*ಬ್ರಹ್ಮಚಾರಿಣಿ*: ನವರಾತ್ರಿಯ ಎರಡನೇ ದಿನ ಪೂಜಿಸಲ್ಪಡುವವಳು ಬ್ರಹ್ಮಚಾರಿಣಿ . *ಬ್ರಹ್ಮ* ಎಂದರೆ *ಜ್ಞಾನ*, *ಚಾರಿಣಿ* ಎಂದರೆ *ನಡೆಯುವುದು, ಆಚರಿಸುವುದು* ಎಂದು ಅರ್ಥ. ತಥಾ *ಬ್ರಹ್ಮಚಾರಿಣಿ ಎಂದರೆ ಜ್ಞಾನ ಮಾರ್ಗದೆಡೆಗೆ ನಡೆಯುವವಳು ಎಂದು*.
ಹಿಂದಿನ ಜನುಮದ ಪತಿಯಾದ ಶಿವನನ್ನು ಪಡೆಯಲು ತಪಸ್ಸನ್ನಾಚರಿಸುವ ಶೈಲಪುತ್ರಿಯ (ಪಾರ್ವತಿಯ) ಮುಂದಿನ ರೂಪವೇ ಬ್ರಹ್ಮಚಾರಿಣಿ.
*ಬ್ರಹ್ಮ*ಎಂದರೆ *ಜ್ಞಾನ,* *ಶಿವ* ಎಂದರೆ *ಸಂತೋಷ.* *ಬ್ರಹ್ಮಜ್ಞಾನ ಲೌಕಿಕ ಭೋಗದ ಆಸೆಯನ್ನು ನಾಶಪಡಿಸುತ್ತದೆ* ತನ್ಮೂಲಕ *ಬ್ರಹ್ಮಜ್ಞಾನ ಸಂತೋಷವನ್ನ ಅರ್ಥಾತ್ ಶಿವನನ್ನು ಪಡೆಯಲು ಸಹಕಾರಿ.....* ಇದನ್ನು ಈ ರೂಪ ಸಂಕೇತಿಸುತ್ತದೆ.....
ಈಕೆಗೆ ಅಪರ್ಣ ಎಂಬ ಹೆಸರೂ ಇದೆ (ಪರ್ಣ ಎಂದರೆ ಎಲೆ. ಶಿವನಿಗಾಗಿ ಒಣ ಬಿಲ್ವದ ಎಲೆಗಳನ್ನು ತಿಂದು ತಪಸ್ಸನ್ನಾಚರಿಸಿದ ಈಕೆ ಕೊನೆಗೆ ಆ ಎಲೆಗಳನ್ನೂ ತ್ಯಜಿಸಿದಳು ಹಾಗಾಗಿ ಈಕೆಗೆ ಅಪರ್ಣಾ ಎಂಬ ಹೆಸರಾಯಿತು ಎಂದು ತಿಳಿದು ಬರುತ್ತದೆ)
ಈಕೆಗೆ ಉಮಾ ಎಂಬ ಹೆಸರೂ ಇದೆ (ತಪಸ್ಸಿನಿಂದ ಕೃಶಳಾದ ಈಕೆಯನ್ನು ಕಂಡ ಈಕೆಯ ತಾಯಿ "ಉಮಾ" ಎಂದು ಹೇಳಿದಳು ಅರ್ಥಾತ್ *( ಉ : ಹೇ ಮಗು, ಮಾ: ಈ ರೀತಿ ಮಾಡದಿರು)* ಆದುದರಿಂದ ಆಕೆಗೆ *ಉಮಾ* ಎಂಬ ಹೆಸರಿದೆ.
ಅರ್ಥಾತ್ ಅಲೌಕಿಕ ಸಾಧನೆ ಎನ್ನುವುದು ಕಠೋರ ತಪಸ್ಸು, ಎಲ್ಲಾ ರೀತಿಯ ಸುಖಾಭಿಲಾಷೆಗಳನ್ನು ತ್ಯಜಿಸಿದಾಗ ಮಾತ್ರ ಒಲಿಯುತ್ತದೆಂದು ಇದು ಸೂಚಿಸುತ್ತದೆ.
ಪರ್ವತದ ತಪ್ಪಲಿನಲ್ಲಿ ನೆಲೆ ಕಂಡುಕೊಂಡ ಮಾನವನಿಗೆ ಪರ್ವತದ ತಪ್ಪಲಿನಲ್ಲಿ ಸಿಕ್ಕ ಸಮೃದ್ಧಿಯೇ ಪರ್ವತ ರಾಜನ ಮಗಳಾದ ಪಾರ್ವತಿಯಾಗಿ ಕಂಡಿತು. ಜ್ಞಾನ ಮಾರ್ಗದ ಮೂಲಕ ಕೃಷಿಯನ್ನು ಒಲಿಸಿಕೊಂಡು ಇನ್ನೂ ಹೆಚ್ಚಿನ ಸಮೃದ್ಧಿಗಳಿಸಿದ ಮಾನವನಿಗೆ ಆ ಜ್ಞಾನ ರೂಪವೇ ಬ್ರಹ್ಮಚಾರಿಣಿಯಾಗಿ ಕಂಡದ್ದರಲ್ಲಿ ಯಾವ ಆಶ್ಚರ್ಯವಿಲ್ಲ.
ಈಕೆ ಒಂದು ಕೈಯಲ್ಲಿ ಜಪಮಣಿ ಮತ್ತೊಂದರಲ್ಲಿ ಕಮಂಡಲ ಹಿಡಿದಿರುವಳು, ರುದ್ರಾಕ್ಷಿಯನ್ನು ಕೊರಳಲ್ಲಿ ಧರಿಸುತ್ತಾಳೆ...... *ಜಪಮಣಿ, ಕಮಂಡಲ, ರುದ್ರಾಕ್ಷಿಗಳು ಜ್ಞಾನದ ಸಂಕೇತವಾಗಿದೆ*.
ಈಕೆ *ಸಾತ್ವಿಕ ರೂಪದವಳಾಗಿದ್ದು ಈಕೆ ಜ್ಞಾನ ತತ್ವದವಳು*.
*ಯೋಗದಲ್ಲಿ ಇವಳು ಸ್ವಾಧಿಷ್ಟಾನ ಚಕ್ರವನ್ನು ಪ್ರತಿನಿಧಿಸುತ್ತಾಳೆ* 🐍.....
ಜೀವನದಲ್ಲಿ ಶಾಂತಿ, ನೆಮ್ಮದಿ, ಪರಮಾನಂದಕ್ಕೆ ಈಕೆಯ ಸ್ತುತಿ ಲಾಭದಾಯಕ......
*ಧದಾನ ಕರಪದ್ಮಾಭ್ಯಾಯಾಂ| ಅಕ್ಷಮಾಲ ಕಮಂಡಲು|| ದೇವಿ ಪ್ರಸೀದತು ಮಾ| ಬ್ರಹ್ಮಚಾರಿಣ್ಯಾನುತ್ತಮಾ||*
ನವರಾತ್ರಿಯ ಶುಭ
ಸಂದರ್ಭದಲ್ಲಿ ಬ್ರಹ್ಮಚಾರಿಣಿ ಶುಭವನ್ನು ಕರುಣಿಸಲಿ.....🙏🙏
ಪರಿಕಲ್ಪನೆ: "ಯೋಗೀಶ್ ಮಲ್ಲಿಗೆಮಾಡು"
No comments:
Post a Comment
Note: only a member of this blog may post a comment.