡಿ ಪ್ರಕ್ರತಿ ಪುರುಷ ತತ್ವವನ್ನು ತಿಳಿಸಿ ಅರ್ಧನಾರೀಶ್ವರನಾದ.
ಆತ ಲೇಪಿಸಿದ ಚಿತಾಭಸ್ಮ ಎಲ್ಲಾ ನಾಶದ ನಂತರ ಉಳಿದು ಹೋಗುವ ಆತ್ಮವನ್ನು👻 ಪ್ರತಿನಿಧಿಸುತ್ತದೆ. ಆತ ಸಕಲ ಜೀವದ ಲಯಕಾರಕ.
ಶಿವರಾತ್ರಿ ಬರೀ ಜಾಗರಣೆ ಅಲ್ಲ ಅದು ರಾತ್ರಿಯ ಕತ್ತಲಿನ ಆಚೆಗಿನ ಬೆಳಕಿನ ಅರ್ಥ ಹುಡುಕುವ ಸೊಗಸು. ಕಾಲ 🌏( ಲಯ) ಅರ್ಥಾತ್ ಶಿವ, ಕಾಲದ (ಲಯದ) ಆಚೆಗಿನ ಜೀವದ ನಿಜಾರ್ಥವನ್ನು ತೋರಿಸುವುದೇ ಶಿವರಾತ್ರಿಯ ಉದ್ದೇಶ. ಬದುಕಿನ ಗುಟ್ಟು ಮತ್ತು ಅಮರತ್ವವನ್ನು ಪಾರ್ವತಿಗೆ ಅಮರನಾಥದಲ್ಲಿ ಭೋಧಿಸಿದ ಶಿವ ಜೀವ ಮತ್ತು ಕಾಲದ ನಡುವಿನ ಸೇತುವೆಯಾಗಿದ್ದಾನೆ.
ಇಂತಹ ಶಿವ ತಲೆಯ ಮೇಲೆ ಗಂಗೆ ಹೊತ್ತು ಗಂಗಾಧರ, ಚಂದ್ರನನು ಧರಿಸಿ ಚಂದ್ರಶೇಖರ, ಹಣೆಗಣ್ಣ ಫಾಲಾಕ್ಷಾ, ಗೌರಿ ಸಮೇತ ಗೌರೀಶ, ಭಸ್ಮ ಲೇಪಿತ ಭಸ್ಮಧಾರಿ, ಸ್ಮಶಾನವಾಸಿ, ತ್ರಿಶೂಲ ಹಿಡಿದ ತ್ರಿಶೂಲಪಾಣಿ, ಬಿಲ್ವದ ಎಲೆಗೂ ಒಲಿಯುವ ಭಕ್ತಸಾಗರ, *ಯೋಗಿಗಳ ಯೋಗಿ ಯೋಗೀಶ*
ಈ ಶಿವರಾತ್ರಿ ಬದುಕಿನ ಅರ್ಥವನ್ನು ನಮಗೆ ತೋರಿಸಿ ಕೊಡಲಿ ಎಂದು ಆಶಿಸುತ್ತಾ *ಶಿವ ತ್ರಯೋದಶಿಯ ಶುಭಾಶಯಗಳು*
ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.