ನವರಾತ್ರಿಯಲ್ಲಿ ಐದನೇ 5ದಿನ ಪೂಜಿಸಲ್ಪಡುವವಳು *"ಸ್ಕಂದ ಮಾತ"*
ದಕ್ಷ ಯಜ್ಞದಲ್ಲಿ ದಾಕ್ಷಾಯಿನಿಯು ದೇಹತ್ಯಾಗ ಮಾಡಿದ ನಂತರ ಶಿವನು ದಕ್ಷಪುತ್ರಿಯ ನೆನಪಲ್ಲಿ ಭೈರಾಗಿಯಂತೆ ಊರೂರೂ ಅಲೆಯ ತೊಡಗಿದ
*ತಾರಕಾಸುರ*ನೆಂಬ ರಾಕ್ಷಸ ಇನ್ನು ಶಿವನಿಗೆ ಮದುವೆ ಆಗಲಾರದು ಎಂಬ ಕಲ್ಪನೆಯಲ್ಲಿ *ಶಿವನ ಮಗನಿಂದ ತನಗೆ ಸಾವು ಬರಲಿ* ಎಂದು ವರ ಪಡೆದನು.
ಪಾರ್ವತಿಯಾಗಿ *(ಶೈಲಪುತ್ರಿಯಾಗಿ)* ಮರುಜನ್ಮ ಪಡೆದ ದಾಕ್ಷಾಯಿನಿ ಶಿವನಿಗಾಗಿ *ಬ್ರಹ್ಮಚಾರಿಣಿಯಾಗಿ* ತಪವನ್ನಾಚರಿಸಿ ಶಿವ ಆಕೆಯನ್ನು *ಚಂದ್ರಘಂಟ* ರೂಪದಲ್ಲಿ ವರಿಸಿದನು
ಇದನ್ನರಿತ ತಾರಕಾಸುರ ಶಿವನಿಗೆ ಮಗುವಾದರೆ ತನ್ನ ಮರಣ ನಿಶ್ಚಿತ ಎಂದರಿತು *ಶಿವನ ಸಂತಾನದ ನಾಶದ ಕಡೆಗೆ ಯೋಚಿಸಿದನು*
ಶಿವನ ವೀರ್ಯವನ್ನು ತಾರಕಾಸುರನಿಂದ ಕಾಪಾಡಲು ಅಗ್ನಿ ದೇವ ಕೊಂಡೊಯ್ಯುತಿರಲು ಅದು ಆಕಾಶಮಾರ್ಗದಲ್ಲಿ ಕೆಳಗುರುಳಿತು ಮತ್ತು ಅದನ್ನು ಪಕ್ಷಿಯೊಂದು ನುಂಗಿ ಅದರ ತೇಜಸ್ಸಿನ ಬಿಸಿ ತಡೆಯಲಾಗದೆ *ಕೃತ್ತಿಕಾ ಲೋಕದ ನದಿಯಲ್ಲಿ ಮುಳುಗಿತು*
ನದಿಯಲ್ಲಿ ಸ್ನಾನ ಮಾಡುತ್ತಿದ್ದ *ಆರು ಜನ ಕೃತ್ತಿಕೆಯರ ಗರ್ಭ ಆ ಸಂದರ್ಭ ಈ ವೀರ್ಯದಿಂದ ಫಲಿಸಿತು....* ಆರು ತಾಯಂದಿರಿಗೆ ಒಬ್ಬನಾಗಿ ಹುಟ್ಟಿದವನೇ *"ಸ್ಕಂದ"*. ಕೃತ್ತಿಕೆಯರು ಮಗುವನ್ನು ಹೆತ್ತು ಪಾರ್ವತಿಗೆ ವಾಪಾಸು ಮಾಡಿದರು.* ಎಂದು ಉಲ್ಲೇಖಿಸಿದೆ
*ಕೃತ್ತಿಕೆಯರಿಗೆ ಜನಿಸಿದನಾದರಿಂದ ಕಾರ್ತಿಕೇಯ* ಎಂದೂ *ನವಿಲ ವಾಹನನಾದರಿಂದ ಮಯೂರವಾಹನ* ಎಂದು, *ಆರು ಮುಖ ಇರುವುದರಿಂದ ಆರ್ಮೊಗಂ, ಷಡಾನನ* ಎಂದು *ಸುಬ್ರಹ್ಮಣ್ಯನನ್ನು* ಹಲವು ನಾಮದಿಂದ ಕರೆಯುತ್ತಾರೆ.
ಮಗನನ್ನು ಮರಳಿ ಪಡೆದ ಪಾರ್ವತಿ ಸ್ಕಂದನನ್ನು ತನ್ನ ತೊಡೆಯಲ್ಲಿ ಕುಳ್ಳಿರಿಸಿದಳು ಈ ರೂಪವೇ *"ಸ್ಕಂದ ಮಾತಾ"*👩👶....
ಸ್ಕಂದನನ್ನು ತೊಡೆಯಲ್ಲಿ ಕುಳ್ಳಿರಿಸಿ, ಎರಡು ಕೈಗಳಲ್ಲಿ ಕಮಲವನ್ನು ಧಾರಣೆ ಮಾಡಿ ಅಭಯಮುದ್ರಳಾದ ಸ್ಕಂದಮಾತ ಪದ್ಮಾಸನ ರೂಪದಲ್ಲಿ ಸ್ಥಿತಳಾಗಿದ್ದಾಳೆ. ಆಕೆಯನ್ನು *ಪದ್ಮಾಸನ ದೇವಿ* ಎಂತಲೂ ಕರೆಯುತ್ತಾರೆ.
ಈ ರೂಪವನ್ನು ಪೂಜಿಸುವುದರಿಂದ ದ್ವಿಗುಣ ಫಲ ಪಡೆಯಬಹುದು.... ಕಾರಣ *ಈಕೆಯನ್ನು ಪೂಜಿಸಿದರೆ ಸ್ಕಂದನನ್ನು ಪೂಜಿಸಿದಂತೆ ತನ್ಮೂಲಕ ಸ್ಕಂದ ಹಾಗೂ ಸ್ಕಂದ ಮಾತ ಇಬ್ಬರ ಆಶೀರ್ವಾದ ಪಡೆಯಬಹುದು.*
ನವರಾತ್ರಿಯು *ತಾಯಿ ರೂಪದಲ್ಲಿರುವ ದುರ್ಗೆಯನ್ನು ಪೂಜಿಸುವ ವಿಶೇಷ ಪರ್ವ.* ಸಕಲ ಜೀವಿಯನ್ನೂ ಮಕ್ಕಳ ರೂಪದಲ್ಲಿ ಪೊರೆಯುವ ತಾಯಿಯ ಕಲ್ಪನೆಯೇ ಅಮೋಘವಾದುದು. *ತಸ್ಮಾತ್ ನವರಾತ್ರಿ ತಾಯಿ ಮಗುವಿನ ಬಾಂಧವ್ಯವನ್ನೂ ಪ್ರತಿನಿಧಿಸುತ್ತದೆ.*
ಪರ್ವತದ ತಪ್ಪಲಿನಲ್ಲಿ ಬದುಕು ಕಟ್ಟಿಕೊಂಡು ಆ ಶೈಲದ ಸಮೃದ್ಧಿಯನ್ನೇ ಶೈಲಪುತ್ರಿ ಎಂದು ಕರೆದು, ಜ್ಞಾನ ಎಂಬ ಬ್ರಹ್ಮದ ಮೂಲಕ ಕೃಷಿಸಿದ್ಧಿಗಳಿಸಿ ಅದನ್ನೇ ಬ್ರಹ್ಮಚಾರಿಣಿ ಎಂದು ಭಾವಿಸಿ, ಕಷ್ಟಗಳಿಗೆ ಕುಗ್ಗದೆ ಇಡೀ ವಿಶ್ವವನ್ನು ಧಾರಣೆ ಮಾಡಿದ ಶಿವನೆಂಬ ಸಂತಸವನ್ನು ಸಕಾರಾತ್ಮಕವಾಗಿ ಪಡೆದು ಅದನ್ನೇ ಮನಸ್ಸಿನ ತತ್ವವಾದ ಚಂದ್ರಘಂಟಾ ಎಂದು ಪರಿಭಾವಿಸಿ, ಯಶಸ್ಸು ದಕ್ಕಿದಾಗ ಎಲ್ಲೆಲ್ಲೂ ಹೊಮ್ಮಿದ ನಗುವನ್ನೇ ಕೂಷ್ಮಾಂಡ ಎಂದು ಕರೆದು, ಈ ಸೃಷ್ಟಿ ಕಾರ್ಯ ಮುಂದುವರೆಯಲು, ವಂಶ, ಕುಲ, ಪಂಗಡ ಬೆಳೆಯಲು, ಪರ್ವತದ ತಪ್ಪಲಿನಲ್ಲಿ ಬದುಕು ಕಟ್ಟಿ ಮುಂದರಿಯಲು ಮಕ್ಕಳೇ ಭವಿಷ್ಯ ಹಾಗೂ ತಾಯಿಯೇ ಪ್ರಧಾನ ಎಂದರಿತ ಮಾನವ ತಾಯಿ ಮಗುವನ್ನು ಸ್ಕಂದ ಮಾತಾ ರೂಪದಲ್ಲಿ ಕಂಡುಕೊಂಡ ಬಗೆ ಅನನ್ಯ.
*ಯೋಗದಲ್ಲಿ ಈಕೆ ವಿಶುದ್ಧ ಚಕ್ರವನ್ನು ಪ್ರತಿನಿಧಿಸುತ್ತಾಳೆ🐍*
ಸೃಷ್ಟಿ ತತ್ವವನ್ನು 🌱ಈ ರೂಪ ತಿಳಿಸುತ್ತದೆ .... ಸೃಷ್ಟಿಯಲ್ಲಿ ತಾಯಿ ಮತ್ತು ಮಗುವಿನ ಪಾತ್ರವನ್ನು ವಿಶದಪಡಿಸುತ್ತದೆ...
*ಸಿಂಹಾಸನಾ ಗತಾನಿತ್ಯಂ ಪದ್ಮಾಶ್ರಿತ ಕರದ್ವಯಂ| ಶುಭದಸ್ತು ಸದಾ ದೇವಿ ಸ್ಕಂದ ಮಾತ ಯಶಸ್ವಿನಿ||* ಎಂದು ಸ್ತುತಿಸಿ ಸಕಲ ಸಂಮಂಗಲ ಪಡೆಯಬಹುದು....
ಪರಿಕಲ್ಪನೆ: "ಯೋಗೀಶ್ ಮಲ್ಲಿಗೆಮಾಡು"
No comments:
Post a Comment
Note: only a member of this blog may post a comment.