ಹೂವು ಬಳ್ಳಿಗೆ ಒಂದು ದಿನದ ಬಾಂಧವ್ಯದ ಕಥೆ ಹೇಳಿತು,
ಬಳ್ಳಿ ಮರಕ್ಕೆ ಹಬ್ಬಿಹರಡಿದ ಆಸರೆಯ ಕಥೆ ಹೇಳಿತು,
ಮರ ಭುವಿಗೆ ಬೇರಿಳಿಸಿದ ಆಶ್ರಯದ ಕಥೆ ಹೇಳಿತು,
ಭುವಿ ನೀರಿಗೆ ತಂಪಿರಿಸಿದ ಸಮೃದ್ಧಿಯ ಕಥೆ ಹೇಳಿತು,
ನೀರು ಮುಗಿಲಿಗೆ ಹೊತ್ತೊಯ್ದ ಸ್ನೇಹದ ಕಥೆ ಹೇಳಿತು,
ಮುಗಿಲು ಬಿಸಿಲಿಗೆ ಹೀರಿ ಮೇಲೇರಿಸಿದ ಪ್ರೀತಿಯ ಕಥೆ ಹೇಳಿತು,
ಬಿಸಿಲು ನೀರ ಹಿಡಿದಿಟ್ಟ ಭುವಿಗೆ ಒಲವಿನ ಕಥೆ ಹೇಳಿತು,
ಭುವಿ ಮರವು ನೀರ ಸೆಲೆಯುಳಿಸಿದ ನಲುಮೆಯ ಕಥೆ ಹೇಳಿತು,
ಮರ ಬುಡವ ತಂಪಿಟ್ಟ ಬಳ್ಳಿಗೆ ಹಬ್ಬಿ ಹರವಿದ ಕಥೆ ಹೇಳಿತು,
ಬಳ್ಳಿ ಹೂವಿಗೆ ಬೀಜವಾಗಿ ಮತ್ತಷ್ಟು ಬಳ್ಳಿ ಹಬ್ಬಿಸಿದ ಅನಂತತೆಯ ಕಥೆ ಹೇಳಿತು.
ಮಾನವ ನೀನು ಸಿಮೆಂಟಿನಿಂದ ಮನೆ ಮನಗಳ ನಡುವೆ ದ್ವೇಷದ ಗೋಡೆ ಕಟ್ಟುವ ಕಥೆ ಹೇಳು.
ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.