ಪೀತಾಂಬರವನುಟ್ಟ ಕೃಷ್ಣನನ್ನಪ್ಪಿಹುದು ಮನ
ಬಟ್ಟೆಯನೆ ಬಿಸುಟ "ಅಕ್ಕ"ನನ್ನೊಪ್ಪಿಹುದು ಮನ
ಕರಿಗಂಬಳಿಯ ಹೊದ್ದ ಕನಕನನ್ನಪ್ಪಿಹುದು ಮನ
ಬಟಬಯಲಲಿ ಜಿನನ ಬೆತ್ತಲನ್ನೊಪ್ಪಿಹುದು ಮನ
ಮೊಳೆ ಹೊಡೆದ ಅರೆಮೈಯ್ಯ ಕ್ರಿಸ್ತನನ್ನಪ್ಪಿಹುದು ಮನ
ತಲೆಯ ವಸ್ತ್ರವೊ, ಹೆಗಲ ಶಾಲೊ
ಬಟ್ಟೆ ಬಟ್ಟೆಯೆಂದೇಕೆ ಬಟ್ಟೆಗೆಡುವಿರೊ (ದಾರಿ ತಪ್ಪುವಿರೊ) ಕಾಣೆ
ಕಣ್ಣ ಬಟ್ಟೆಯ ಸರಿಸಿ, ಆತ್ಮ ಬಟ್ಟೆಯ (ದಾರಿಯ) ಅರಸಿ
ಬಣ್ಣ ಬಟ್ಟೆಯ ಮೀರಿ ಜ್ಞಾನ ಸಿಗಲಿ.
ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.