ಚಂದ್ರ ಮತ್ತು ಘಂಟೆಗೆ ವಿಶೇಷ ವಿಸ್ತಾರದ ಹೊಳಹು ಇದೆ. ಚಂದ್ರ ಮನೋಕಾರಕ ಅರ್ಥಾತ್ ಮನಸ್ಸಿಗೆ ಸಂಬಂಧಪಟ್ಟವನು. ಹುಣ್ಣಿಮೆಗೆ ಕಡಲು ಉಕ್ಕೇರುವ, ಮನಸ್ಸಿನ ಮೇಲೆ ಪ್ರಭಾವವಿರುವುದನ್ನು ಸ್ಮರಿಸಬಹುದು.
ಘಂಟೆ ದುಷ್ಟಶಕ್ತಿಗಳು, ನಕಾರಾತ್ಮಕ ಶಕ್ತಿ (negative energy) ಅನ್ನು ದೂರ ಮಾಡುವಂತದ್ದು. ಹಾಗಾಗಿ ಮನಸ್ಸಿನ ವಿಕಾರಗಳನ್ನು ನಕಾರಾತ್ಮಕತೆಯನ್ನು ಸಕಾರಾತ್ಮಕ ವಿಚಾರಗಳಿಂದ ಸರಿಪಡಿಸುವ ದ್ಯೋತಕವಾಗಿ ಚಂದ್ರಘಂಟಾ ರೂಪವು ಕಂಡು ಬರುತ್ತದೆ.
ತಸ್ಮಾತ್ *ಚಂದ್ರಘಂಟಾಳನ್ನು ಸ್ತುತಿಸಿದರೆ ಮನಸ್ಸಿಗೆ ಸಂಬಂಧಿಸಿದ ಕ್ಲೇಶ, ದುಃಖ, ವಿಕಾರ ನಾಶವಾಗುತ್ತದೆ.
ನವರಾತ್ರಿಯ ಮೂರನೇ 3 ದಿನ ಪೂಜಿಸುವ ದೇವಿ *"ಚಂದ್ರಘಂಟಾ"*: *ಪಾರ್ವತಿಯು (ಶೈಲಪುತ್ರಿ) ಬ್ರಹ್ಮಚಾರಿಣಿಯಾಗಿ* ಶಿವನ ಕುರಿತು ತಪಸ್ಸಾಚರಿಸಿ ಶಿವನನ್ನು ಒಲಿಸಿಕೊಳ್ಳುತ್ತಾಳೆ .
ಸ್ಮಶಾನವಾಸಿಯಂತೆ, ಭೈರಾಗಿಯಂತೆ ಶಿವನನ್ನು ಕಂಡು ಪಾರ್ವತಿಯ ತಾಯಿ ರೂಪ ಲಾವಣ್ಯದಿಂದ ಕೂಡಿದ ಮಗಳನ್ನು ಇಂತಹ ಶಿವನು ಮದುವೆಯಾಗುವುದೇ ಎಂದುಕೊಂಡು ಭೀತಗೊಂಡು ಮೂರ್ಛಿತಳಾಗುತ್ತಾಳೆ.
ಈ ಸಂದರ್ಭದಲ್ಲಿ ಪಾರ್ವತಿಯು ಅಲಂಕಾರಭರಿತಳಾಗಿ ಬಹುಸುಂದರವಾದ ರೂಪವನ್ನು ಧಾರಣೆಮಾಡುತ್ತ, ತನ್ನ ಹಣೆಯಲ್ಲಿ ಅರ್ಧಚಂದ್ರಾಕೃತಿಯನ್ನು ಧರಿಸಿದಳು ಎಂಬ ಉಲ್ಲೇಖವಿದೆ. ಆ ಅರ್ಧಚಂದ್ರವು ಹಣೆಯಲ್ಲಿ ಘಂಟೆಯಂತೆ ಓಲಾಡುತಿತ್ತು ಆದುದರಿಂದ ಆಕೆಯನ್ನು *"ಚಂದ್ರಘಂಟಾ"* 🌙🔔ಎಂದು ಸ್ತುತಿಸಿದರು.
*ಚಂದ್ರಘಂಟಾ: ‘ಚಂದ್ರಃ ಘಂಟಾಯಾಂ ಯಸ್ಯಾ ಸಾ ಚಂದ್ರಘಂಟಾ' ಅಂದರೆ ಚಂದ್ರನು ಯಾರ ದ್ವಾರದಲ್ಲಿ ಸ್ಥಿರವಾಗಿದ್ದಾನೆಯೋ ಅವಳೇ ಚಂದ್ರಘಂಟಾ.. 🌙🔔*
ಹಣೆಯಲ್ಲಿ ಧರಿಸಿದ ಚಂದ್ರಘಂಟೆಯ ಸದ್ದಿಗೆ 🔔ಹಲವು ದುಷ್ಟ ಶಕ್ತಿಗಳು ನಕಾರಾತ್ಮಕ ಶಕ್ತಿ (negative energy) ನಾಶವಾದವು ಎಂಬ ಉಲ್ಲೇಖವಿದೆ.
ಚಂದ್ರಘಂಟಾ ರೂಪವನ್ನು
ನೋಡಿದ ಶಿವ ತನ್ನ ಭೈರಾಗಿ ರೂಪವನ್ನು ತ್ಯಜಿಸಿ ಅಲಂಕೃತನಾದ ಸುಂದರಾಂಗನ ರೂಪ ಧಾರಣೆ ಮಾಡಿದನು. *ಹೆಣ್ಣು ಗಂಡನ್ನು ಪರಿವರ್ತಿಸಬಲ್ಲಳು ಎಂದೂ ಇದನ್ನು ಅರ್ಥೈಸಬಹುದು. ಮನಸ್ಸು ವಿಕಾರರಹಿತವಾದಾಗ ಬೈರಾಗಿಯಂತ ಬದುಕು ಸುಂದರವಾಗುತ್ತದೆ ಎಂದೂ ಅರ್ಥೈಸಬಹುದು.* ಶಿವನನ್ನು (ಸಂತೋಷವನ್ನು) ಒಲಿಸಿಕೊಳ್ಳಲು ಸಕಾರಾತ್ಮಕ ಚಿಂತನೆ ಅಗತ್ಯ. ಚಂದ್ರ ಎಂಬ ನಕಾರಾತ್ಮಕತೆಯನ್ನು ಘಂಟೆ ಎಂಬ ಸಕಾರಾತ್ಮಕತೆಯಿಂದ ಬದಲಾಯಿಸುವ ತತ್ವವಿದು. ಆಗ ಶಿವ ಎಂಬ ಸಂತೋಷ ಒಲಿಯುತ್ತದೆ.
ಪರ್ವತದ ತಪ್ಪಲಿನ ಸಮೃದ್ಧಿಯನ್ನು ಪಾರ್ವತೀ ಎಂದು ಕೊಂಡಾಡಿದ ಮಾನವ, ಜ್ಞಾನ ಎಂಬ ಬ್ರಹ್ಮಚಾರಿಣಿ ತಪಸ್ಸಿನಂತೆ ಕೃಷಿಯನ್ನು ಒಲಿಸಿ ಬದುಕು ಕಂಡುಕೊಂಡ. ಆತನ ಶ್ರಮಕ್ಕೆ ಶಿವ ಎಂಬ ಸಂತೋಷ ಒಲಿದರೂ ಆಗೊಮ್ಮೆ ಈಗೊಮ್ಮೆ ಪ್ರಕೃತಿಯ ಎದುರು ಸೋತು ಕೃಷಿ ಕೈಕೊಟ್ಟು ಮಾನಸಿಕ ಕ್ಲೇಶವನುಭವಿಸುತ್ತಿದ್ದ. ಆಗ ಚಂದ್ರಘಂಟಾ ಎಂಬ ತತ್ವದಂತೆ ಪ್ರಕೃತಿಯ ಸವಾಲುಗಳನ್ನು ಸಕಾರಾತ್ಮಕವಾಗಿ ಎದುರಿಸಿ ಮತ್ತೆ ಬದುಕು ಕಟ್ಟಿ ಭೀಕರ ಶಿವನಿಂದ ಸುಂದರ ಶಿವನನ್ನು ಪಡೆದುಕೊಂಡ.
*ಪ್ರಕೃತಿ 🍃🌿ಮತ್ತು ಪುರುಷ 👤 ತತ್ವವನ್ನು ಇದು ತಿಳಿಯಪಡಿಸುತ್ತದೆ....*
*ಯೋಗದಲ್ಲಿ ಈಕೆ ಮಣಿಪುರ ಚಕ್ರವನ್ನು ಪ್ರತಿನಿಧಿಸುತ್ತಾಳೆ 🐍....*
ಹತ್ತು ಕೈಗಳಲ್ಲಿ ಖಡ್ಗ, ತ್ರಿಶೂಲ, ಕಮಲ, ಕಮಂಡಲ ಮುಂತಾದವನ್ನು ಧರಿಸಿದ್ದು, ಈಕೆಯನ್ನು *ಚಾಮುಂಡ, ಚಂಡಿಕಾ* ಎಂಬೂದಾಗಿಯೂ ಕರೆಯುತ್ತಾರೆ
ಈಕೆಯನ್ನು *"ಪಿಂಡಜಪ್ರವರಾರೂಢಾಚಂದಕೋಪಾಸ್ತ್ರಕೈರ್ಯುತಾ |ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||"* ಎಂದು ಸ್ತುತಿಸಿ ಮನಃ ಕ್ಲೇಶ ದೂರ ಮಾಡಿ ನೆಮ್ಮದಿ ಕಾಣಬಹುದು....
ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ಸುಖ, ನೆಮ್ಮದಿ ಕರುಣಿಸಲಿ......
ಪರಿಕಲ್ಪನೆ: "ಯೋಗೀಶ್ ಮಲ್ಲಿಗೆಮಾಡು"
No comments:
Post a Comment
Note: only a member of this blog may post a comment.