Thursday, 31 December 2020

ಕಾಲ

ಕಾಲ ಅಸೀಮವಾದುದು, ಅನಂತವಾದುದು, ಅಗಣಿತವಾದುದು.
ಗಣಿತಕ್ಕೆ ಸಿಕ್ಕಷ್ಟನ್ನೇ ಕಾಲದ ಪರಿಧಿಗೆ ತಂದು, ವಿಭಜಿಸಿ, ಅದಕ್ಕೊಂದಷ್ಟು ಗಂಟೆ, ನಿಮಿಷ, ಘಳಿಗೆಗಳನ್ನು ಆರೋಪಿಸಿ ಭೂಮಿಯ ಸುತ್ತನ್ನು ಅಳೆದು ತೂಗಿ ವರ್ಷಗಳ ಲೆಕ್ಕಾಚಾರದಲ್ಲಿ ಕಳೆಯುತ್ತಿರುವವರು ನಾವು.

ಪ್ರತಿ ದಿನವೂ ಹೊಸತೇ ಆದರೂ ಒಂದಷ್ಟು ದಿನಗಳನ್ನೆಲ್ಲ ಒಟ್ಟು ಮಾಡಿ ಒಂದು ತುದಿಯಿಂದ ಮತ್ತೊಂದು ಕೊನೆವರೆಗೂ ಸೇರಿಸಿ ಕಟ್ಟಿ ವರ್ಷವೆಂದರೆ ಇಲ್ಲಿಂದಿಲ್ಲಿಗೆ ಎಂದು ಚೌಕಟ್ಟನ್ನು ಹಾಕಿದ್ದೇವೆ. ಯುಗಾದಿಯೊ, ದೀಪಾವಳಿಯೊ, ಮೊಹರಮ್ಮೊ ಇನ್ನೊಂದು ಮತ್ತೊಂದೊ ಎಲ್ಲವೂ ಅಷ್ಟೇ, ಕಟ್ಟಿ ಹಾಕಲಾಗದ ಕಾಲವನ್ನು ಭ್ರಮಿಸಿ ಹಿಡಿದು ಲೆಕ್ಕ ಹಾಕಿದಂತಹುದು. ಗಾಳಿಯನ್ನು ಕೈಯಲ್ಲಿ ಹಿಡಿಯುವ ವ್ಯರ್ಥ ಪ್ರಯತ್ನ.ಆದರೂ,
ಪ್ರತಿ ದಿನವೂ ಹೊಸತಾದರೂ, ನಾಳೆ ವ್ಯವಹಾರದ ದೃಷ್ಟಿಯಿಂದ ಈ ಲೋಕಕ್ಕೆ ಹೊಸ ವರುಷದ ಆರಂಭ!!

ಕಾಲಾತೀತನಾದ ಕಾಲಪುರುಷನ ಜೋಳಿಗೆಯಲ್ಲಿ ಬರುವ ಕಾಲವೆಲ್ಲ ಸುಖದ ಅಕ್ಷತೆಯನ್ನೇ ಹನಿಸಲಿ. ಶುಭವಾಗಲಿ.

-ನಕ್ಷತ್ರಮೌನಿ

No comments:

Post a Comment

Note: only a member of this blog may post a comment.