Tuesday, 9 October 2018

ಶೈಲಪುತ್ರಿ ನಮಸ್ತುಭ್ಯಂ

ಆಶ್ವಯುಜ ಮಾಸದ ಶುಕ್ಲಪಕ್ಷವು ನವರಾತ್ರಿಯೊಂದಿಗೆ ಆರಂಭವಾಗುತ್ತದೆ  *ನವರಾತ್ರಿಯು* ನಮ್ಮ ದೇಹದ ನವದ್ವಾರಗಳ ಮೂಲಕ ಬರುವ ಕಾಮ ಕ್ರೋಧ, ಲೋಭ, ಮೋಹ, ಮದ, ಮತ್ಸರ ಮುಂತಾದ *ನಕಾರಾತ್ಮಕತೆಯ ಮೇಲಿನ ಸಕಾರಾತ್ಮಕತೆಯ ವಿಜಯದ ಸಂಕೇತವಾಗಿದೆ*
ಇಂತಹ ನವರಾತ್ರಿಯನ್ನು ನವದುರ್ಗೆಯ ಆರಾಧನೆಯೊಂದಿಗೆ ಆಚರಿಸಲಾಗುತ್ತದೆ. ತನ್ಮೂಲಕ *ಸ್ತ್ರೀ ಶಕ್ತಿಯನ್ನು ಆರಾಧಿಸುವ ಕೆಲವೇ ಧರ್ಮಗಳಲ್ಲಿ ಸನಾತನ ಧರ್ಮವು ಪ್ರಮುಖವಾಗಿದೆ*

*ಶೈಲಪುತ್ರಿ*: ನವರಾತ್ರಿ ಆರಂಭದ ಮೊದಲ ದಿನ ಪೂಜಿಸಲ್ಪಡುವ  ಶೈಲಪುತ್ರಿ.. ಹೆಸರೇ ಸೂಚಿಸುವಂತೆ *ಶೈಲ* ಅಂದರೆ *ಪರ್ವತ*  *ಪುತ್ರಿ* ಎಂದರೆ ಮಗಳು ಅರ್ಥಾತ್ *ಶೈಲಪುತ್ರಿ* ಎಂದರೆ ಪರ್ವತರಾಜನ ಮಗಳು *ಪಾರ್ವತಿ*.

ಭಾರತೀಯ ಪರಿಕಲ್ಪನೆಯಲ್ಲಿ ಪರ್ವತಗಳು ಎಂದಿಗೂ ಅಚ್ಚರಿಯ ಸಂಗತಿಗಳಾಗಿವೆ. ಇದೇ ಪರ್ವತದ ತಪ್ಪಲಿನಲ್ಲೇ ಹರಿವ ನದಿಯ ತಟದಲ್ಲಿ ಜನಜೀವನ ಬದುಕು ಕಟ್ಟಿಕೊಂಡಿತು. ಪರ್ವತದ ತಪ್ಪಲಿನಲ್ಲಿ ಯಥೇಚ್ಛ ಹುಲ್ಲುಗಾವಲು ಪಶುಗಳಿಗೆ ಆಹಾರವನ್ನಿತ್ತವು. ಇದೇ ಪರ್ವತದ ತಪ್ಪಲಿನಲ್ಲಿ ಗದ್ದೆ ಬಯಲನು ಮಾಡಿಕೊಂಡ ಜನರಿಗೆ ಸಮೃದ್ಧಿ ದೊರೆಯಿತು. ಆ ಸಮೃದ್ಧಿಯನ್ನೇ ಪಾರ್ವತಿ ಎಂದು ಕರೆದರು.

ಈಕೆ ಒಂದು ಕೈಯಲ್ಲಿ *ತ್ರಿಶೂಲ* ಮತ್ತೊಂದು ಕೈಯಲ್ಲಿ *ಕಮಲವನ್ನು* ಹಿಡಿದು ಹಣೆಯಲ್ಲಿ *ಅರ್ಧ ಚಂದ್ರನನ್ನು*  ಧರಿಸಿರುತ್ತಾಳೆ....

ಪರ್ವತನ ಮಗಳಾದ್ದರಿಂದ ಈಕೆ ಸಂಪೂರ್ಣವಾಗಿ *ಪ್ರಕೃತಿ ತತ್ವದವಳು*.... ಈಕೆಯ ವಾಹನ ನಂದಿ ಆದುದರಿಂದ ಈಕೆಯನ್ನು *ವೃಷಾರೂಢ* ಎಂದೂ ಕರೆಯಲಾಗುತ್ತದೆ... ಈಕೆ ಚಂದ್ರನನ್ನು  ಪ್ರತಿನಿಧಿಸುತ್ತಾಳೆ. ಚಂದ್ರ  ಮನೋಕಾರಕ  ಆದುದರಿಂದ *ಈಕೆಯ ಸ್ಮರಣೆ ಮನಃಕ್ಲೇಶವನ್ನು ನಿವಾರಿಸುತ್ತದೆ* ಎಂದು ಅರ್ಥೈಸಲಾಗುತ್ತದೆ.

*ಯೋಗದಲ್ಲಿ ಈಕೆ ಮೂಲಾಧಾರ ಚಕ್ರವನ್ನು ಪ್ರತಿನಿಧಿಸುತ್ತಾಳೆ*

ಈಕೆಯನ್ನು
"ವಂದೆ ವಾಂಚಿತ ಲಾಭಾಯ ಚಂದ್ರಾರ್ಧ ಕ್ರಿತ ಶೇಖರಂ
ವ್ರಿಶಾರೂಢಂ ಶೂಲಧರಾಂ ಶೈಲಪುತ್ರಿ ಯಶಸ್ವಿನೀಂ" ಎಂದು ಸ್ತುತಿಸಿ ಫಲವನ್ನು ಪಡೆಯಬಹುದು...

ನವರಾತ್ರಿಯ ಪ್ರಥಮ ದಿನ ತಾಯಿ ಶೈಲಪುತ್ರಿ ತಮ್ಮೆಲರಿಗೂ ಸಂಮಂಗಲವನ್ನು ಕರುಣಿಸಲಿ... 🙏🙏

ಪರಿಕಲ್ಪನೆ: "ಯೋಗೀಶ್ ಮಲ್ಲಿಗೆಮಾಡು"

No comments:

Post a Comment

Note: only a member of this blog may post a comment.