ತಂಪು ಸೆಲೆಯ ನೀರಿನಲೆಯ
ತೊರೆಯ ಮಂದ ನಾದವು
ಹರಿವ ನೀರ ಸುರಿವ ನೆನಪ
ಕುಳಿತು ಕಳೆವ ಒಲವೊಳು
ಕಮಲ ಪಾದ ನೀರೊಳಿಟ್ಟು
ಬೆಳ್ಳಿ ಗೆಜ್ಜೆ ಘಲು ಘಲು
ಕೆಂಪು ದಾಸವಾಳ ಬಿರಿದು
ಪಾದ ಸುತ್ತ ಸುತ್ತಲು
ಯಾವ ಸಂಜೆ ಯಾವ ಘಳಿಗೆ
ನೀನು ಎಂದು ಬರುವೆಯೊ
ಕಾದು ಕೂತು ಕಾಯುತಿರುವೆ
ತಂಪು ನೀರ ದಡದೊಳು
ಬಂದು ಬಿಡು ಬೇಗ ನೀನು
ಜೊತೆಗೆ ಸಂಜೆ ಕಳೆಯುವ
ಸರಿದು ಬಿಡಲಿ ಕಾಲ ಹೀಗೆ
ನೀರೊಳದ್ದಿ ಪಾದವ
ನೀರಿಗಿಟ್ಟ ಪಾದದಲ್ಲಿ
ಬೆಳ್ಳಿಗೆಜ್ಜೆ ಸುತ್ತಿದೆ
ಕಮಲ ಪಾದವನ್ನು ನೋಡು
ಕೆಂಪು ಹೂವು ಮುತ್ತಿದೆ
ಯೋಗೀಶ್ ಮಲ್ಲಿಗೆಮಾಡು
ಮೇಲೆ ಕೆಳಗೆ ಮಾಡಿಯೂ ಓದ ಬಹುದಾದ ಕವಿತೆ ಇದು
ಹರಿವ ನೀರ ಸುರಿವ ನೆನಪ
ಕುಳಿತು ಕಳೆವ ಒಲವೊಳು
ತಂಪು ಸೆಲೆಯ ನೀರಿನಲೆಯ
ತೊರೆಯ ಮಂದ ನಾದವು
ಕೆಂಪು ದಾಸವಾಳ ಬಿರಿದು
ಪಾದ ಸುತ್ತ ಸುತ್ತಲು
ಕಮಲ ಪಾದ ನೀರೊಳಿಟ್ಟು
ಬೆಳ್ಳಿ ಗೆಜ್ಜೆ ಘಲು ಘಲು
ಕಾದು ಕೂತು ಕಾಯುತಿರುವೆ
ತಂಪು ನೀರ ದಡದೊಳು
ಯಾವ ಸಂಜೆ ಯಾವ ಘಳಿಗೆ
ನೀನು ಎಂದು ಬರುವೆಯೊ
ಸರಿದು ಬಿಡಲಿ ಕಾಲ ಹೀಗೆ
ನೀರೊಳದ್ದಿ ಪಾದವ
ಬಂದು ಬಿಡು ಬೇಗ ನೀನು
ಜೊತೆಗೆ ಸಂಜೆ ಕಳೆಯುವ
ಕಮಲ ಪಾದವನ್ನು ನೋಡು
ಕೆಂಪು ಹೂವು ಮುತ್ತಿದೆ
ನೀರಿಗಿಟ್ಟ ಪಾದದಲ್ಲಿ
ಬೆಳ್ಳಿಗೆಜ್ಜೆ ಸುತ್ತಿದೆ.
ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.